»   » ತವರೂರಿನಲ್ಲಿ ಆಟೋ ಓಡಿಸಿದ ಬಿಯರ್ ಬಾಯ್ 'ಡಾಲಿ'

ತವರೂರಿನಲ್ಲಿ ಆಟೋ ಓಡಿಸಿದ ಬಿಯರ್ ಬಾಯ್ 'ಡಾಲಿ'

Posted By:
Subscribe to Filmibeat Kannada

ಸಿನಿಮಾ ಬಿಡುಗಡೆ ಆಗಿ 25 ದಿನಗಳು ಕಳೆದ ನಂತರವೂ ಪ್ರೇಕ್ಷಕರ ಬಾಯಲ್ಲಿ ಹಾಗೂ ಮನಸ್ಸಿನಲ್ಲಿ ಇನ್ನೂ ಕಾಡುತ್ತಿರುವ ಚಿತ್ರ ಟಗರು. ರಾಜ್ಯದ ಎಲ್ಲಾ ಕಡೆಯಲ್ಲೂ ಭರ್ಜರಿ ಪ್ರದರ್ಶನ ಕಾಣುತ್ತಾ ಹೊರ ದೇಶದಲ್ಲಿಯೂ ಸುದ್ದಿ ಮಾಡುತ್ತಿರುವ ಟಗರು ಸಿನಿಮಾತಂಡ ವಿಜಯಯಾತ್ರೆ ಆರಂಭಿಸಿದೆ. ಶಿವಮೊಗ್ಗದಲ್ಲಿ ಟಗರು ಶಿವ ಹಾಗೂ ಡಾಲಿ ಯನ್ನ ಅದ್ದೂರಿಯಾಗಿ ಬರ ಮಾಡಿಕೊಂಡ ಪ್ರೇಕ್ಷಕರು ಸಂಭ್ರಮಾಚರಣೆಯನ್ನ ಮಾಡಿದ್ರು.

ಶಿವಮೊಗ್ಗದ ನಂತ್ರ ಡಾಲಿ ತನ್ನ ತವರು ಜಿಲ್ಲೆಯ ಚಿತ್ರಮಂದಿರಗಳಿಗೆ ಭೇಟಿ ಕೊಟ್ಟಿದ್ದು ಅಲ್ಲಿಯ ಅಭಿಮಾನಿಗಳು ಡಾಲಿಗೆ ಅದ್ದೂರಿ ಸ್ವಾಗತ ಕೋರಿದ್ದಾರೆ. ಕಳೆದ ಎಂಟು ಸಿನಿಮಾಗಳಿಗೆ ಸಿಗದಂತಹ ಯಶಸ್ಸು ಪ್ರೀತಿ ಅಭಿಮಾನ ಈ ಚಿತ್ರ ಮೂಲಕ ನಟ ಧನಂಜಯ ಪಡೆದುಕೊಂಡಿದ್ದಾರೆ. ಹಾಸನ ಜಿಲ್ಲೆಯಲ್ಲಿ ಅಭಿಮಾನಿಗಳು ಡಾಲಿಯನ್ನ ಯಾತ್ರೆಯ ಮೂಲಕ ಎಲ್ಲೆಡೆ ಸುತ್ತಾಡಿಸಿದ್ದಾರೆ.

ಡಾಲಿಯ ಜೊತೆ ಟಗರು ಶಿವನ ವಿಜಯಯಾತ್ರೆ

ಹಾಸನದ ಜನರು ಡಾಲಿಯನ್ನ ಬಿಯರ್ ಬಾಯ್ ಮಾಡಿದ್ಯಾಕೆ? ಅಷ್ಟೋಂದು ಕಾರ್ ಗಳಿದ್ದರು ಧನಂಜಯ ಆಟೋ ಹತ್ತಿ ಹಾಸನ ಸುತ್ತಾಡಿದ್ದೇಕೆ? ಇನ್ನು ಅನೇಕ ವಿಶೇಷ ಸಂಗತಿಗಳು ವಿಜಯಯಾತ್ರೆಯಲ್ಲಿ ನಡೆದಿದೆ. ಅದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ಮುಂದೆ ಓದಿ..

ಹಾಸನದಲ್ಲಿ ಆಟೋ ಓಡಿಸಿದ ಡಾಲಿ

ಟಗರು ಸಿನಿಮಾ ಯಶಸ್ಸಿನ ನಂತರ ನಟ ಧನಂಜಯ ಚಿತ್ರ ಗೆಲ್ಲಿಸಿದ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿಲು ವಿಜಯಯಾತ್ರೆ ಆರಂಭ ಮಾಡಿದ್ದಾರೆ. ನಿನ್ನೆ ಹಾಸನಕ್ಕೆ ಭೇಟಿ ನೀಡಿದ ಧನಂಜಯ ತಮ್ಮ ಪಾತ್ರದ ಹೆಸರನ್ನು ಹಾಕಿಸಿಕೊಂಡಿದ್ದ ಆಟೋವನ್ನು ಓಡಿಸಿದ್ದಾರೆ.

ಬಿಯರ್ ಬಾಯ್ ಡಾಲಿ

ಟಗರು ಸಿನಿಮಾದಲ್ಲಿ ಧನಂಜಯ ಬಿಯರ್ ಬಾಟಲ್ ಓಪನ್ ಮಾಡುವ ಸೀನ್ ಗಳು ಹೆಚ್ಚಾಗಿದ್ದು ಅದನ್ನ ಅಭಿಮಾನಿಗಳು ತುಂಬಾ ಇಷ್ಟ ಪಟ್ಟಿದ್ದಾರೆ. ಧನಂಜಯ ಹೋದಲೆಲ್ಲಾ ಬಿಯರ್ ಬಾಯ್ ಅಂತ ಕರೆಯೋದು, ಬಿಯರ್ ಬಾಟಲ್ ತಂದು ಓಪನ್ ಮಾಡಿಸುವುದು ಹೆಚ್ಚಾಗಿದೆ. ಹಾಸನದಲ್ಲಿಯೂ ಅಭಿಮಾನಿಗಳು ಬಿಯರ್ ಬಾಟಲ್ ಗಳನ್ನ ತಂದು ಡಾಲಿ ಕೈ ನಲ್ಲಿ ಓಪನ್ ಮಾಡಿಸಿದ್ದಾರೆ.

ತವರಿನಲ್ಲಿ ಅದ್ಧೂರಿ ಸ್ವಾಗತ

ಧನಂಜಯ ಮೂಲತ ಅರಸಿಕೆರೆಯ ನಿವಾಸಿ. ಆದ್ದರಿಂದ ಅಲ್ಲಿನ ಜನತೆಗೆ ಡಾಲಿ ಎಂದರೆ ಹೆಚ್ಚಿನ ಪ್ರೀತಿ. ಆದ್ದರಿಂದ ವಿಜಯಯಾತ್ರೆ ಸಂದರ್ಭದಲ್ಲಿ ಅದ್ಧೂರಿಯಾಗಿ ಸ್ವಾಗತ ಮಾಡಿ ಸನ್ಮಾನ ಮಾಡಿದ್ದಾರೆ.

ಚಿಕ್ಕಮಗಳೂರಿನಲ್ಲಿ ಟಗರು ತಂಡ

ಸದ್ಯ ತುಮಕೂರು, ಶಿವಮೊಗ್ಗ, ಹಾಸನ ಜನತೆಗೆ ಅಭಿನಂದನೆ ಸಲ್ಲಿಸಿರುವ ಟಗರು ತಂಡ ಇದೇ ತಿಂಗಳ 25 ರಂದು ಚಿಕ್ಕಮಗಳೂರು ಹಾಗೂ 26 ರಂದು ಚಿತ್ರದುರ್ಗ ಮತ್ತು ದಾವಣಗೆರೆಗೆ ಭೇಟಿ ಕೊಡಲಿದ್ದಾರೆ.

ಟಾಲಿವುಡ್ ಮಲ್ಟಿಸ್ಟಾರ್ ಸಿನಿಮಾದಲ್ಲಿ ಸ್ಥಾನ ಗಿಟ್ಟಿಸಿದ 'ಚಮಕ್' ಚಲುವೆ

English summary
Kannada Tagaru movie team has started with Vijayayatre .Actor Dhananjaya visited the theaters in Hassan and thanked the fans. Tagaru film is produced by KP Srikanth, directed by Duniya Suri

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X