For Quick Alerts
  ALLOW NOTIFICATIONS  
  For Daily Alerts

  ಓಪನ್ ‌ಆಗಿಲ್ಲ 'ಗಂಧದ ಗುಡಿ' ರಿಲೀಸ್ ಡೇ ಬುಕಿಂಗ್; ತಡವಾಗಲು ಕಾರಣ ಆ ಎರಡು ಚಿತ್ರಗಳು!?

  |

  ಪುನೀತ್ ರಾಜ್ ಕುಮಾರ್ ಕನಸಿನ ಕೂಸು ಗಂಧದ ಗುಡಿ ಚಿತ್ರದ ಬಿಡುಗಡೆಗೆ ಕ್ಷಣಗಣನೆ ಆರಂಭಗೊಂಡಿದೆ. ನಾಡಿದ್ದು ( ಅಕ್ಟೋಬರ್ 28 ) ಗಂಧದಗುಡಿ ಚಿತ್ರ ಬೆಳ್ಳಿತೆರೆಗೆ ಅಪ್ಪಳಿಸಲಿದ್ದು ಬಿಡುಗಡೆ ದಿನಕ್ಕೆ ಸದ್ಯ ಕೇವಲ 2 ದಿನ ಮಾತ್ರ ಬಾಕಿ ಉಳಿದಿದೆ.

  ಇನ್ನು ಚಿತ್ರ ಬಿಡುಗಡೆಯ ಹಿಂದಿನ ದಿನ ಅಂದರೆ ನಾಳೆ ( ಅಕ್ಟೋಬರ್ 27, ಗುರುವಾರ ) ಸಂಜೆ ಬೆಂಗಳೂರು, ಮೈಸೂರು, ಮಂಗಳೂರು, ಶಿವಮೊಗ್ಗ, ತುಮಕೂರು ಹೀಗೆ ರಾಜ್ಯದ ಹಲವು ಪ್ರಮುಖ ನಗರ ಹಾಗೂ ಪಟ್ಟಣಗಳಲ್ಲಿ ಗಂಧದ ಗುಡಿ ಚಿತ್ರದ 50 ಪ್ರೀಮಿಯರ್ ಪ್ರದರ್ಶನಗಳನ್ನು ಏರ್ಪಡಿಸಲಾಗಿದೆ. ಈ ಮೂಲಕ ಅಪ್ಪು ಅಭಿನಯದ ಗಂಧದಗುಡಿ ಚಿತ್ರವನ್ನು ರಾಜ್ಯದ ವಿವಿಧೆಡೆ ಅಭಿಮಾನಿಗಳು ಬಿಡುಗಡೆಯ ಹಿಂದಿನ ದಿನವೇ ಕಣ್ತುಂಬಿಕೊಳ್ಳಲಿದ್ದಾರೆ.

  ಇನ್ನು ಸದ್ಯಕ್ಕೆ ಬೆಂಗಳೂರಿನ ಎಲ್ಲಾ ಪ್ರೀಮಿಯರ್ ಪ್ರದರ್ಶನಗಳು ಸೋಲ್ಡ್ ಔಟ್ ಆಗಿ ದಾಖಲೆ ಸೃಷ್ಟಿಯಾಗಿದೆ ಹಾಗೂ ಮೈಸೂರು ಮತ್ತು ಶಿವಮೊಗ್ಗದ ಗಂಧದಗುಡಿ ಪ್ರೀಮಿಯರ್ ಶೋಗಳು ಸಹ ಸಂಪೂರ್ಣವಾಗಿ ಸೋಲ್ಡ್ ಔಟ್ ಆಗಿವೆ. ಈ ಮೂಲಕ ಗಂಧದ ಗುಡಿ ಪ್ರೀಮಿಯರ್ ಶೋ ವಿಚಾರವಾಗಿ ಕರ್ನಾಟಕದಲ್ಲಿ ಈ ಹಿಂದೆ ಯಾವುದೇ ಚಿತ್ರವೂ ಮಾಡಿರದಂತಹ ದಾಖಲೆಯನ್ನು ತನ್ನ ಹೆಸರಿಗೆ ಬರೆದುಕೊಂಡಿದೆ. ಆದರೆ ಇದೇ ಸಮಯಕ್ಕೆ ಬುಕಿಂಗ್ ವಿಚಾರವಾಗಿ ಅಪ್ಪು ಅಭಿಮಾನಿಗಳಲ್ಲಿ ದೊಡ್ಡ ಮಟ್ಟದ ಬೇಸರವೂ ಉಂಟಾಗಿದೆ.

  ಇನ್ನೂ ಓಪನ್ ಆಗಿಲ್ಲ ಬಿಡುಗಡೆಯ ದಿನದ ಬುಕಿಂಗ್

  ಇನ್ನೂ ಓಪನ್ ಆಗಿಲ್ಲ ಬಿಡುಗಡೆಯ ದಿನದ ಬುಕಿಂಗ್

  ಈ ಸಮಯಕ್ಕೆ ( ಅಕ್ಟೋಬರ್ 26ರ ಬುಧವಾರದ ಬೆಳಗ್ಗೆ ) ಗಂಧದ ಗುಡಿ ಬಿಡುಗಡೆಯ ದಿನದ ( ಅಕ್ಟೋಬರ್ 28 ) ಅಡ್ವಾನ್ಸ್ ಬುಕಿಂಗ್ ಇನ್ನೂ ತೆರೆದಿಲ್ಲ. ಸುಮಾರು 50 ಪ್ರೀಮಿಯರ್ ಶೋ ಅಡ್ವಾನ್ಸ್ ಬುಕಿಂಗ್ ತೆರೆದಿರುವ ಗಂಧದ ಗುಡಿ ತಂಡ ಬಿಡುಗಡೆ ದಿನದ ಬುಕ್ಕಿಂಗ್ ತೆರೆಯದೇ ಇರುವುದು ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದೆ. ಈ ಹಿಂದೆ ಅಪ್ಪು ಅಭಿನಯದ ಚಿತ್ರಗಳ ಬಿಡುಗಡೆಯ ಸಂದರ್ಭದಲ್ಲಿ ಚಿತ್ರ ಬಿಡುಗಡೆಗೆ ಐದಾರು ದಿನ ಬಾಕಿ ಇರುವಾಗಲೇ ಬಿಡುಗಡೆ ದಿನದ ಅಡ್ವಾನ್ಸ್ ಬುಕಿಂಗ್ ತೆರೆಯಲಾಗುತ್ತಿತ್ತು. ಆದರೆ ಗಂಧದ ಗುಡಿ ಚಿತ್ರಕ್ಕೆ 2 ದಿನ ಮಾತ್ರ ಬಾಕಿ ಉಳಿದಿದ್ದರೂ ಬುಕಿಂಗ್ ತೆರೆಯದೇ ಇರುವುದು ಅಭಿಮಾನಿಗಳಿಗೆ ಬೇಸರ ತಂದಿದೆ.

  ಕಾಂತಾರ ಮತ್ತು ಹೆಡ್ ಬುಷ್ ಎಫೆಕ್ಟ್?

  ಕಾಂತಾರ ಮತ್ತು ಹೆಡ್ ಬುಷ್ ಎಫೆಕ್ಟ್?

  ಇನ್ನು ಗಂಧದಗುಡಿ ಬಿಡುಗಡೆಯ ದಿನದ ಬುಕಿಂಗ್ ತೆರೆಯದಿರಲು ಕಾಂತಾರ ಮತ್ತು ಹೆಡ್ ಬುಷ್ ಪರೋಕ್ಷವಾಗಿ ಕಾರಣವಾಗಿವೆ ಎಂದರೆ ತಪ್ಪಾಗಲಾರದು. ಏಕೆಂದರೆ ವಿಶ್ವಾದ್ಯಂತ ಅಬ್ಬರಿಸುತ್ತಿರುವ ಕಾಂತಾರ ಚಿತ್ರವನ್ನು ತೆಗೆದುಹಾಕುವುದು ಅಸಾಧ್ಯ, ಇನ್ನು ಕಳೆದ ವಾರವಷ್ಟೇ ತೆರೆಕಂಡಿರುವ ಹೆಡ್ ಬುಷ್ ಚೆನ್ನಾಗಿದೆ ಮತ್ತು ಓಕೆ ಓಕೆ ಎಂಬ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದ್ದು ಎರಡನೇ ವಾರವೂ ಚಿತ್ರಮಂದಿರದಲ್ಲಿ ಪ್ರದರ್ಶನಗೊಳ್ಳುವತ್ತ ಚಿತ್ತ ನೆಟ್ಟಿದೆ. ಹೀಗೆ ಈ ಎರಡೂ ಚಿತ್ರಗಳು ಪ್ರದರ್ಶನಗೊಳ್ಳುತ್ತಿರುವ ಕಾರಣದಿಂದಾಗಿ ಗಂಧದ ಗುಡಿ ಚಿತ್ರಕ್ಕೆ ಶೋ ಸಿಗುವುದು ತಡವಾಗುತ್ತಿದ್ದು, ಇದೇ ಕಾರಣಕ್ಕಾಗಿ ಬಿಡುಗಡೆ ದಿನದ ಬುಕ್ಕಿಂಗ್ ಕೂಡ ವಿಳಂಬವಾಗುತ್ತಿದೆ ಎನ್ನುವುದರಲ್ಲಿ ಸಂಶಯವಿಲ್ಲ.

  ಹಿನ್ನಡೆ ಅನುಭವಿಸಬಹುದು ಹೆಡ್ ಬುಷ್!

  ಹಿನ್ನಡೆ ಅನುಭವಿಸಬಹುದು ಹೆಡ್ ಬುಷ್!

  ಸದ್ಯ ಕಾಂತಾರ ಅಬ್ಬರಿಸುತ್ತಿರುವ ರೀತಿ ನೋಡಿದರೆ ಈ ವಾರವೂ ಸಹ ಕಾಂತಾರ ಚಿತ್ರಮಂದಿರಗಳನ್ನು ಕಳೆದುಕೊಳ್ಳದೇ ಪ್ರದರ್ಶನ ಕಾಣಲಿದೆ ಎಂಬುದು ಖಚಿತವಾಗಿದೆ. ಇನ್ನು ಕಳೆದ ವಾರ ತೆರೆಕಂಡಿರುವ ಹೆಡ್ ಬುಷ್ ಹಲವೆಡೆ ತುಂಬಿದ ಪ್ರದರ್ಶನವನ್ನು ಕಾಣುವಲ್ಲಿ ವಿಫಲವಾಗಿದ್ದು ಆ ಪ್ರದರ್ಶನಗಳನ್ನು ಗಂಧದ ಗುಡಿ ತನ್ನ ತೆಕ್ಕೆಗೆ ಹಾಕಿಕೊಳ್ಳುವುದು ಖಚಿತ ಎನ್ನಬಹುದು. ಈ ಮೂಲಕ ಈ ವಾರ ಹೆಡ್ ಬುಶ್ ಚಿತ್ರವು ಕಾಂತಾರ ಮತ್ತು ಗಂಧದ ಗುಡಿ ಅಬ್ಬರದ ನಡುವೆ ಹಿನ್ನಡೆ ಅನುಭವಿಸುವುದರಲ್ಲಿ ಅನುಮಾನವಿಲ್ಲ.

  English summary
  Dhananjay starrer Head Bush may loose many theatres due to Gandhada Gudi release
  Wednesday, October 26, 2022, 10:07
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X