»   » ಮೈಸೂರು ಹುಡುಗಿಯ ಭುಜದ ಮೇಲೆ ಡಾಲಿಯ ಚಿತ್ತಾರ

ಮೈಸೂರು ಹುಡುಗಿಯ ಭುಜದ ಮೇಲೆ ಡಾಲಿಯ ಚಿತ್ತಾರ

Posted By:
Subscribe to Filmibeat Kannada
ಮೈಸೂರು ಹುಡುಗಿಯ ಭುಜದ ಮೇಲೆ ಡಾಲಿಯ ಟ್ಯಾಟೋ | Filmibeat Kannada

ಟಗರು ಸಿನಿಮಾ ನೋಡಿದ ಪ್ರತಿಯೊಬ್ಬ ಪ್ರೇಕ್ಷಕನು ಹೊರ ಬರುವಾಗ ಡಾಲಿಯ ಬಗ್ಗೆ ಮಾತನಾಡದೆ ಇರುವುದೇ ಇಲ್ಲ. ಅಷ್ಟರ ಮಟ್ಟಿಗೆ ಆ ಪಾತ್ರ ನೋಡುಗರ ಮೇಲೆ ಪ್ರಭಾವ ಬೀರಿದೆ. ಸಾಮಾನ್ಯ ಪ್ರೇಕ್ಷಕನಿಂದ ಚಿತ್ರರಂಗದ ಸ್ಟಾರ್ ಕಲಾವಿದರೆಲ್ಲರೂ ಡಾಲಿ ಪಾತ್ರ ಮಾಡಿರುವ ಧನಂಜಯ ಸೂಪರ್ ಎನ್ನುತ್ತಿದ್ದಾರೆ. ಅಷ್ಟು ಅದ್ಬುತವಾಗಿ ಡಾಲಿ ಎಲ್ಲರನ್ನ ಆವರಸಿಕೊಂಡಿದ್ದಾರೆ.

ಸದ್ಯ ಡಾಲಿಗೆ ಅಭಿಮಾನಿಗಳು ಹೆಚ್ಚಾಗಿದ್ದಾರೆ, ಅಭಿಮಾನಿ ಬಳಗಗಳು ಜಾಸ್ತಿ ಆಗಿದೆ. ಯುವಕರಿಗಿಂತ ಯುವತಿಯರು ಡಾಲಿಯ ಲುಕ್ ಮತ್ತು ಅಭಿನಯಕ್ಕೆ ಮನಸೋತಿದ್ದಾರೆ. ಮೈಸೂರಿನ ಸೌಂದರ್ಯ ಶಾನ್ವಿ ಎನ್ನುವ ಯುವತಿ ತನ್ನ ಭುಜದ ಮೇಲೆ ಡಾಲಿ ಎಂದು ಹಚ್ಚೆ ಹಾಕಿಸಿಕೊಂಡಿದ್ದಾಳೆ. ಟಗರು ಸಿನಿಮಾ ನೋಡಿ ಧನಂಜಯ ಅಭಿನಯಕ್ಕೆ ಮನಸೋತಿರುವ ಯುವತಿ ಭುಜದ ಮೇಲೆ ಡಾಲಿಯ ಚಿತ್ತಾರ ಮೂಡಿದೆ.

Dhananjaya's fans have increased after acting in Tagaru movie.

'ಟಗರು' ಚಿತ್ರದಲ್ಲಿ ನನ್ನ ಪಾತ್ರ ತುಂಬ ಚಿಕ್ಕದು ಅನಿಸಿತು ಎಂದ ವಸಿಷ್ಟ!

ಮೈಸೂರಿನ ಸಾಯಿ ಟ್ಯಾಟೋ ತಂಡದವರು ಈ ಹಚ್ಚೆಯನ್ನ ಹಾಕಿದ್ದು ಸದ್ಯ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಅಭಿಮಾನಿ ಬಳಗ ಕಟ್ಟುವುದು, ಬರ್ತಡೇ ಆಚರಣೆ ಮಾಡುವುದು , ಕೈ ಮೇಲೆ ಹಚ್ಚೆ ಹಾಕಿಸಿಕೊಳ್ಳುವುದು ಕಾಮನ್ ವಿಚಾರ ಆದರೆ ಇವೆಲ್ಲವನ್ನೂ ಮೀರಿ ಈಕೆ ತನ್ನ ಅಭಿಮಾನವನ್ನ ವಿಭಿನ್ನ ರೀತಿಯಲ್ಲಿ ವ್ಯಕ್ತ ಪಡಿಸಿರುವುದುಸಂಥಿಂಗ್ ಸ್ಪೆಷಲ್ ಎನ್ನಿಸುತ್ತಿದೆ.

ಡಾಲಿ ಹೆಸರಿನಲ್ಲಿ ಕೇವಲ ಹಚ್ಚೆ ಮಾತ್ರವಲ್ಲ ಹೇರ್ ಕಟ್ಟಿಂಗ್ ಕೂಡ ಶುರುವಾಗಿಗೆ. ಮಕ್ಕಳು ಹಾಗೂ ಯುವಕರು ಡಾಲಿ ಕಟ್ಟಿಂಗ್ ಮಾಡಿಸಿಕೊಂಡು ಎಂಜಾಯ್ ಮಾಡುತ್ತಿದ್ದಾರೆ

English summary
Dhananjaya's fans have increased after acting in Tagaru movie. The girl of Mysore who liked to Dally character tattooed Dally name on her shoulder

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada