For Quick Alerts
  ALLOW NOTIFICATIONS  
  For Daily Alerts

  ಹೆಡ್ ಬುಷ್: ಡಾಲಿಗಾಗಿ ದಾವಣಗೆರೆಗೆ ಬರಲಿದ್ದಾರೆ ರಮ್ಯಾ, ರಚಿತಾ ರಾಮ್

  |

  ಡಾಲಿ ಧನಂಜಯ ಅಭಿನಯದ ಮುಂದಿನ ಚಿತ್ರ ಹೆಡ್ ಬುಷ್ ಇದೇ ತಿಂಗಳ 21ರಂದು ರಾಜ್ಯಾದ್ಯಂತ ದೊಡ್ಡ ಮಟ್ಟದಲ್ಲಿ ಬಿಡುಗಡೆಯಾಗಲು ತಯಾರಾಗುತ್ತಿದೆ. ಈಗಾಗಲೇ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಕೆಲವೊಂದು ಹಾಡುಗಳನ್ನು ಸಹ ಬಿಡುಗಡೆಗೊಳಿಸಿದೆ.

  ವಿಭಿನ್ನ ರೀತಿಯಲ್ಲಿ ಚಿತ್ರದ ಪ್ರಮೋಷನ್ ಮಾಡುವ ನಟ ಧನಂಜಯ್ ರಾಜ್ ಕಪ್ ಟೂರ್ನಿಗಾಗಿ ತಾನು ದುಬೈ ತೆರಳುವ ವೇಳೆ ಹೆಡ್ ಬುಷ್ ಚಿತ್ರದ ಪಾತ್ರದ ರೀತಿಯಲ್ಲೇ ಡ್ರೆಸ್ ಮಾಡಿಕೊಂಡು ತೆರಳಿದ್ದರು ಹಾಗೂ ಅದೇ ವೇಳೆ ಡಾನ್ ಜಯರಾಜ್ ರೀತಿ ಡೈಲಾಗ್ ಹೇಳಿ ಬೆಂಗಳೂರು ಜೋಪಾನ ಎಂದು ಹೇಳಿದ್ದರು. ಹಾಗೂ ದುಬೈನಿಂದ ವಾಪಸಾದಾಗಲೂ 'ಜಯರಾಜ್ ವೆಲ್ ಕಮ್ ಬ್ಯಾಕ್ ಟು ಬೆಂಗಳೂರು' ಎಂದು ಚಿತ್ರದ ಪ್ರಮೋಷನ್ ಮಾಡಲಾಗಿತ್ತು.

  ಆದರೆ ಚಿತ್ರ ಬಿಡುಗಡೆಗೆ ಇನ್ನೂ ಹತ್ತು ದಿನಗಳು ಬಾಕಿ ಇರುವಾಗ ಚಿತ್ರ ಅಷ್ಟೇನೂ ಸದ್ದು ಮಾಡ್ತಿಲ್ಲ, ಚಿತ್ರ ದೊಡ್ಡ ಮಟ್ಟದ ಪ್ರಮೋಷನ್ ಮಾಡುತ್ತಿಲ್ಲ ಎಂಬ ಅಭಿಪ್ರಾಯಗಳು ಕೇಳಿಬಂದಿದ್ದವು. ಇದಕ್ಕೆ ಉತ್ತರಿಸಿರುವ ಹೆಡ್ ಬುಶ್ ಚಿತ್ರತಂಡ ಇದೀಗ ಬೃಹತ್ ಪ್ರೀ ರಿಲೀಸ್ ಇವೆಂಟ್ ಮಾಡಲು ಸಜ್ಜಾಗಿದೆ. ಹೆಡ್ ಬುಷ್ ಚಿತ್ರದ ಪ್ರೀ ರಿಲೀಸ್ ಕಾರ್ಯಕ್ರಮದ ಕುರಿತಾದ ಮಾಹಿತಿ ಕೆಳಕಂಡಂತಿದೆ.

  ಹೆಡ್ ಬುಶ್ ಚಿತ್ರದ ಪ್ರೀ ರಿಲೀಸ್ ಕಾರ್ಯಕ್ರಮವನ್ನು ದಾವಣಗೆರೆಯ ಎಂ ಬಿ ಎ ಕಾಲೇಜು ಆವರಣದಲ್ಲಿ ಇದೇ 16ರಂದು ಸಂಜೆ 5.30ಕ್ಕೆ ನಡೆಸಲಾಗುತ್ತಿದೆ. ಡಾಲಿ ಧನಂಜಯ್, ವಸಿಷ್ಠ ಸಿಂಹ, ಲೂಸ್ ಮಾದ ಯೋಗಿ ಹಾಗೂ ಸಂಪೂರ್ಣ ಹೆಡ್ ಬುಷ್ ಚಿತ್ರತಂಡ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದೆ ಮತ್ತು ಅತಿಥಿಗಳಾಗಿ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಹಾಗೂ ಡಿಂಪಲ್ ಕ್ವೀನ್ ರಚಿತಾ ರಾಮ್ ಭಾಗಿಯಾಗಲಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.

  ಈ ಕುರಿತಾಗಿ ಸ್ಯಾಂಡಲ್ ವುಡ್ ಕ್ವೀನ್ ಮೋಹಕ ತಾರೆ ರಮ್ಯಾ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಿದ್ದು, ದಾವಣಗೆರೆಯ ಎಂಬಿಎ ಕಾಲೇಜು ಆವರಣದಲ್ಲಿ ಅಕ್ಟೋಬರ್ 16ರ ಸಂಜೆ 5.30ಕ್ಕೆ ನಡೆಯಲಿರುವ ಹೆಡ್ ಬುಷ್ ಚಿತ್ರದ ಪ್ರೀ ರಿಲೀಸ್ ಕಾರ್ಯಕ್ರಮಕ್ಕೆ ಚಿತ್ರತಂಡದ ಜೊತೆ ನಾನು ಸಹ ಆಗಮಿಸುತ್ತಿದ್ದೇನೆ, ಅಲ್ಲಿಯೇ ನಾವೆಲ್ಲರೂ ಸಿಗೋಣ್ವಾ ಎಂದು ಬರೆದುಕೊಂಡಿದ್ದಾರೆ.

  ಇನ್ನು ಇಂದು ( ಅಕ್ಟೋಬರ್ 12 ) ಹೆಡ್ ಬುಶ್ ಚಿತ್ರತಂಡ ನಟ ಪುನೀತ್ ರಾಜ್ ಕುಮಾರ್, ರಾಜ್ ಕುಮಾರ್ ಹಾಗೂ ಪಾರ್ವತಮ್ಮ ರಾಜ್ ಕುಮಾರ್ ಅವರ ಸಮಾಧಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದು, ಪ್ರಚಾರ ಕಾರ್ಯವನ್ನು ಆರಂಭಿಸಿದೆ. ಅಣ್ಣಾವ್ರ ಪುಣ್ಯಭೂಮಿ ಸುತ್ತ ಸೈಕಲ್ ಸವಾರಿ ಮಾಡುವ ಮೂಲಕ ಹೆಡ್ ಬುಷ್ ಚಿತ್ರದ ಪ್ರಚಾರವನ್ನು ಧನಂಜಯ್ ನಡೆಸಿದರು.

  English summary
  Dhananjaya Starrer Head Bush Movie Grand Pre Release Event will he held at Davanagare; Know date, Guests list . Read on
  Wednesday, October 12, 2022, 17:56
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X