For Quick Alerts
  ALLOW NOTIFICATIONS  
  For Daily Alerts

  ಮೊದಲ ಚಿತ್ರದ ಫೋಟೋ ಶೂಟ್ ನಲ್ಲಿ ಧನ್ಯಾ ರಾಮ್ ಕುಮಾರ್

  |

  ವರನಟ ಡಾ ರಾಜ್ ಕುಮಾರ್ ಮೊಮ್ಮಗಳು ಧನ್ಯಾ ರಾಮ್ ಕುಮಾರ್ ಚಿತ್ರರಂಗಕ್ಕೆ ಬಂದಿದ್ದಾರೆ. ಅವರ ಮೊದಲ ಸಿನಿಮಾದ ಫೋಟೋ ಶೂಟ್ ಇತ್ತೀಚಿಗಷ್ಟೆ ನಡೆದಿದೆ.

  ರಾಜ್ ಪುತ್ರಿ ಪೂರ್ಣಿಮಾ ಹಾಗೂ ಅಳಿಯ, ನಟ ರಾಮ್ ಕುಮಾರ್ ಪುತ್ರಿ ಧನ್ಯಾ ರಾಮ್ ಕುಮಾರ್ ತಮ್ಮ ಮೊದಲ ಸಿನಿಮಾದ ಕೆಲಸವನ್ನು ಶುರು ಮಾಡಿದ್ದಾರೆ. ಸದ್ಯಕ್ಕೆ ಚಿತ್ರದ ಫೋಟೋ ಶೂಟ್ ನಡೆದಿದ್ದು, ಧನ್ಯ ಇದರಲ್ಲಿ ಭಾಗಿಯಾಗಿದ್ದಾರೆ.

  ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಡಾ.ರಾಜ್ ಮೊಮ್ಮಗಳು

  ಧನ್ಯಾ ಅವರ ಈ ಹೊಸ ಸಿನಿಮಾಗೆ ಇನ್ನು ಟೈಟಲ್ ನಿಗದಿ ಆಗಿಲ್ಲ. ನಟ ಸೂರಜ್ ಈ ಹೊಸ ಸಿನಿಮಾದ ನಾಯಕನಾಗಿದ್ದಾರೆ. ಸೂರಜ್ ಹಾಗೂ ಧನ್ಯಾ ಜೋಡಿ ಕ್ಯೂಟ್ ಆಗಿ ಕಾಣುತ್ತಿದೆ.

  ಈ ಹಿಂದೆ 'ಸಿಲಿಕಾನ್ ಸಿಟಿ' ಹಾಗೂ 'ಉತ್ತಮ ವಿಲನ್' ಸಿನಿಮಾಗಳಲ್ಲಿ ಕೆಲಸ ಮಾಡಿದ್ದ, ಸುಮನ್ ಜಾದುಗರ್ ಈ ಚಿತ್ರದ ನಿರ್ದೇಶಕರಾಗಿದ್ದಾರೆ. ತಮ್ಮ ಮೊದಲ ಸಿನಿಮಾದಲ್ಲಿಯೇ ಧನ್ಯಾ ರನ್ನು ಲಾಂಚ್ ಮಾಡುತ್ತಿದ್ದಾರೆ.

  ವೈಟ್ ಅಂಡ್ ಗ್ರೇ ಮೀಡಿಯಾ ಸಂಸ್ಥೆ ಈ ಸಿನಿಮಾಗೆ ಬಂಡವಾಳ ಹಾಕಿದೆ. ಇದೇ ಮೊದಲ ಬಾರಿಗೆ ರಾಜ್ ಕುಟುಂಬದಿಂದ ಒಬ್ಬ ಹೀರೋಯಿನ್ ಎಂಟ್ರಿ ಆಗುತ್ತಿದ್ದು, ಧನ್ಯಾ ಮೇಲೆ ದೊಡ್ಡ ನಿರೀಕ್ಷೆ ಇದೆ.

  ಒಂದು ಕಡೆ ಧನ್ಯಾ ಸಿನಿ ಜರ್ನಿ ಶುರು ಮಾಡಿದ್ದು, ಮತ್ತೊಂದು ಕಡೆ ಅವರ ಸಹೋದರ ಧೀರನ್ ರಾಮ್ ಕುಮಾರ್ ಕೂಡ 'ದಾರಿ ತಪ್ಪಿದ ಮಗ' ಚಿತ್ರ ಮಾಡುತ್ತಿದ್ದಾರೆ.

  English summary
  Actress Dhanya Ramkumar and actor Suraj Gowda new movie photoshoot. Dhanya Ramkumar is DR Rajkumar granddaughter.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X