For Quick Alerts
  ALLOW NOTIFICATIONS  
  For Daily Alerts

  ಕಿಡಿಗೇಡಿ ದರ್ಶನ್ ಮೇಲೆ ಚಪ್ಪಲಿ ಎಸೆದದ್ದರ ಬಗ್ಗೆ ಧೀರನ್ ರಾಮ್‌ಕುಮಾರ್ ಮೊದಲ ಪ್ರತಿಕ್ರಿಯೆ!

  |

  ನಿನ್ನೆ ( ಡಿಸೆಂಬರ್ 18 ) ಬಳ್ಳಾರಿಯ ಹೊಸಪೇಟೆಯಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ನಿರ್ದೇಶಕ ಹರಿಕೃಷ್ಣ ಜೋಡಿಯ ಕ್ರಾಂತಿ ಚಿತ್ರದ ಎರಡನೇ ಹಾಡು 'ಬೊಂಬೆ ಬೊಂಬೆ' ಬಿಡುಗಡೆಯಾಯಿತು.

  ಮೊದಲ ಹಾಡನ್ನು ಮೈಸೂರಿನಲ್ಲಿ ಅದ್ಧೂರಿಯಾಗಿ ಬಿಡುಗಡೆ ಮಾಡಿ ಸದ್ದು ಮಾಡಿದ್ದ ಕ್ರಾಂತಿ ತಂಡ ಎರಡನೇ ಹಾಡನ್ನು ಹೊಸಪೇಟೆಯಲ್ಲಿ ಬಿಡುಗಡೆ ಮಾಡುವುದಾಗಿ ಘೋಷಿಸಿತ್ತು‌. ಅದರಂತೆ ಹೊಸಪೇಟೆಯಲ್ಲಿ ಹಾಡು ಬಿಡುಗಡೆಗೆ ಭರದ ಸಿದ್ಧತೆ ನಡೆಸಲಾಗಿತ್ತು. ಅತ್ತ ಸಾಮಾಜಿಕ ಜಾಲತಾಣದಲ್ಲಿ ಹೊಸಪೇಟೆಯಲ್ಲಿ ಯಾರ ಹವಾ ಹೆಚ್ಚು ಎಂಬ ವಿಷಯಕ್ಕೆ ದೊಡ್ಡ ಚರ್ಚೆಗಳೂ ಸಹ ನಡೆದಿದ್ದವು. ಹೀಗಾಗಿ ಪುನೀತ್ ರಾಜ್ ಕುಮಾರ್ ಹಾಗೂ ದರ್ಶನ್ ಇಬ್ಬರ ಅಭಿಮಾನಿಗಳ ನಡುವೆ ಫ್ಯಾನ್ ವಾರ್ ಉಂಟಾಗಿತ್ತು.

  ದರ್ಶನ್ ಅಭಿಮಾನಿಗಳು ಹಾಕಿದ್ದ ಸವಾಲಿಗೆ ರೊಚ್ಚಿಗೆದ್ದ ಪುನೀತ್ ಫ್ಯಾನ್ಸ್ ಕ್ರಾಂತಿ ಹಾಡು ಬಿಡುಗಡೆ ಜಾಗದಲ್ಲೇ ಅಪ್ಪು ಬ್ಯಾನರ್ ಕಟ್ಟಿ ದರ್ಶನ್ ಅಭಿಮಾನಿಗಳ ಮುಂದೆಯೇ ಸ್ಟೇಜ್ ಹತ್ತಿ ಕುಣಿದಾಡಿದ್ದರು‌. ಅತ್ತ ದರ್ಶನ್ ಪುನೀತ್ ಪುತ್ಥಳಿಗೆ ಮಾಲಾರ್ಪಣೆ ಮಾಡುತ್ತಿದ್ದಂತೆ ಇಬ್ಬರೂ ನಟರ ಅಭಿಮಾನುಗಳ‌ ನಡುವಿನ ಫ್ಯಾನ್ ಕಡಿಮೆಯಾಗಿತ್ತು ಹಾಗೂ ಎಲ್ಲವೂ ಸರಿ ಹೋಗಿತ್ತು‌. ಇನ್ನು ಕಾರ್ಯಕ್ರಮ ಆರಂಭವಾದ ನಂತರ ವೇದಿಕೆ ಮೇಲೇರಿದ್ದ ದರ್ಶನ್ ಅವರಿಗೆ ಕಿಡಿಗೇಡಿಯೊಬ್ಬ ಚಪ್ಪಲಿ ಎಸೆದಿದ್ದ. ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ವೈರಲ್ ಆದ ಬೆನ್ನಲ್ಲೇ ದರ್ಶನ್ ಅಭಿಮಾನಿಗಳು ಇದು ಅಪ್ಪು ಅಭಿಮಾನಿಗಳದ್ದೇ ಕೆಲಸ ಎಂದು ಕಿಡಿಕಾರಿದರೆ ಇನ್ನೂ ಕೆಲವರು ಇದು ಮೂರನೇ ವ್ಯಕ್ತಿ ಅಪ್ಪು ಅಭಿಮಾನಿ ಸೋಗಿ‌ನಲ್ಲಿ ಮಾಡಿರುವ ಕೆಲಸ ಎಂದಿದ್ದಾರೆ‌. ಸದ್ಯ ಈ ಕೃತ್ಯ ಮಾಡಿದವನ ಬಂಧನವಾಗಬೇಕು ಎಂದು ಅಭಿಮಾನಿಗಳು ಪಟ್ಟು ಹಿಡಿದಿದ್ದು, ಈ ಕೃತ್ಯದ ಬಗ್ಗೆ ಸೆಲೆಬ್ರಿಟಿಗಳೂ ಸಹ ಪ್ರತಿಕ್ರಿಯೆ ನೀಡಿದ್ದಾರೆ. ದೊಡ್ಮನೆಯ ಧೀರನ್ ರಾಮ್ ಕುಮಾರ್ ಕೂಡ ಈ ಬಗ್ಗೆ ತಮ್ಮ ಮೊದಲ ಅಭಿಪ್ರಾಯ ಹೊರಹಾಕಿದ್ದಾರೆ.

  ಧೀರನ್ ಪ್ರತಿಕ್ರಿಯೆ ಏನು?

  ಧೀರನ್ ಪ್ರತಿಕ್ರಿಯೆ ಏನು?

  ರಾಮ್ ಕುಮಾರ್ ಅವರ ಮಗ ವರನಟ ರಾಜಕುಮಾರ್ ಅವರ ಮೊಮ್ಮಗನಾಗಿರುವ ಧೀರನ್ ರಾಮ್ ಕುಮಾರ್ ದರ್ಶನ್ ಮೇಲೆ ಚಪ್ಪಲಿ ಎಸೆದಿರುವ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ‌. ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್‌ ಮಾಡಿರುವ ಧೀರನ್ ರಾಮ್ ಕುಮಾರ್ "ನಮ್ಮದು ಕಲಾವಿದರ ಜಾತಿ, ನಾವೆಲ್ಲರೂ ಒಂದೇ. ಕಲಾವಿದರಿಗೆ ದಯವಿಟ್ಟು ಮರ್ಯಾದೆ ಕೊಡಬೇಕು ದಯವಿಟ್ಟು" ಎಂದು ಬರೆದುಕೊಂಡಿದ್ದಾರೆ. ಅಷ್ಟೇ ಅಲ್ಲದೇ ಓರ್ವ ನಟನಾದವನು ತನ್ನ ಸಹ ನಟರನ್ನು ಗೌರವಿಸುವುದು ಹಾಗೂ ಪ್ರೀತಿಸುವುದು ಅತಿಮುಖ್ಯ ಎಂದಿದ್ದಾರೆ. ಇನ್ನೂ ಮುಂದುವರಿದು ಇಡೀ ಚಿತ್ರರಂಗ ಕಲೆ ಹಾಗೂ ಕಲಾವಿದರ ಪರ ನಿಲ್ಲುತ್ತೆ. ದಯವಿಟ್ಟು ಕಲಾವಿದರನ್ನು ಗೌರವಿಸಿ ಎಂದು ಉಲ್ಲೇಖಿಸಿದ್ದಾರೆ.

  ದರ್ಶನ್ ಹಾಗೂ ಪುನೀತ್ ಅಭಿಮಾನಿಗಳ ನಡುವೆ ಮುಂದುವರಿದ ಫ್ಯಾನ್ ವಾರ್

  ದರ್ಶನ್ ಹಾಗೂ ಪುನೀತ್ ಅಭಿಮಾನಿಗಳ ನಡುವೆ ಮುಂದುವರಿದ ಫ್ಯಾನ್ ವಾರ್

  ಇನ್ನು ಈ ಘಟನೆ ನಡೆದ ನಂತರ ದರ್ಶನ್ ಹಾಗೂ ಪುನೀತ್ ರಾಜ್‌ಕುಮಾರ್ ಇಬ್ಬರ ನಡುವಿನ ಅಭಿಮಾನಿಗಳ ನಡುವಿನ ಫ್ಯಾನ್ ವಾರ್ ಹೆಚ್ಚಾಗಿದೆ. ದರ್ಶನ್ ಫ್ಯಾನ್ಸ್ ತಮ್ಮ ನೆಚ್ಚಿನ ನಟನ ಮೇಲೆ ಚಪ್ಪಲಿ ಎಸೆದದ್ದು ರಾಜ್‌ವಂಶ ಎಂದು ಟ್ರೋಲ್ ಮಾಡುತ್ತಿದ್ದರೆ, ಇತ್ತ ಪುನೀತ್ ರಾಜ್‌ಕುಮಾರ್ ಫ್ಯಾನ್ಸ್ ಯಾರೂ ಮೂರನೇ ವ್ಯಕ್ತಿ ಮಾಡಿದ ತಪ್ಪನ್ನು ನಮ್ಮ ಮೇಲೆ ಹಾಕಿ ಗೂಬೆ ಕೂರಿಸಬೇಡಿ ಎಂದು ಪ್ರತಿವಾದಿಸಿದ್ದಾರೆ.

  ಯಾರಾದರೂ ಮುಂದೆ ಬಂದು ಮಾತನಾಡಬೇಕಿದೆ

  ಯಾರಾದರೂ ಮುಂದೆ ಬಂದು ಮಾತನಾಡಬೇಕಿದೆ

  ಇನ್ನು ಘಟನಾ ಸಂದರ್ಭದಲ್ಲಿ ವೇದಿಕೆ ಮೇಲಿದ್ದ ಕ್ರಾಂತಿ ತಂಡದ ಯಾರಾದರೂ ಸದಸ್ಯರು ಮುಂದೆ ಬಂದು ನಡೆದದ್ದೇನು, ಇದರ ಬಗ್ಗೆ ಯಾವುದಾದರೂ ಕ್ರಮ ಕೈಗೊಳ್ಳಲಾಗುತ್ತಿದೆಯಾ ಎಂಬ ಮಾಹಿತಿಯನ್ನು ಬಿಚ್ಚಿಡಬೇಕಿದೆ. ತಮ್ಮ ಚಿತ್ರದ ಹಾಡು ಬಿಡುಗಡೆಯಿಂದಾಗಿ ಇಷ್ಟೆಲ್ಲಾ ಸಂಭವಿಸಿದ್ದರೂ ಮೌನ ವಹಿಸಿರುವುದರಿಂದ ಫ್ಯಾನ್‌ವಾರ್ ಇನ್ನಷ್ಟು ಹೆಚ್ಚಾಗಲಿದೆ.

  English summary
  Dheeren Ramkumar first reaction about slipper throw on Darshan incident
  Monday, December 19, 2022, 14:13
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X