For Quick Alerts
  ALLOW NOTIFICATIONS  
  For Daily Alerts

  ಅಂಬಿ ಹಾಡುಗಳ ಹಬ್ಬಕ್ಕೆ ನಟ ಧನುಷ್ ಬರ್ತಾರೆ

  By Naveen
  |
  ಅಂಬಿ ಹಾಡುಗಳ ಹಬ್ಬಕ್ಕೆ ಬರಲಿದ್ದಾರೆ ಇವರು..! | Filmibeat Kannada

  'ಅಂಬಿ ನಿಂಗೆ ವಯಸ್ಸಾಯ್ತೋ' ಸಿನಿಮಾದ ಆಡಿಯೋ ಬಿಡುಗಡೆಯ ಸಮಯ ಇದೀಗ ಬಂದಿದೆ. ಈಗಾಗಲೇ ಚಿತ್ರದ ಟೀಸರ್ ಸದ್ದು ಮಾಡುತ್ತಿದ್ದು, ಸಿನಿಮಾದ ಆಡಿಯೋ ಆಗಸ್ಟ್ 10ಕ್ಕೆ ರಿಲೀಸ್ ಆಗಲಿದೆ.

  ಅರಮನೆ ಮೈದಾನದಲ್ಲಿ ಸಿನಿಮಾದ ಆಡಿಯೋ ಅದ್ದೂರಿಯಾಗಿ ಬಿಡುಗಡೆಯಾಗಲಿದೆ. ಈ ಕಾರ್ಯಕ್ರಮಕ್ಕೆ ಕನ್ನಡದ ಬಹುತೇಕ ಸ್ಟಾರ್ ನಟರು ಹಾಜರಾಗಲಿದ್ದಾರೆ. ವಿಶೇಷ ಅಂದರೆ, ಕಾಲಿವುಡ್ ನಟ ಧನುಷ್ ಕಾರ್ಯಕ್ರಮಕ್ಕೆ ಅತಿಥಿಯಾಗಿ ಬರುತ್ತಾರೆ. ರಜನಿಕಾಂತ್ ಅವರಿಗೆ ಸಹ ಆಹ್ವಾನ ನೀಡಿದ್ದು, ಅವರು ಕೂಡ ಬರುವ ಸಾಧ್ಯತೆ ಇದೆ.

  ರೆಬೆಲ್ ಸ್ಟಾರ್ 'ಅಂಬಿ ನಿಂಗ್ ವಯಸ್ಸಾಯ್ತೋ' ಒಪ್ಪಿಕೊಳ್ಳಲು ರಜನಿಕಾಂತ್ ಕಾರಣ.! ರೆಬೆಲ್ ಸ್ಟಾರ್ 'ಅಂಬಿ ನಿಂಗ್ ವಯಸ್ಸಾಯ್ತೋ' ಒಪ್ಪಿಕೊಳ್ಳಲು ರಜನಿಕಾಂತ್ ಕಾರಣ.!

  'ಅಂಬಿ ನಿಂಗೆ ವಯಸ್ಸಾಯ್ತೋ' ಚಿತ್ರ ತಮಿಳಿನ 'ಪವರ್ ಪಾಂಡಿ' ಸಿನಿಮಾದ ರಿಮೇಕ್ ಆಗಿದೆ. ಅಲ್ಲಿ ಈ ಚಿತ್ರದ ಕಥೆ ಬರೆದು, ನಿರ್ದೇಶನ ಹಾಗೂ ನಿರ್ಮಾಣವನ್ನು ಧನುಷ್ ಅವರೇ ಮಾಡಿದ್ದರು. ಈ ಕಾರಣ ಹಾಡುಗಳ ಬಿಡುಗಡೆ ಕಾರ್ಯಕ್ರಮಕ್ಕೆ ಅವರನ್ನೇ ಅತಿಥಿಯಾಗಿ ಚಿತ್ರತಂಡ ಆಹ್ವಾನ ಮಾಡಿದೆ. ಇನ್ನೊಂದು ಕಡೆ ರಜನಿಕಾಂತ್ ಈ ಚಿತ್ರ ಮಾಡುವಂತೆ ಅಂಬರೀಶ್ ಅವರಿಗೆ ಮೊದಲು ಹೇಳಿದ್ದರು.

  dhanush will be the guest for Ambi Ninge Vaiyasayitho movie audio launch

  ಅಂದಹಾಗೆ, ಅಂಬರೀಶ್ ಈ ಚಿತ್ರದ ಮೂಲಕ ಮತ್ತೆ ಹೀರೋ ಆಗಿದ್ದಾರೆ. ಚಿತ್ರದಲ್ಲಿ ಸುಹಾಸಿನಿ, ಶೃತಿ ಹರಿಹರನ್ ನಾಯಕಿಯರಾಗಿದ್ದಾರೆ. ಗುರುದತ್ ಗಾಣಿಗ ಚಿತ್ರದ ನಿರ್ದೇಶನ ಮಾಡಿದ್ದಾರೆ. ಅರ್ಜುನ್ ಜನ್ಯ ಸಂಗೀತದ ಹಾಡುಗಳನ್ನು ಕೇಳಲು ಕೆಲವೇ ದಿನಗಳ ಕಾಯಬೇಕಿದೆ.

  English summary
  Tamil actor Dhanush will be the guest for Ambareesh's 'Ambi Ninge Vaiyasayitho' movie audio launch. The movie is a remake of tamil movie 'Power Pandi'.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X