For Quick Alerts
  ALLOW NOTIFICATIONS  
  For Daily Alerts

  ಡಾಲಿ ಧನಂಜಯ್ ಬರೆದ ಹಾಡನ್ನು ರಿಲೀಸ್ ಮಾಡುತ್ತಿದ್ದಾರೆ ಶ್ರೀಮುರುಳಿ

  |

  ಡಾಲಿ ಧನಂಜಯ್ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. 'ಟಗರು' ಚಿತ್ರದ ನಂತರ ವಿಲನ್ ಆಗಿ ಅಬ್ಬರಿಸುತ್ತಿರುವ ಧನಂಜಯ್ ಸ್ಯಾಂಡಲ್ ವುಡ್ ಮಾತ್ರವಲ್ಲದೆ ಟಾಲಿವುಡ್ ನಲ್ಲೂ ಮಿಂಚಿದ್ದಾರೆ. ತೆರೆ ಮೇಲೆ ನಟ ಭಯಂಕರನಾಗಿ ಕಾಣಿಸಿಕೊಳ್ಳುತ್ತಿದ್ದ ಧನಂಜಯ್ ಮತ್ತೆ ಸಾಹಿತಿಯಾಗಿದ್ದಾರೆ.

  ಹೌದು, ಧನಂಜಯ್ ಹರಿಪ್ರಿಯಾ ಅಭಿನಯದ ಸಿನಿಮಾಗೆ ಹಾಡೊಂದನ್ನು ಬರೆದಿದ್ದಾರೆ. ಸ್ಯಾಂಡಲ್ ವುಡ್ ನಲ್ಲಿ ಸದ್ಯ ಸದ್ದು ಮಾಡುತ್ತಿರುವ 'D/O ಪಾರ್ವತಮ್ಮ' ಚಿತ್ರಕ್ಕೆ ಧನಂಜಯ್ ಸಾಹಿತ್ಯ ಬರೆದಿದ್ದಾರೆ. ಸುಮಲತಾ ಮತ್ತು ಹರಿಪ್ರಿಯಾ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿರುವ ಸಿನಿಮಾ.

  ಹೊಸ ಕೆಲಸ ಶುರು ಮಾಡಿದ 'ಟಗರು' ಡಾಲಿ ಧನಂಜಯ್

  ಡಾಲಿ ಬರೆದಿರುವ ಚಿತ್ರದ ಬಹುನಿರೀಕ್ಷೆಯ ಹಾಡನ್ನು ನಾಳೆ ರಿಲೀಸ್ ಮಾಡುತ್ತಿದೆ ಚಿತ್ರತಂಡ. ವಿಶೇಷ ಅಂದ್ರೆ ಈ ಹಾಡನ್ನು ರೋರಿಂಗ್ ಸ್ಟಾರ್ ಶ್ರೀಮುರುಳಿ ರಿಲೀಸ್ ಮಾಡುತ್ತಿದ್ದಾರೆ. ಪಿ ಆರ್ ಕೆ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗುತ್ತಿದೆ ಪಾರ್ವತಮ್ಮ ಚಿತ್ರದ ಮೊದಲ ಹಾಡು.

  ಅಂದ್ಹಾಗೆ 'D/O ಪಾರ್ವತಮ್ಮ' ಶಂಕರ್ ಜೆ ನಿರ್ದೇಶನದಲ್ಲಿ ಮೂಡಿ ಬಂದ ಸಿನಿಮಾ. ಈ ಸಿನಿಮಾ ಮೇ 24ರಂದು ತೆರೆಗೆ ಬರುತ್ತಿದೆ. ಸಾಕಷ್ಟು ಕುತೂಹಲ ಮೂಡಿಸಿರುವ ಈ ಸಿನಿಮಾದ ಮೊದಲ ಹಾಡು ನಾಳೆ ಸಂಜೆ 5ಗಂಟೆಗೆ ರಿಲೀಸ್ ಆಗುತ್ತಿದೆ.

  English summary
  Kannada actor Dhananjay written a lyrics to D/O parvathamma kannada movie. Haripriya and Sumalatha starrer film. This movie is directer by Shankar.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X