For Quick Alerts
  ALLOW NOTIFICATIONS  
  For Daily Alerts

  ದಿನಕ್ಕೆ ಸಾವಿರ ಬಸ್ಕಿ ಹೊಡೀತಿದ್ದಾರೆ ಡಾಲಿ ಧನಂಜಯ್

  |

  ಪಾಪ್‌ಕಾರ್ನ್‌ ಮಂಕಿ ಟೈಗರ್ ಚಿತ್ರ ಯಶಸ್ವಿಯಾಗಿದೆ. ಧನಂಜಯ್ ಅಭಿನಯಕ್ಕೆ ವಿಮರ್ಶಕರು, ಪ್ರೇಕ್ಷಕರು ಫುಲ್ ಮಾರ್ಕ್ ಕೊಟ್ಟಿದ್ದಾರೆ. ಆದರೆ ಇದೆಲ್ಲವನ್ನೂ ಎಂಜಾಯ್ ಮಾಡುವ ಬದಲಿಗೆ ಧನಂಜಯ್ ದೇಹಕ್ಕೆ ಶ್ರಮ ನೀಡುವ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ.

  ಹೌದು, ಡಾಲಿ ಆಗಿ ಚಿತ್ರರಂಗದಲ್ಲಿ ಹವಾ ಸೃಷ್ಟಿಸಿದ್ದ ಧನಂಜಯ್ ಈಗ ಮಂಕಿ ಸೀನನಾಗಿ ಖದರ್ ಮುಂದುವರೆಸಿದ್ದಾರೆ. ಧನಂಜಯ್ ನಟನೆಗೆ ಜನ ಮಾರು ಹೋಗಿದ್ದಾರೆ. ಹೊಗಳಿಕೆಗಳ ಸುರಿಮಳೆ ಧನಂಜಯ್ ಮೇಲೆ ಸುರಿಯಲಾಗುತ್ತಿದೆ ಆದರೆ ಇದಾವುದಕ್ಕೂ ಗಮನಕೊಡದೆ ಧನಂಜಯ್ ಮಾತ್ರ ತಮ್ಮ ಕೆಲಸದಲ್ಲಿ ತೊಡಿಕೊಂಡಿದ್ದಾರೆ.

  ಜಯರಾಜ್ ಕುರಿತಾದ ಚಿತ್ರಕ್ಕೆ ಈಗಾಗಲೇ ತಯಾರಿ ಆರಂಭಿಸಿರುವ ಧನಂಜಯ್ ದೇಹವನ್ನು ಹುರಿಗೊಳಿಸುವುದರಲ್ಲಿ ನಿರತರಾಗಿದ್ದಾರೆ. ಎಷ್ಟರ ಮಟ್ಟಿಗೆ ಎಂದರೆ ಕುಸ್ತಿ ಪಟುವಾಗಿದ್ದ ಜಯರಾಜ್ ನಂತೆ ಕಾಣಲು ಜಿಮ್ ಬಿಟ್ಟು ಗರಡಿ ಮನೆಯಲ್ಲೇ ಹೊಕ್ಕಿದ್ದಾರೆ.

  ಜಿಮ್ ಬಿಟ್ಟು ಗರಡಿ ಮನೆ ಹೊಕ್ಕಿರುವ ಧನಂಜಯ್

  ಜಿಮ್ ಬಿಟ್ಟು ಗರಡಿ ಮನೆ ಹೊಕ್ಕಿರುವ ಧನಂಜಯ್

  ಗರಡಿ ಮನೆಯಲ್ಲಿ ಬಸ್ಕಿ ಹೊಡೆಯುತ್ತಾ, ಗದೆ ತಿರುವುತ್ತಾ ಸಾಮು ಮಾಡುತ್ತಿದ್ದಾರೆ. ದೇಹವನ್ನು ಹುರಿಗೊಳಿಸಿಕೊಂಡು ಜಯರಾಜ್ ಪಾತ್ರಕ್ಕೆ ಪರಕಾಯ ಪ್ರವೇಶ ಮಾಡುತ್ತಿದ್ದಾರೆ.

  ಜಯರಾಜ್‌ ಚಿತ್ರಕ್ಕೆ ಅಗ್ನಿ ಶ್ರೀಧರ್ ಚಿತ್ರಕತೆ

  ಜಯರಾಜ್‌ ಚಿತ್ರಕ್ಕೆ ಅಗ್ನಿ ಶ್ರೀಧರ್ ಚಿತ್ರಕತೆ

  ಜಯರಾಜ್ ಚಿತ್ರಕ್ಕೆ ಚಿತ್ರಕತೆ ಬರೆಯುತ್ತಿರುವ ಅಗ್ನಿ ಶ್ರೀಧರ್ ಅವರು ಧನಂಜಯ್ ಅವರ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿದ್ದು, 'ಜಯರಾಜ್ ಚಿತ್ರದ ಬಳಿಕ ಧನಂಜಯ್ ಕನ್ನಡ ಚಿತ್ರರಂಗದಲ್ಲಿ ಮತ್ತೊಂದು ಎತ್ತರಕ್ಕೆ ಹೋಗುತ್ತಾರೆ' ಎಂದು ಹೇಳಿದ್ದಾರೆ.

  ಥೇಟ್ ಜಯರಾಜ್‌ನಂತೆ ಕಾಣುತ್ತಾರೆ ಧನಂಜಯ್

  ಥೇಟ್ ಜಯರಾಜ್‌ನಂತೆ ಕಾಣುತ್ತಾರೆ ಧನಂಜಯ್

  ಮೊದಲ ಬಾರಿಗೆ ಅವರನ್ನು ನೋಡಿದಾಗ ಅವರು ಧನಂಜಯ್ ನಂತೆ ಕಂಡರು, ಆದರೆ ಇತ್ತೀಚೆಗೆ ನೋಡಿದಾಗ ಅವರು ಥೇಟ್ ಜಯರಾಜ್‌ ನಂತೆಯೇ ಕಾಣುತ್ತಿದ್ದಾರೆ. ಜಯರಾಜ್‌ನನ್ನು ಹಲವು ವರ್ಷ ಹತ್ತಿರದಿಂದ ನೋಡಿದ್ದೇನೆ, ಧನಂಜಯ್ ಥೇಟ್ ಜಯರಾಜ್‌ನಂತೆಯೇ ತನ್ನನ್ನು ತಾನು ಬದಲಾಯಿಸಿಕೊಂಡಿದ್ದಾನೆ' ಎಂದು ಅಗ್ನಿ ಶ್ರೀಧರ್ ಹೇಳಿದ್ದಾರೆ.

  ದಿನಕ್ಕೆ ಸಾವಿರ ಬಸ್ಕಿ ಹೊಡೆಯುತ್ತಿರುವ ಧನಂಜಯ್

  ದಿನಕ್ಕೆ ಸಾವಿರ ಬಸ್ಕಿ ಹೊಡೆಯುತ್ತಿರುವ ಧನಂಜಯ್

  ಧನಂಜಯ್ ತಮ್ಮ ಪಾತ್ರಕ್ಕಾಗಿ ಅತಿಯಾದ ಶ್ರಮ ವಹಿಸುತ್ತಿದ್ದು, ವ್ಯಾಯಾಮ ಶೈಲಿ, ಮಾತು, ನಡಿಗೆ ಶೈಲಿ ಎಲ್ಲವನ್ನೂ ಬದಲಾಯಿಸಿಕೊಂಡಿದ್ದಾರೆ. ದಿನಕ್ಕೆ ಸಾವಿರ ಬಸ್ಕಿ ಹೊಡೆಯುವ ಕಸರತ್ತನ್ನು ಧನಂಜಯ್ ಮಾಡುತ್ತಿದ್ದಾರೆ. ಮಾಡುವ ಪಾತ್ರದ ಮೇಲೆ ಧನಂಜಯ್ ಇರುವ ಶ್ರದ್ಧೆಯನ್ನು ತೋರುತ್ತದೆ.

  ಚಿತ್ರೀಕರಣ ಆರಂಭವಾಗಲಿದೆ ಜಯರಾಜ್ ಕುರಿತ ಸಿನಿಮಾ

  ಚಿತ್ರೀಕರಣ ಆರಂಭವಾಗಲಿದೆ ಜಯರಾಜ್ ಕುರಿತ ಸಿನಿಮಾ

  ಇನ್ನು ಜಯರಾಜ್ ಕುರಿತ ಸಿನಿಮಾಕ್ಕೆ ಅಗ್ನಿ ಶ್ರೀಧರ್ ಚಿತ್ರಕತೆ ಬರೆಯುತ್ತಿದ್ದು, ಶೂನ್ಯ ಎಂಬುವರು ನಿರ್ದೇಶನ ಮಾಡುತ್ತಿದ್ದಾರೆ. ಜಯರಾಜ್‌ ಒಡನಾಡಿಯಾಗಿದ್ದ ಅಗ್ನಿ ಶ್ರೀಧರ್ ಜಯರಾಜ್ ಅನ್ನು ತೆರೆಯ ಮೇಲೆ ಹೇಗೆ ತರಲಿದ್ದಾರೆ ಎಂಬ ಕುತೂಹಲ ಚಿತ್ರರಸಿಕರಲ್ಲಿ ಮನೆ ಮಾಡಿದೆ.

  English summary
  Actor Dhananjay trying hard to get shape in as underworld don Jayaraj. He is portraying Jayaraj's role in his upcoming movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X