»   » ಡಬ್ಬಿಂಗ್ ಸಿನಿಮಾ 'ಧೀರ' ರಿಲೀಸ್ ಆಗಿದೆ: ವೀಕ್ಷಕರು ಏನಂದ್ರು?

ಡಬ್ಬಿಂಗ್ ಸಿನಿಮಾ 'ಧೀರ' ರಿಲೀಸ್ ಆಗಿದೆ: ವೀಕ್ಷಕರು ಏನಂದ್ರು?

Posted By:
Subscribe to Filmibeat Kannada

ಕನ್ನಡದಲ್ಲಿ ಡಬ್ಬಿಂಗ್ ಸಿನಿಮಾ ಬೇಡ ಎಂಬ ವಿರೋಧದ ನಡುವೆಯೂ ತಮಿಳಿನ ಮತ್ತೊಂದು ಚಿತ್ರ ಸ್ಯಾಂಡಲ್ ವುಡ್ ನಲ್ಲಿ ಅಪ್ಪಳಿಸಿದೆ. ತಮಿಳು ಸ್ಟಾರ್ ನಟ ಅಜಿತ್ ಅಭಿನಯದ 'ಆರಂಭಂ' ಸಿನಿಮಾ ಕನ್ನಡದಲ್ಲಿ 'ಧೀರ' ಎಂಬ ಹೆಸರಿನಲ್ಲಿ ಡಬ್ಬಿಂಗ್ ಆಗಿ ತೆರೆಕಂಡಿದೆ.

ಶುಕ್ರವಾರ ಕರ್ನಾಟಕ ರಾಜ್ಯದಲ್ಲಿ ಬಿಡುಗಡೆಯಾಗಿರುವ 'ಧೀರ' ಬೆಂಗಳೂರಿನಲ್ಲಿ ಕೇವಲ ಒಂದು ಚಿತ್ರಮಂದಿರದಲ್ಲಿ ಮಾತ್ರ ಬಿಡುಗಡೆಯಾಗಿದೆ. ಹೊಸ ಕರೆಹಳ್ಳಿಯಲ್ಲಿರುವ 'ಶ್ರೀಕೋಕಿಲ' ಚಿತ್ರದಲ್ಲಿ 'ಧೀರ' ರಿಲೀಸ್ ಆಗಿದ್ದು, ದಿನ ನಾಲ್ಕು ಆಟ ಪ್ರದರ್ಶನವಾಗುತ್ತಿದೆ.

ಹಾಗಿದ್ರೆ, ಡಬ್ಬಿಂಗ್ 'ಧೀರ'ನನ್ನ ನೋಡಿದ ಜನರು ಏನಂದ್ರು? ಈ ಚಿತ್ರದಲ್ಲಿ ಪ್ರೇಕ್ಷಕರಿಗೆ ಏನು ಇಷ್ಟವಾಗಿದೆ? ಏನು ಇಷ್ಟ ಆಗಿಲ್ಲ ಎಂದು ತಿಳಿಯಲು ಮುಂದೆ ಓದಿ.....

ಎಲ್ಲವೂ ಚೆನ್ನಾಗಿ ಮೂಡಿ ಬಂದಿದೆ

''ವಾಯ್ಸ್ ಡಬ್ಬಿಂಗ್ ಸೇರಿದಂತೆ ಚಿತ್ರದಲ್ಲಿ ಎಲ್ಲವೂ ಚೆನ್ನಾಗಿದೆ. ಅಜಿತ್ ಅವರು ತೆರೆಮೇಲೆ ನೋಡೋದಕ್ಕೆ ನಮ್ಮ ವಿಷ್ಣು ಸರ್ ಅವರ ತರನೇ ಕಾಣ್ತಾರೆ. ಯಾವುದೇ ಭಾಷೆಯ ಬೇದ-ಭಾವವಿಲ್ಲದೇ ಬಂದು ಸಿನಿಮಾ ನೋಡಿ. ಇದನ್ನ ಸಿನಿಮಾ ಅಂತ ನೋಡಿ'' ಎಂದು ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಡಬ್ಬಿಂಗ್ 'ಧೀರ'ನಿಗೆ ಪುನೀತ್ ರಾಜ್ ಕುಮಾರ್ ಅಭಿಮಾನಿಗಳು ಫುಲ್ ಕ್ಲಾಸ್.!

ಕನ್ನಡದಲ್ಲೇ ನೋಡ್ಬೇಕು

''ಬಹಳ ಸಂತೋಷ ಆಗ್ತಿದೆ. ತಮಿಳಿನಲ್ಲಿ ನೋಡಿರಲಿಲ್ಲ. ಕನ್ನಡದಲ್ಲಿ ಈ ಸಿನಿಮಾ ನೋಡಬೇಕು ಎಂದು ಇಷ್ಟಪಟ್ಟೆ. ಅದಕ್ಕೆ ಫಸ್ಟ್ ಡೇ ಬಂದು ನೋಡಿದೆ'' ಎಂದು ಸಿನಿಮಾ ನೋಡಿದ ಪ್ರೇಕ್ಷಕರು ಖುಷಿ ಹಂಚಿಕೊಂಡಿದ್ದಾರೆ.

ಡಬ್ಬಿಂಗ್ ವಿರೋಧಿ ಹೋರಾಟಗಾರರ ಕೊನೆಯ ದಾರಿಯೂ ಬಂದ್.!

ಭಾಷೆಯ ಬೆಳವಣಿಗೆ ಸಾಧ್ಯ

''ಇಡೀ ಜಗತ್ತನ್ನೇ ಕನ್ನಡದಲ್ಲಿ ನೋಡುವ ಆಸೆ. ಕನ್ನಡದಲ್ಲೇ ನೋಡಬೇಕು ಎನ್ನುವ ಭಾಷಾಭಿಮಾನ. ಭಾಷಾ ಬೆಳವಣಿಗೆಗೆ ಇದು ಸಹಕಾರಿಯಾಗುತ್ತೆ. ಬೇರೆ ಭಾಷಿಗರು ಕೂಡ ಅವರ ಸಿನಿಮಾನ ನಮ್ಮ ಭಾಷೆಯಲ್ಲಿ ನೋಡಲಿ. ಅದಕ್ಕೆ ನಾನು ಕೂಡ ಈ ಸಿನಿಮಾ ನೋಡ್ತಿದ್ದಿನಿ'' ಎಂದು ಕೆಲವು ಪ್ರೇಕ್ಷಕರು ತಿಳಿಸಿದ್ದಾರೆ.

'ಸತ್ಯದೇವ್' ನಂತರ 'ಧೀರ': ಮತ್ತೊಂದು ಡಬ್ಬಿಂಗ್ ಸಿನಿಮಾ ರಿಲೀಸ್.!

40 ವರ್ಷದ ಕನಸು

''ಸುಮಾರು 45, 50 ವರ್ಷಗಳ ಕನಸು ಇದು ಬೇರೆ ಭಾಷೆಯ ಚಿತ್ರಗಳು ಕನ್ನಡದಲ್ಲಿ ಡಬ್ಬಿಂಗ್ ಆಗುವುದು ಒಳ್ಳೆಯದು. ನಮ್ಮ ಫ್ಯಾಮಿಲಿ ಸಮೇತ ಸಿನಿಮಾ ನೋಡುತ್ತಿದ್ದೇನೆ'' ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

ಕನ್ನಡ ಚಿತ್ರರಂಗದ ವಿರುದ್ಧ ಕೆರಳಿದ ಕನ್ನಡ ಗ್ರಾಹಕರ ಕೂಟ: ಟ್ವಿಟ್ಟರ್ ನಲ್ಲಿ ಕನ್ನಡ ದ್ರೋಹ ಅಭಿಯಾನ

ಮತ್ತೆಲ್ಲಿ ಬಿಡುಗಡೆಯಾಗಿದೆ

ಬೆಂಗಳೂರಿನಲ್ಲಿ ಒಂದು ಚಿತ್ರಮಂದಿರ ಸೇರಿದಂತೆ ರಾಜ್ಯದ ಇತರೆ ನಗರದಲ್ಲೂ 'ಧೀರ' ತೆರೆಕಂಡಿದೆ. ಮೂಡಬಿದ್ರೆಯ 'ಅಮರಶ್ರೀ', ಕಾರ್ಕಳದ 'ಪ್ಲಾನೆಟ್' ಚಿತ್ರಮಂದಿರ, ಹಾಗೂ ಬೈಂದೂರಿನ 'ಶಂಕರ್' ಚಿತ್ರಮಂದಿರದಲ್ಲಿ ಈಗಾಗಲೇ ತೆರೆಕಂಡಿದೆ.

English summary
Tamil Super Star Ajith Kumar starrer Dheera, Kannada version of Arrambam, gets positive reviews from Audience.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada