For Quick Alerts
  ALLOW NOTIFICATIONS  
  For Daily Alerts

  'ಯುವರತ್ನ' ಚಿತ್ರದಲ್ಲಿ 'ಸಾಹೋ' ಸಾಹಸ ನಿರ್ದೇಶಕ

  |
  Yuvaratna Movie: ಸ್ಯಾಂಡಲ್‍ವುಡ್‍ಗೆ ಕಾಲಿಟ್ಟ ಸಾಹೋ ಚಿತ್ರದ ಸಾಹಸ ನಿರ್ದೇಶಕ | FILMIBEAT KANNADA

  'ಯುವರತ್ನ' ಚಿತ್ರತಂಡಕ್ಕ ಇತ್ತೀಚಿಗಷ್ಟೆ ನಟ ಪ್ರಕಾಶ್ ರೈ ಆಗಮನ ಆಗಿತ್ತು. ಈಗ ಸಿನಿಮಾದ ತಾಂತ್ರಿಕ ತಂಡಕ್ಕೆ ಸಾಹಸ ನಿರ್ದೇಶಕರ ಎಂಟ್ರಿಯಾಗಿದೆ. 'ಸಾಹೋ' ಚಿತ್ರದ ಸಾಹಸ ನಿರ್ದೇಶಕ 'ಯುವರತ್ನ' ಚಿತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ.

  ಪ್ರಭಾಸ್ ಅಭಿನಯದ 'ಸಾಹೋ' ಸಿನಿಮಾ ಆಕ್ಷನ್ ದೃಶ್ಯಗಳ ಮೂಲಕ ಗಮನ ಸೆಳೆದಿದೆ. ಈ ಚಿತ್ರಕ್ಕೆ ಸಾಹಸ ನಿರ್ದೇಶನ ಮಾಡಿದ್ದು, ದಿಲೀಪ್ ಸುಬ್ಬರಾಯನ್. ಇವರು ಈಗ' ಯುವರತ್ನ' ಸಿನಿಮಾ ಮಾಡುತ್ತಿದ್ದಾರೆ.

  'ಯುವರತ್ನ' ಚಿತ್ರಕ್ಕೆ ಎಂಟ್ರಿ ಕೊಟ್ಟ ಖ್ಯಾತ ನಟ ಪ್ರಕಾಶ್ ರೈ

  ದಿಲೀಪ್ ಸುಬ್ಬರಾಯನ್ ಚಿತ್ರತಂಡ ಸೇರಿಕೊಂಡ ವಿಷಯವನ್ನು ನಿರ್ದೇಶಕ ಸಂತೋಷ್ ಆನಂದ್ ರಾಮ್ ತಮ್ಮ ಟ್ವಿಟ್ಟರ್ ಖಾತೆಯ ಮೂಲಕ ತಿಳಿಸಿದ್ದಾರೆ. ಸದ್ಯ 'ಯುವರತ್ನ' ಚಿತ್ರದ ಸಾಹಸ ನಿರ್ದೇಶನ ಧಾರವಾಡದಲ್ಲಿ ನಡೆಯುತ್ತಿದೆ.

  ಪುನೀತ್ ರಾಜ್ ಕುಮಾರ್ ಅದ್ಬುತವಾಗಿ ಆಕ್ಷನ್ ಮಾಡುತ್ತಾರೆ. ಇಂತಹ ನಟನಿಗೆ ಅಷ್ಟೇ ಪ್ರತಿಭಾವಂತ ಫೈಟ್ ಮಾಸ್ಟರ್ ಸಿಕ್ಕಿದ್ದು, ಸಾಹಸ ದೃಶ್ಯಗಳು ಚೆನ್ನಾಗಿ ಬರುವುದರಲ್ಲಿ ಡೌಟೆ ಇಲ್ಲ.

  ಧಾರವಾಡ ಕಡೆ ಪಯಣ ಬೆಳೆಸಿದ ಪುನೀತ್ ರಾಜ್ ಕುಮಾರ್ : ಕಾರಣ ಇಲ್ಲಿದೆ

  'ಸಾಹೋ' ಮಾತ್ರವಲ್ಲದೆ ತಮಿಳಿನ 'ತೇರಿ', 'ವಿಶ್ವಾಸಂ', 'ಪುಲಿ' ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ದಿಲೀಪ್ ಸುಬ್ಬರಾಯನ್ ಆಕ್ಷನ್ ಡೈರೆಕ್ಟರ್ ಆಗಿದ್ದಾರೆ.

  English summary
  Dhilip Subbarayan will be the stunt director for Puneeth Rajkumar's 'Yuvaratna' kannada movie. The movie is directing by Santhosh Ananddram.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X