Just In
Don't Miss!
- News
ಹಲ್ವಾ ಸಮಾರಂಭದೊಂದಿಗೆ ಅಂತಿಮ ಹಂತದಲ್ಲಿ ಬಜೆಟ್ 2021
- Finance
ಬಜೆಟ್ 2021: ಐ.ಟಿ. ಫೈಲಿಂಗ್ ನಲ್ಲಿ PAN ಕಾರ್ಡ್ ಗೆ ಏಕಿಷ್ಟು ಮಹತ್ವ, ಏನಿದರ ವಿಶೇಷ?
- Sports
ಐಪಿಎಲ್ 2021: ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಸಂಗಕ್ಕರ ಬಲ
- Automobiles
ಕರೋಕ್ ಎಸ್ಯುವಿಯನ್ನು ಸ್ಥಳೀಯವಾಗಿ ಅಭಿವೃದ್ಧಿಪಡಿಸಲಿದೆ ಸ್ಕೋಡಾ
- Lifestyle
ವಾರ ಭವಿಷ್ಯ: 12 ರಾಶಿಗಳ ರಾಶಿ ಫಲ ಹೇಗಿದೆ ನೋಡಿ
- Education
NIT Recruitment 2021: ರಿಸರ್ಚ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ರಾಜ್ ಮೊಮ್ಮಗ ಧೀರೇನ್ ಬಗ್ಗೆ ನಿಮಗೆ ತಿಳಿಯದ ಕುತೂಹಲಕಾರಿ ವಿಷಯ

ಡಾ.ರಾಜ್ ಕುಮಾರ್ ಅವರ ಮೊಮ್ಮಗ ಹಾಗೂ ನಟ ರಾಮ್ ಕುಮಾರ್ ಅವರ ಮಗ ಧೀರೇನ್ ರಾಮ್ ಕುಮಾರ್ ಸಿನಿಮಾರಂಗಕ್ಕೆ ಬರುತ್ತಿರುವ ವಿಷಯ ಎಲ್ಲರಿಗೂ ತಿಳಿದಿದೆ. ಇದೀಗ ಧೀರೇನ್ ರಾಮ್ ಕುಮಾರ್ ಸಿನಿಮಾ ಮಾಡುವುದರ ಹಿಂದಿನ ಕುತೂಹಲಕಾರಿ ಸಂಗತಿಗಳನ್ನು ಹಂಚಿಕೊಂಡಿದ್ದಾರೆ.
ದೊಡ್ಮನೆಯ ಮತ್ತೊಂದು ಕುಡಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದು, ಎಲ್ಲರೂ ಧೀರೇನ್ ಅವರನ್ನು ಸ್ವಾಗತಿಸುವುದಕ್ಕೆ ಕಾಯುತ್ತಿದ್ದಾರೆ. ಅಂದಹಾಗೆ, ಇತ್ತೀಚಿಗಷ್ಟೆ ನಡೆದ ಸಂದರ್ಶನದಲ್ಲಿ ಮಾತನಾಡಿದ ಧೀರೇನ್ ತಮ್ಮ ಸಿನಿಮಾ ಪಯಣ ಆರಂಭದ ಬಗ್ಗೆ ಕೆಲ ವಿಷಯವನ್ನು ಹಂಚಿಕೊಂಡಿದ್ದಾರೆ. ಮುಂದೆ ಓದಿ...

ಸಿನಿಮಾದ ವಾತಾವರಣ
''ಮನೆಯಲ್ಲಿ ಸಿನಿಮಾದ ವಾತಾವರಣ ಹೆಚ್ಚಾಗಿ ಇತ್ತು. ತಾತ.. ಅಪ್ಪ.. ಶಿವಣ್ಣ ಮಾಮ, ರಾಘಣ್ಣ ಮಾವ, ಅಪ್ಪು ಮಾಮ ಎಲ್ಲರೂ ಹೀರೋ ಆಗಿದ್ದರಿಂದ ಮೊದಲಿನಿಂದಲೂ ಸಿನಿಮಾದ ಬಗ್ಗೆಯೇ ಜಾಸ್ತಿ ಯೋಚಿಸುವ ಹಾಗೆ ಆಯಿತು'' - ಧೀರೇನ್ ರಾಮ್ ಕುಮಾರ್, ನಟ

ಪ್ರಭಾವ ಬೀರಿತು
''ನನಗೆ ಗೊತ್ತಿಲ್ಲದೆ ಸಿನಿಮಾ ನನ್ನ ಮೇಲೆ ಪ್ರಭಾವ ಬೀರಿತು. ತಾತ ಮಾವಂದಿರ ಸಿನಿಮಾಗಳ ಶೂಟಿಂಗ್ ಗೆ ಹೋಗುತ್ತಿದೆ. ಅಲ್ಲಿ ಹೋದಾಗ ಶೂಟಿಂಗ್ ಹೇಗೆ ನಡೆಯುತ್ತದೆ.. ಕ್ಯಾಮರಾ ಎಲ್ಲಿ ಇಟ್ಟಿದ್ದಾರೆ.. ಹೇಗೆ ಕೆಲಸ ಮಾಡುತ್ತಾರೆ ಎನ್ನುವುದನ್ನು ಗಮನಿಸುತ್ತಿದೆ. ಹೀಗೆ ನನಗೆ ಸಿನಿಮಾ ಆಸಕ್ತಿ ಬೆಳೆಯಿತು'' - ಧೀರೇನ್ ರಾಮ್ ಕುಮಾರ್, ನಟ

ಕಿರುಚಿತ್ರ ಮಾಡಿದ್ದೆ
''ಕಾಲೇಜ್ ನಲ್ಲಿ ಇದ್ದಾಗ ನಾನು ಸ್ನೇಹಿತರೊಂದಿಗೆ ಒಂದು ಶಾರ್ಟ್ ಮೂವಿ ಮಾಡಿದೆ. ಅದಕ್ಕೆ ಎಲ್ಲರಿಂದ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿತು. ಆ ಸಮಯದಲ್ಲಿ ಎಡಿಟಿಂಗ್ ಮಾಡುವಾಗ ಎಲ್ಲರೂ ನೀನು ಸ್ಕ್ರೀನ್ ನಲ್ಲಿ ಚೆನ್ನಾಗಿ ಕಾಣುತ್ತೀಯಾ ಅಂತ ಹೇಳಿದರು. ಆಗ ನನಗೆ ಸಣ್ಣ ಆಸೆ ಹುಟ್ಟಿತು'' - ಧೀರೇನ್ ರಾಮ್ ಕುಮಾರ್, ನಟ

ತಯಾರಿ ಶುರು ಮಾಡಿದೆ
''ಬರೀ ಚೆನ್ನಾಗಿದ್ದರೆ ಮಾತ್ರ ಹೀರೋ ಆಗಲ್ಲ.. ಭಾಷೆಯ ಮೇಲೆ ಹಿಡಿತ ಬೇಕು, ಅಂತ ಪುಸ್ತಕಗಳನ್ನು ಓದುವುದಕ್ಕೆ ಕೊಟ್ಟರು. ಒಳ್ಳೆಯ ಸಿನಿಮಾಗಳನ್ನು ನೋಡು ಅಂತ ಹೇಳಿದರು. ಬಳಿಕ ನಟನೆ, ಡ್ಯಾನ್ಸ್, ಜಿಮ್ ಗೆ ಹೋಗಿ ಎಲ್ಲ ರೀತಿಯ ತಯಾರಿ ಶುರು ಮಾಡಿದೆ'' - ಧೀರೇನ್ ರಾಮ್ ಕುಮಾರ್, ನಟ
ಸೆಕೆಂಡ್ ಇನ್ನಿಂಗ್ಸ್ ಗೆ ರೆಡಿಯಾಗುತ್ತಿರುವ ನಟ ರಾಮ್ ಕುಮಾರ್?

ಸದ್ಯದಲ್ಲಿಯೇ ಸಿನಿಮಾ ಬರುತ್ತೆ
''ನನ್ನ ಮೊದಲ ಸಿನಿಮಾದ ಕಥೆ ಇನ್ನೂ ರೆಡಿ ಆಗುತ್ತಿದೆ. ಸಿನಿಮಾ ಯಾವಾಗ ಶುರು ಅಂತ ಗೊತ್ತಿಲ್ಲ. ಆದರೆ ಆದಷ್ಟು ಬೇಗ ಪ್ರಾರಂಭ ಮಾಡುತ್ತೇವೆ'' - ಧೀರೇನ್ ರಾಮ್ ಕುಮಾರ್, ನಟ