For Quick Alerts
  ALLOW NOTIFICATIONS  
  For Daily Alerts

  Happy Birthday Dhananjay: ಧನಂಜಯ್‌ಗೆ ವಿಶ್ ಮಾಡಿದ ಮಲಯಾಳಂ ಸ್ಟಾರ್ ನಟ ದುಲ್ಕರ್ ಸಲ್ಮಾನ್

  |

  ಸ್ಯಾಂಡಲ್ ವುಡ್ ಡಾಲಿ ಎಂದೇ ಖ್ಯಾತಿಗಳಿಸಿರುವ ನಟ ಧನಂಜಯ್ ಅವರಿಗೆ ಇಂದು (ಆಗಸ್ಟ್ 23) ಹುಟ್ಟುಹಬ್ಬದ ಸಂಭ್ರಮ. ಚಂದನವನದ ಬಹುಬೇಡಿಕೆಯ ನಟ ಧನಂಜಯ್ ಈ ಬಾರಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ. ಪ್ರತಿವರ್ಷ ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಸಂಭ್ರಮಿಸುತ್ತಿದ್ದ ಧನಂಜಯ್ ಕಳೆದ ವರ್ಷ ಮತ್ತು ಈ ಬಾರಿ ಹುಟ್ಟುಹಬ್ಬ ಸಂಭ್ರಮಕ್ಕೆ ಬ್ರೇಕ್ ಹಾಕಿದ್ದಾರೆ. ಕಾರೊನಾ ಕಾರಣದಿಂದ ಅಪಾರ ಸಂಖ್ಯೆಯ ಅಭಿಮಾನಿಗಳ ನಡುವೆ ಕೇಕ್ ಕತ್ತರಿಸಿ ಸಂಭ್ರಮಿಸುತ್ತಿದ್ದ ಕ್ಷಣ ಮಾಯವಾಗಿದೆ.

  ಆದರೆ ಸಾಮಾಜಿಕ ಜಾಲತಾಣದ ಮೂಲಕವೇ ಅಭಿಮಾನಿಗಳು ಹುಟ್ಟುಹಬ್ಬನ್ನು ಸಂಭ್ರಮಿಸುತ್ತಿದ್ದಾರೆ. ಡಾಲಿಗೆ ವಿಶ್ ಮಾಡಿ ಸಂತಸ ಪಡುತ್ತಿದ್ದಾರೆ. ಅಭಿಮಾನಿಗಳು, ಸ್ನೇಹಿತರು, ಚಿತ್ರರಂಗದ ಗಣ್ಯರಿಂದ ಶುಭಾಶಯಗಳ ಸುರಿಮಳೆಯೇ ಬರುತ್ತಿದೆ. ಇನ್ನು ವಿಶೇಷ ಎಂದರೆ ಧನಂಜಯ್ ಅವರಿಗೆ ಕೇವಲ ಕನ್ನಡದ ಕಲಾವಿದರು ಮಾತ್ರವಲ್ಲದೇ ಪರಭಾಷೆಯ ಕಲಾವಿದರು ವಿಶ್ ಮಾಡುತ್ತಿದ್ದಾರೆ. ವಿಶೇಷ ಎಂದರೆ ಮಲಯಾಳಂ ಸ್ಟಾರ್ ನಟ ದುಲ್ಕರ್ ಸಲ್ಮಾನ್ ಕನ್ನಡದ ಡಾಲಿಗೆ ಹುಟ್ಟುಹಬ್ಬ ಶುಭಾಶಯ ತಿಳಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಧನಂಜಯ್ ಅವರಿಗೆ ವಿಶ್ ಮಾಡುವ ಜೊತೆಗೆ 'ಹೆಡ್ ಬುಷ್' ಟೀಸರ್ ಅನ್ನು ಶೇರ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮುಂದೆ ಓದಿ...

  ಧನಂಜಯ್‌ಗೆ ದುಲ್ಕರ್ ಸಲ್ಮಾನ್ ಶುಭಾಶಯ

  ಧನಂಜಯ್‌ಗೆ ದುಲ್ಕರ್ ಸಲ್ಮಾನ್ ಶುಭಾಶಯ

  ಟ್ವಿಟ್ಟರ್ ನಲ್ಲಿ ದುಲ್ಕರ್ ಸಲ್ಮಾನ್, "ಹುಟ್ಟುಹಬ್ಬದ ಶುಭಾಶಯಗಳು ಧನಂಜಯ್. ಹುಟ್ಟುಹಬ್ಬದ ದಿನ ಬೆಂಗಳೂರು ಭೂಗತ ಲೋಕದ ಡಾನ್ ಆಗಿದ್ದ ಎಂಪಿ ಜಯರಾಜ್ ಬಯೋಪಿಕ್ ಹೆಡ್ ಬುಷ್ ಚಿತ್ರದ ಫಸ್ಟ್ ಲುಕ್ ಟೀಸರ್ ಇಲ್ಲಿದೆ" ಎಂದು ಬರೆದುಕೊಂಡಿದ್ದಾರೆ.

  'ರತ್ನನ್ ಪ್ರಪಂಚ' ಚಿತ್ರಕ್ಕೂ ದುಲ್ಕರ್ ವಿಶ್

  'ರತ್ನನ್ ಪ್ರಪಂಚ' ಚಿತ್ರಕ್ಕೂ ದುಲ್ಕರ್ ವಿಶ್

  ಧನಂಜಯ್ ನಟನೆಯ ಟೀಸರ್ ಶೇರ್ ಮಾಡುತ್ತಿರುವುದು ಇದೇ ಮೊದಲಲ್ಲ. ಇತ್ತೀಚಿಗಷ್ಟೆ ಬಿಡುಗಡೆಯಾದ 'ರತ್ನನ್ ಪ್ರಪಂಚ' ಟೀಸರ್ ಅನ್ನು ಸಹ ದುಲ್ಕರ್ ಸಲ್ಮಾನ್ ಶೇರ್ ಮಾಡಿ ತಂಡಕ್ಕೆ ವಿಶ್ ಮಾಡಿದ್ದರು. ಇದೀಗ ಹೆಡ್ ಬುಷ್ ಟೀಸರ್ ಶೇರ್ ಮಾಡಿ ವಿಶ್ ಮಾಡಿರುವುದು ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ.

  ದುಲ್ಕರ್ ಜೊತೆ ಡಾಲಿ ಸಿನಿಮಾ?

  ದುಲ್ಕರ್ ಜೊತೆ ಡಾಲಿ ಸಿನಿಮಾ?

  ಅಂದಹಾಗೆ ಧನಂಜಯ್ ಮಲಯಾಳಂ ಸ್ಟಾರ್ ದುಲ್ಕರ್ ಸಲ್ಮಾನ್ ಜೊತೆ ಸಿನಿಮಾ ಮಾಡುತ್ತಿದ್ದಾರಾ ಎನ್ನುವ ಅನುಮಾನ ಅಭಿಮಾನಿಗಳಲ್ಲಿ ಶುರುವಾಗಿದೆ. ದುಲ್ಕರ್ ಸಿನಿಮಾದಲ್ಲಿ ಧನಂಜಯ್ ನಟನೆ ಮಾಡಿದ್ರು ಅಚ್ಚರಿ ಏನಿಲ್ಲ. ಧನಂಜಯ್‌ಗೆ ದುಲ್ಕರ್ ಅಭಿಮಾನಿಗಳು ಸಹ ಶುಭಾಶಯ ತಿಳಿಸುತ್ತಿದ್ದಾರೆ.

  ಹೆಡ್ ಬುಷ್ ಟೀಸರ್ ಗೆ ಉತ್ತಮ ಪ್ರತಿಕ್ರಿಯೆ

  ಹೆಡ್ ಬುಷ್ ಟೀಸರ್ ಗೆ ಉತ್ತಮ ಪ್ರತಿಕ್ರಿಯೆ

  ಇನ್ನು ಡಾಲಿ ಹುಟ್ಟುಹಬ್ಬದ ಪ್ರಯುಕ್ತ 'ಹೆಡ್ ಬುಷ್' ಸಿನಿಮಾದ ಟೀಸರ್ ಬಿಡುಗಡೆ ಮಾಡಲಾಗಿದೆ. ಈ ಟೀಸರ್ ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ. ಚಿತ್ರದಲ್ಲಿ ಧನಂಜಯ್ ಬೆಂಗಳೂರಿನ ಭೂಗತ ಲೋಕದಲ್ಲಿ ಡಾನ್ ಆಗಿ ಮೆರೆರಿದ್ದ ಎಂಪಿ ಜಯರಾಜ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸದ್ಯ ಹುಟ್ಟುಹಬ್ಬದ ಪ್ರಯುಕ್ತ ಬಿಡುಗಡೆಯಾಗಿರುವ ಟೀಸರ್ ನಲ್ಲಿ ಧನಂಜಯ್ ರೌಡಿ ಲುಕ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

  ಹೆಡ್ ಬುಷ್ ತಂಡದ ಬಗ್ಗೆ

  ಹೆಡ್ ಬುಷ್ ತಂಡದ ಬಗ್ಗೆ

  ಮಾಸ್ ಲುಕ್ ನಲ್ಲಿ ಕಾಣಿಸಿಕೊಂಡಿರುವ ಧನಂಜಯ್ ಮತ್ತೊಮ್ಮೆ ನಟ ರಾಕ್ಷಸನಾಗಿ ಅಬ್ಬರಿಸಿದ್ದಾರೆ. ಎಂ.ಪಿ ಜಯರಾಜ್ ಆಗಿ ಧನಂಜಯ್ ಅವರನ್ನು ತೆರೆಮೇಲೆ ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ. ಅಂದಹಾಗೆ ಚಿತ್ರಕ್ಕೆ ಅಗ್ನಿ ಶ್ರೀಧರ್ ಕಥೆ-ಚಿತ್ರಕಥೆ ಸಂಭಾಷಣೆ ಬರೆದಿದ್ದಾರೆ. ಶೂನ್ಯ ಎನ್ನುವ ಯುವ ಪ್ರತಿಭೆ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇನ್ನು ವಿಶೇಷ ಎಂದರೆ ಧನಂಜಯ್ ಜೊತೆ ಬಾಲಿವುಡ್ ನಟಿ ಪಾಯಲ್ ರಜಪೂತ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಹಿಂದಿ, ತೆಲುಗು, ತಮಿಳು ಮತ್ತು ಪಂಜಾಬಿ ಸಿನಿಮಾಗಳಲ್ಲಿ ಮಿಂಚಿರುವ ನಟಿ ಪಾಯಲ್ ಮೊದಲ ಬಾರಿಗೆ ಕನ್ನಡಕ್ಕೆ ಎಂಟ್ರಿ ಕೊಡುತ್ತಿದ್ದಾರೆ.

  ಧನಂಜಯ್ ಬಳಿ ಇರುವ ಸಿನಿಮಾಗಳು

  ಧನಂಜಯ್ ಬಳಿ ಇರುವ ಸಿನಿಮಾಗಳು

  ಧನಂಜಯ್ ಕನ್ನಡದ ಜೊತೆಗೆ ತೆಲುಗು ಮತ್ತು ತಮಿಳು ಸಿನಿಮಾಗಳಲ್ಲೂ ಬ್ಯುಸಿಯಾಗಿದ್ದಾರೆ. ತೆಲುಗಿನ ಬಹು ನಿರೀಕ್ಷೆಯ ಪುಷ್ಪ ಸಿನಿಮಾದಲ್ಲಿ ಧನಂಜಯ್ ನಟಿಸುತ್ತಿದ್ದಾರೆ. ಅಲ್ಲು ಅರ್ಜುನ್ ಎದುರು ವಿಲನ್ ಆಗಿ ಅಬ್ಬರಿಸುತ್ತಿದ್ದಾರೆ. ಈಗಾಗಲೇ ತೆಲುಗಿನಲ್ಲಿ ರಾಮ್ ಗೋಪಾಲ್ ವರ್ಮ ಅವರ ಸಿನಿಮಾದಲ್ಲಿ ಮಿಂಚಿದ್ದ ಡಾಲಿ ಇದೀಗ ಎರಡನೇ ಬಾರಿ ತೆಲುಗು ಪ್ರೇಕ್ಷಕರ ಮುಂದೆ ಹೋಗುತ್ತಿದ್ದಾರೆ. ಪುಷ್ಪ ಚಿತ್ರದಲ್ಲಿ ಡಾಲಿಯ ಅಬ್ಬರ ಹೇಗಿರಲಿದೆ ಎನ್ನುವುದು ಕುತೂಹಲ ಮೂಡಿಸಿದೆ.

  English summary
  Dhananjay Birthday: Malayalam Actor Dulquer Salmaan birthday wishes to Kannada Actor Dhananjay. He shares Head Bush teaser.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X