For Quick Alerts
  ALLOW NOTIFICATIONS  
  For Daily Alerts

  ರಚಿತಾ ಜೊತೆ ಡಾಲಿ ಧನಂಜಯ್ 'ಮಾನ್ಸೂನ್ ರಾಗ'

  |

  ಸ್ಯಾಂಡಲ್ ವುಡ್ ಡಾಲಿ ಅಂತಾನೇ ಖ್ಯಾತಿಗಳಿಸಿರುವ ಧನಂಜಯ್ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚಿಗೆಷ್ಟೆ 'ಬಡವ ರಾಸ್ಕಲ್' ಚಿತ್ರದ 'ಉಡುಪಿ ಹೋಟೆಲ್...' ಮೂಲಕ ಸದ್ದು ಮಾಡುತ್ತಿದ್ದ ಧನಂಜಯ್ ಡಿಂಪಲ್ ಕ್ವೀನ್ ರಚಿತಾ ರಾಮ್ ಜೊತೆ ಮಾನ್ಸೂನ್ ರಾಗ ಹಾಡುತ್ತಿದ್ದಾರೆ. ಹೌದು, ಧನಂಜಯ್ ಮತ್ತು ರಚಿತಾ ನಟನೆಯ ಹೊಸ ಸಿನಿಮಾಗೆ 'ಮಾನ್ಸೂನ್ ರಾಗ' ಎಂದು ಟೈಟಲ್ ಇಡಲಾಗಿದ್ದು, ಚಿತ್ರದ ಟೀಸರ್ ಬಿಡುಗಡೆಯಾಗಿದೆ.

  ಅಂದಹಾಗೆ ಧನಂಜಯ್ ಮತ್ತು ರಚಿತಾ ರಾಮ್ ಮೊದಲ ಬಾರಿಗೆ ಅಭಿಮಾನಿಗಳ ಮುಂದೆ ಬರ್ತಿದ್ದಾರೆ. ಸ್ಯಾಂಡಲ್ ವುಡ್ ನ ಈ ಫ್ರೆಶ್ ಜೋಡಿಯನ್ನು ತೆರೆಮೇಲೆ ನೋಡಲು ಅಭಿಮಾನಿಗಳು ಸಹ ಕಾತರರಾಗಿದ್ದಾರೆ. ಸದ್ಯ ಬಿಡುಗಡೆಯಾಗಿರುವ ಮಾನ್ಸೂನ್ ರಾಗ ಟೀಸರ್ ಅಭಿಮಾನಿಗಳ ನಿರೀಕ್ಷೆ ಮತ್ತು ಕುತೂಹಲವನ್ನು ಹೆಚ್ಚಿಸಿದೆ.

  ಅಂದಹಾಗೆ ಮಾನ್ಸೂನ್ ರಾಗ ಚಿತ್ರಕ್ಕೆ ರಮೇಶ್ ಅರವಿಂದ್ ನಟನೆಯ ಪುಷ್ಪಕ ವಿಮಾನ ಖ್ಯಾತಿಯ ನಿರ್ದೇಶಕ ರವೀಂದ್ರನಾಥ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ವಿಖ್ಯಾತ್ ನಿರ್ಮಾಣದಲ್ಲಿ ಸಿನಿಮಾ ಮೂಡಿಬರುತ್ತಿದೆ. ರವೀಂದ್ರನಾಥ್ ನಿರ್ಮಾಪಕ ವಿಖ್ಯಾತ್ ಮತ್ತು ರಚಿತಾ ರಾಮ್ 'ಪುಷ್ಕಕ ವಿಮಾನ' ಸಿನಿಮಾ ಮೂಲಕ ಮತ್ತೆ ಒಂದಾಗಿದ್ದಾರೆ.

  ಚಿತ್ರದಲ್ಲಿ ರಚಿತಾ ವಿಭಿನ್ನ ಪಾತ್ರದಲ್ಲಿ ನಟಿಸಿದ್ದಾರೆ. ಇದುವರೆಗೂ ಕಾಣಿಸಿಕೊಳ್ಳಲದ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದ ಟೀಸರ್ ನೋಡಿದ್ರೆ ವೇಶ್ಯೆಯ ಪಾತ್ರಕ್ಕೆ ಬಣ್ಣಕ್ಕೆ ಹಚ್ಚಿದ್ದಾರೆ ಎನ್ನುವುದು ಮೇಲ್ನೋಟಕ್ಕೆ ಕಾಣಿಸುತ್ತಿದೆ. ಇನ್ನು ನಟ ಧನಂಜಯ್ ಮಾಸ್ ಅಂಡ್ ಕ್ಲಾಸ್ ಎರಡು ಅವತಾರದಲ್ಲಿ ಮಿಂಚಿದ್ದಾರೆ. ಆಕ್ಷನ್ ದೃಶ್ಯದಿಂದ ಪ್ರಾರಂಭವಾಗಿವು ಟೀಸರ್ ಕುತೂಹಲ ದುಪ್ಪಟ್ಟು ಮಾಡಿದೆ.

  ಈಗಾಗಲೇ ಚಿತ್ರದ ಬಹುತೇಕ ಚಿತ್ರೀಕರಣ ಮುಕ್ತಾಯವಾಗಿದೆ. ಧನಂಜಯ್ ಮತ್ತು ರಚಿತಾ ಪಾತ್ರದ ಚಿತ್ರೀಕರಣ ಮುಕ್ತಾಯವಾಗಿದೆ ಎನ್ನುವ ಮಾಹಿತಿ ತಿಳಿದುಬಂದಿದೆ. ಇನ್ನು ಚಿತ್ರದಲ್ಲಿ ದಕ್ಷಣ ಭಾರತದ ಖ್ಯಾತ ಕಲಾವಿದರು ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಆದರೆ ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಬಹಿರಂಗ ಪಡಿಸಿಲ್ಲ ಸಿನಿಮಾತಂಡ.

  ಇನ್ನು ಈ ಸಿನಿಮಾ ರೆಟ್ರೋ ಶೈಲಿಯಲ್ಲಿ ಮೂಡಿಬಂದಿದ್ದು, ಚಿತ್ರೀಕರಣ ಸಹ ತಂಡಕ್ಕೆ ದೊಡ್ಡ ಸವಾಲ್ ಆಗಿತ್ತು. ಕುಂದಾಪುರ, ಆಗುಂಬೆ, ಶೃಂಗೇರಿ, ಗೋವಾ ಸೇರಿದಂತೆ ಅನೇಕ ಕಡೆ ಚಿತ್ರೀಕರಣ ಮಾಡಲಾಗಿದೆ. ಸದ್ಯ ಟೀಸರ್ ಮೂಲಕ ಅಭಿಮಾನಿಗಳ ಹಾರ್ಟ್ ಬೀಟ್ ಹೆಚ್ಚಿಸಿರುವ ಮಾನ್ಸೂನ್ ರಾಗ ಯಾವಾಗ ತೆರೆಗೆ ಬರಲಿದೆ ಎಂದು ಕಾದು ನೋಡಬೇಕು.

  ಇನ್ನು ನಟ ಧನಂಜಯ್ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಕನ್ನಡ ಮಾತ್ರವಲ್ಲದೇ ತಮಿಳು ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇತ್ತೀಚಿಗಷ್ಟೆ ಬಡವ ರಾಸ್ಕಲ್ ಸಿನಿಮಾದ ಹಾಡು ಬಿಡುಗಡೆಯಾಗಿದ್ದು, ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ವಾಸುಕಿ ವೈಭವ್ ಸಂಗೀತ ಸಂಯೋಜನೆ ಮಾಡಿರುವ ಈ ಹಾಡಿಗ ಧನಂಜಯ್ ಅವರೆ ಸಾಹಿತ್ಯ ಬರೆದಿದ್ದಾರೆ.

  ಇನ್ನು ಡಾಲಿ ಬಳಿ ಸಲಗ, ಡಾಲಿ. ಹೆಡ್ ಬುಶ್, ರತ್ನನ್ ಪ್ರಪಂಚ, ಬಡವ ರಾಸ್ಕಲ್, ಭೈರಾಗಿ, ತೆಲುಗಿನ ಪುಷ್ಪ ಸಿನಿಮಾ ಧನಂಜಯ್ ಬಳಿ ಇವೆ. ಇನ್ನು ನಟಿ ರಚಿತಾ ರಾಮ್ ಕೂಡ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

  ಜೋಗಿ ಪ್ರೇಮ್ ನಿರ್ದೇಶನದ ಏಕ್ ಲವ್ ಯಾ, 100, ತೆಲುಗಿನ ಸೂಪರ್ ಮಚ್ಚಿ, ವೀರಂ, ಲವ್ ಯು ರಚ್ಚು, ಮ್ಯಾಟ್ನಿ, ಏಪ್ರಿಲ್, ಲಿಲ್ಲಿ, ಶಬರ್ ಸರ್ಚಿಂಗ್ ರಾವಣ, ರವಿ ಬೋಪಣ್ಣ, ಡಾಲಿ, ಪಂಕಜ ಕಸ್ತೂರಿ ಮತ್ತು ಸೀರೆ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ರಚಿತಾ ಕೊನೆಯದಾಗಿ ಶಿವರಾಜ್ ಕುಮಾರ್ ನಾಯಕನಾಗಿ ಕಾಣಿಸಿಕೊಂಡಿರುವ ಆಯುಷ್ಮಾನ್ ಭವ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು.

  English summary
  Actor Dhananjay and Rachitha Ram starrer Monsoon Raga movie teaser release.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X