»   » ಹೊಸ ಕೆಲಸ ಶುರು ಮಾಡಿದ 'ಟಗರು' ಡಾಲಿ ಧನಂಜಯ್

ಹೊಸ ಕೆಲಸ ಶುರು ಮಾಡಿದ 'ಟಗರು' ಡಾಲಿ ಧನಂಜಯ್

Posted By:
Subscribe to Filmibeat Kannada

ನಟ ಧನಂಜಯ್ ಸದ್ಯ ಶಿವರಾಜ್ ಕುಮಾರ್ ಜೊತೆಗೆ 'ಟಗರು' ಸಿನಿಮಾದಲ್ಲಿ ನಟಿಸಿದ್ದಾರೆ. 'ಟಗರು' ಸಿನಿಮಾದ ಅವರ ಡಾಲಿ ಪಾತ್ರದ ಬಗ್ಗೆ ನಿರೀಕ್ಷೆ ಹೆಚ್ಚಿದೆ. 'ಟಗರು' ಸಿನಿಮಾದ ಆ ಪಾತ್ರವನ್ನು ತೆರೆ ಮೇಲೆ ನೋಡುವುದಕ್ಕೆ ಅವರ ಅಭಿಮಾನಿಗಳು ಕಾಯುತ್ತಿದ್ದಾರೆ.

ನಟನಾಗಿದ್ದ ಧನಂಜಯ್ 'ಟಗರು' ಸಿನಿಮಾದಲ್ಲಿ ನೆಗೆಟಿವ್ ಶೇಡ್ ಪಾತ್ರವನ್ನು ಮಾಡಿದ್ದಾರೆ. ಇದರ ಜೊತೆಗೆ ಈಗ ಇನ್ನೊಂದು ಸಾಹಸಕ್ಕೆ ಧನಂಜಯ್ ಕೈ ಹಾಕಿದ್ದಾರೆ. ನಾಯಕ ಮಾತ್ರವಲ್ಲದೆ ಧನಂಜಯ್ ಈಗ ಒಬ್ಬ ಚಿತ್ರಸಾಹಿತಿ ಆಗಿದ್ದಾರೆ. ರಘು ದೀಕ್ಷಿತ್ ಸಂಗೀತದ ಒಂದು ಹೊಸ ಸಿನಿಮಾಗಾಗಿ 'ಟಗರು' ಡಾಲಿ ಪೆನ್ ಹಿಡಿದಿದ್ದಾರೆ. ತಾನು ಒಬ್ಬ ಹೀರೋ ಅಷ್ಟೇ ಅಲ್ಲದೆ ಒಬ್ಬ ಒಳ್ಳೆಯ ರೈಟರ್ ಎಂದು ಈ ಮೂಲಕ ಸಾಬೀತು ಮಾಡುವುದಕ್ಕೆ ಹೊರಟಿದ್ದಾರೆ. ಮುಂದೆ ಓದಿ...

'ಆರ್ಕೆಸ್ಟ್ರ'

ರಘು ದೀಕ್ಷಿತ್ ಅವರ ಸಹ ನಿರ್ಮಾಣದಲ್ಲಿ 'ಆರ್ಕೆಸ್ಟ್ರ' ಎಂಬ ಹೊಸ ಸಿನಿಮಾ ಬರುತ್ತಿದೆ. ಈ ಸಿನಿಮಾದಲ್ಲಿ ರಘು ದೀಕ್ಷಿತ್ ಅವರ ಸಂಗೀತಕ್ಕೆ ಧನಂಜಯ್ ಸಾಹಿತ್ಯ ಬರೆದಿದ್ದಾರೆ.

ಒಂಬತ್ತು ಹಾಡುಗಳು

ವಿಶೇಷ ಅಂದರೆ ಈ ಸಿನಿಮಾದ 9 ಹಾಡುಗಳನ್ನು ಧನಂಜಯ್ ಬರೆದಿದ್ದಾರೆ. ಈ ಸಿನಿಮಾದಲ್ಲಿ ಒಟ್ಟು 11 ಹಾಡುಗಳಿವೆ. ಮೊದಲ ಬಾರಿ ಸಾಹಿತ್ಯ ಬರೆಯುವುದಕ್ಕೆ ಹೊರಟು ಒಂದೇ ಚಿತ್ರದಲ್ಲಿ 9 ಹಾಡು ಬರೆದ ಧನಂಜಯ್ ಪ್ರಯತ್ನ ಮೆಚ್ಚಬೇಕಾಗಿದೆ.

ಬರವಣಿಗೆಯ ಅನುಭವ

ಧನಂಜಯ್ ರಂಗಭೂಮಿಯಿಂದ ಬಂದಿರುವ ಕಲಾವಿದ. ಅಲ್ಲಿ ಅವರಿಗೆ ಬರವಣಿಗೆಯ ಅನುಭವ ಇದ್ದು, ಅದೇ ಕಾರಣದಿಂದ ಧನಂಜಯ್ ಕೈ ನಲ್ಲಿ ನಿರ್ದೇಶಕರು ಚಿತ್ರದ ಹಾಡುಗಳನ್ನು ಬರೆಸಿದ್ದಾರೆ.

ಧನಂಜಯ್ ಗೆ 'ಕೇಡಿ' ಎಂದ ಪ್ರಣಿತಾ: ಮೇಘನಾ, ಸಂಗೀತಾ ಫುಲ್ ಹ್ಯಾಪಿ

ಸುನೀಲ್ ಮೈಸೂರು ನಿರ್ದೇಶನ

ಸುನೀಲ್ ಮೈಸೂರು ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಇದೊಂದು ಮ್ಯೂಸಿಕಲ್ ಸಿನಿಮಾವಾಗಿದೆ. ಚಿತ್ರದ ಕಥೆ ಮೈಸೂರಿನ 'ಆರ್ಕೆಸ್ಟ್ರ' ಸಂಸ್ಕೃತಿಯ ಬಗ್ಗೆ ಇದೆ.

English summary
Kannada actor Dhananjaya has written lyrics to 'Orchestra' kannada movie songs. Raghu Dixit composed music to Orchestra.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada