»   » ಇಟಲಿ ವಿಮಾನ ಹತ್ತಿದ ಪುನೀತ್ ರಾಜ್ ಕುಮಾರ್

ಇಟಲಿ ವಿಮಾನ ಹತ್ತಿದ ಪುನೀತ್ ರಾಜ್ ಕುಮಾರ್

Posted By:
Subscribe to Filmibeat Kannada

ಪವರ್ ಸ್ಟಾರ್ ಚಿತ್ರದ ಬಳಿಕ ಪುನೀತ್ ರಾಜ್ ಕುಮಾರ್ ಅವರ ಮತ್ತೊಂದು ಬಹುನಿರೀಕ್ಷಿತ ಚಿತ್ರ ಎಂದರೆ 'ಧೀರ ರಣವಿಕ್ರಮ'. ಈ ಚಿತ್ರ ಹಲವಾರು ಕಾರಣಗಳಿಂದಾಗಿ ಸ್ಯಾಂಡಲ್ ವುಡ್ ನಲ್ಲಿ ಕುತೂಹಲ ಕೆರಳಿಸಿದೆ.

ಮೊದಲನೆಯದು ಜಯಣ್ಣ ಕಂಬೈನ್ಸ್ ಚಿತ್ರ ಎಂಬುದು. ಇನ್ನೊಂದು ಪವನ್ ಒಡೆಯರ್ ಅವರ ಚಿತ್ರ ಎಂಬ ಕಾರಣಕ್ಕೆ ಚಿತ್ರದ ಬಗ್ಗೆ ನಿರೀಕ್ಷೆಗಳು ಸಾಕಷ್ಟಿವೆ. ಇತ್ತೀಚೆಗೆ ಬಳ್ಳಾರಿಯಲ್ಲಿ ರೈಲ್ವೆ ಸ್ಟೇಷನ್ ಸನ್ನಿವೇಶದಲ್ಲಿ ಹಲವಾರು ಭೋಗಿಗಳನ್ನು ರಚಿಸಿ ರು.80 ಲಕ್ಷ ವೆಚ್ಚದಲ್ಲಿ ಭರ್ಜರಿ ಕ್ಲೈಮಕ್ಸ್ ಸನ್ನಿವೇಶವನ್ನು ಚಿತ್ರೀಕರಿಸಿಕೊಳ್ಳಲಾಗಿದೆ. [ಧೀರ ರಣವಿಕ್ರಮ ವಿಲನ್ ವಿಕ್ರಮ್ ಸಿಂಗ್]

ಇದಕ್ಕೆ ಖ್ಯಾತ ಸಾಹಸ ನಿರ್ದೇಶಕ ರವಿ ವರ್ಮ ಅವರು ವಿನೂತನ ಸಾಹಸ ಸನ್ನಿವೇಶಗಳನ್ನು ಸಂಯೋಜಿಸಿದ್ದಾರೆ. ಇದೀಗ ಕೆಲವು ಮಾತಿನ ಭಾಗ ಹಾಗೂ ಹಾಡಿಗಾಗಿ ಇಟಲಿ ದೇಶವನ್ನು ಸುತ್ತಿ ಬರಲಿದ್ದಾರೆ 'ರಣವಿಕ್ರಮ'.

Dheera Rana Vikrama Puneeth Rajkumar heads to Italy

ನಿರ್ದೇಶಕ ಪವನ್ ಒಡೆಯರ್ ಅವರು ಬೆಂಗಳೂರು, ಹಂಪಿ, ಮೆಟ್ರೊ ರೈಲು, ತುಂಗಭದ್ರ ನದಿ ದಂಡೆ ಹಾಗೂ ಇನ್ನಿತರ ಸ್ಥಳಗಳಲ್ಲಿ 80ಕ್ಕೂ ಅಧಿಕ ದಿವಸಗಳ ಚಿತ್ರೀಕರಣ ಮಾಡಿದ್ದಾರೆ.

ಜಯಣ್ಣ ಹಾಗೂ ಭೋಗೇಂದ್ರ ಅವರ ಮತ್ತೊಂದು ಮಹೋನ್ನತ ಚಿತ್ರವಿದು. ವೈಧಿ ಅವರ ಛಾಯಾಗ್ರಹಣ, ವಿ ಹರಿಕೃಷ್ಣ ಅವರ ಸಂಗೀತ, ಸುರೇಶ್ ಅವರ ಸಂಕಲನ, ರವಿ ವರ್ಮ ಅವರ ಸಾಹಸವನ್ನು ಒಳಗೊಂಡಿದೆ.

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರಿಗೆ ನಾಯಕಿಯಾರಾಗಿ ಅಂಜಲಿ ಹಾಗೂ ಆದ ಶರ್ಮ ಇದ್ದಾರೆ. ಹಿಂದಿ ಸಿನಿಮಾದ ಪ್ರಖ್ಯಾತ ಖಳ ನಟ ವಿಕ್ರಮ್ ಸಿಂಗ್, ಪೋಷಕ ಪಾತ್ರಗಳಲ್ಲಿ ದಿನೇಶ್ ಮಂಗಳೂರು, ಮುಖ್ಯಮಂತ್ರಿ ಚಂದ್ರು, ಡಾಕ್ಟರ್ ಗಿರೀಶ್ ಕಾರ್ನಾಡ್, ಅವಿನಾಶ್, ರಂಗಾಯಣ ರಘು, ಅಶೋಕ್, ಸುಧ ಬೆಳವಾಡಿ, ಶ್ರೀಧರ್ ಕೇಸರಿ, ಲಕ್ಷ್ಮಣ್ ರವಿವರ್ಮಾ ಹಾಗೂ ಇತರರು ಇದ್ದಾರೆ. (ಫಿಲ್ಮಿಬೀಟ್ ಕನ್ನಡ)

English summary
Power Star Puneeth Rajkumar and Adah Sharma heads to Italy for song sequence of the movie Rana Vikrama. The action film directed by Pavan Wadeyar featuring Power star Puneeth Rajkumar, Anjali and Adah Sharma in the lead roles.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada