For Quick Alerts
  ALLOW NOTIFICATIONS  
  For Daily Alerts

  ಧ್ರುವ ಸರ್ಜಾ-ಎಪಿ ಅರ್ಜುನ್ ಚಿತ್ರಕ್ಕೆ ಮಾಸ್ ಟೈಟಲ್ ಫಿಕ್ಸ್!

  |

  'ದುಬಾರಿ' ಸಿನಿಮಾ ಪಕ್ಕಕ್ಕಿಟ್ಟ ಧ್ರುವ ಸರ್ಜಾ 'ಅದ್ಧೂರಿ' ನಿರ್ದೇಶಕ ಎಪಿ ಅರ್ಜುನ್ ಜೊತೆ ಹೊಸ ಸಿನಿಮಾ ಆರಂಭಿಸಿರುವುದು ಗೊತ್ತಿದೆ. ಅದಾಗಲೇ ಈ ಸಿನಿಮಾದ ಚಿತ್ರೀಕರಣ ಸಹ ಭರ್ಜರಿಯಾಗಿ ನಡೆಯುತ್ತಿದೆ. ಆರಂಭಿಕ ಹಂತದಲ್ಲಿ ಆಕ್ಷನ್ ದೃಶ್ಯಗಳನ್ನು ಶೂಟ್ ಮಾಡಲಾಗುತ್ತಿದ್ದು, ಭಾರತದ ಟಾಪ್ ಫೈಟ್ ಮಾಸ್ಟರ್ಸ್ ರಾಮ್-ಲಕ್ಷ್ಮಣ್ ಸಾಹಸ ನಿರ್ದೇಶನ ಮಾಡ್ತಿದ್ದಾರೆ.

  ಇದ್ದಕ್ಕಿದ್ದಂತೆ 'ಮಾರ್ಟಿನ್' ಆಗಲು ಹೊರಟ ಧ್ರುವ ಸರ್ಜಾ..!

  ಚೊಚ್ಚಲ ಚಿತ್ರದಲ್ಲಿ ಬ್ರೇಕ್ ಕೊಟ್ಟ ನಿರ್ದೇಶಕನ ಜೊತೆ ಮತ್ತೆ ಆಕ್ಷನ್ ಪ್ರಿನ್ಸ್ ಕೆಲಸ ಮಾಡ್ತಿರುವುದು ಸಹಜವಾಗಿ ಅಭಿಮಾನಿಗಳಲ್ಲಿ ಥ್ರಿಲ್ ಹೆಚ್ಚಿಸಿದೆ. ಈ ಕಾಂಬಿನೇಷನ್‌ನಲ್ಲಿ ಈ ಸಲ ಯಾವ ರೀತಿ ಸಿನಿಮಾ ನಿರೀಕ್ಷೆ ಮಾಡಬಹುದು ಎಂಬ ಲೆಕ್ಕಾಚಾರ ಶುರು ಮಾಡಿಕೊಂಡಿದ್ದಾರೆ. ಈ ಸಿನಿಮಾಗೆ ಯಾರು ನಾಯಕಿಯಾಗಬಹುದು, ಏನೆಂದು ಟೈಟಲ್ ಇಡಬಹುದು ಎನ್ನುವ ಚರ್ಚೆಗಳು ಸಾಮಾನ್ಯವಾಗಿದ್ದವು.

  ಧ್ರುವ ಸರ್ಜಾ ಚಿತ್ರಕ್ಕೆ ದಕ್ಷಿಣ ಭಾರತದ ಖ್ಯಾತ ಫೈಟ್ ಮಾಸ್ಟರ್ಸ್ ಎಂಟ್ರಿಧ್ರುವ ಸರ್ಜಾ ಚಿತ್ರಕ್ಕೆ ದಕ್ಷಿಣ ಭಾರತದ ಖ್ಯಾತ ಫೈಟ್ ಮಾಸ್ಟರ್ಸ್ ಎಂಟ್ರಿ

  ಇದೀಗ, ಧ್ರುವ ಸರ್ಜಾ ಮತ್ತು ಎಪಿ ಅರ್ಜುನ್ ಜೋಡಿಯ ಹೊಸ ಸಿನಿಮಾಕ್ಕೆ ಸಖತ್ ಆಗಿರುವ ಶೀರ್ಷಿಕೆ ಫಿಕ್ಸ್ ಆಗಿದೆ ಎಂಬ ಮಾಹಿತಿ ಹೊರಬಿದ್ದಿದೆ. ಅಷ್ಟಕ್ಕೂ ಏನದು ಟೈಟಲ್? ಮುಂದೆ ಓದಿ...

  'ಮಾರ್ಟಿನ್' ಅವತಾರದಲ್ಲಿ ಧ್ರುವ ಸರ್ಜಾ

  'ಮಾರ್ಟಿನ್' ಅವತಾರದಲ್ಲಿ ಧ್ರುವ ಸರ್ಜಾ

  ಆಕ್ಷನ್ ಪ್ರಿನ್ಸ್ ಮತ್ತು ಎಪಿ ಅರ್ಜುನ್ ಚಿತ್ರಕ್ಕೆ ಮಾರ್ಟಿನ್ ಎಂದು ನಾಮಕರಣ ಮಾಡಲು ಚಿತ್ರತಂಡ ನಿರ್ಧರಿಸಿದೆ ಎಂಬ ಮಾಹಿತಿ ಬಹಿರಂಗವಾಗಿದೆ. ಆದರೆ, ಈ ಸುದ್ದಿಯನ್ನು ಇನ್ನು ಅಧಿಕೃತವಾಗಿ ಪ್ರಕಟಿಸಿಲ್ಲ. 'ಮಾರ್ಟಿನ್' ಹೆಸರು ಕೇಳುತ್ತಿದ್ದಂತೆ ಸಿನಿಮಾದಲ್ಲಿ ಧ್ರುವ ಸರ್ಜಾ ಕ್ರಿಶ್ಚಿಯನ್ ಕುಟುಂಬದ ಯುವಕನಾಗಿರಬಹುದು ಎಂಬ ಕುತೂಹಲ ಕಾಡ್ತಿದೆ. ಈ ಹಿಂದೆ ನಟ ದರ್ಶನ್ ಅಭಿನಯದ ಚಿತ್ರಕ್ಕೆ 'ರಾಬರ್ಟ್' ಎಂದು ಹೆಸರಿಟ್ಟಾಗ ಕೆಲವರು ವಿರೋಧ ವ್ಯಕ್ತಪಡಿಸಿದ್ದರು. ಆದರೆ ಸಿನಿಮಾ ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಂಡಿತ್ತು.

  ನಾಯಕಿ ಬಗ್ಗೆ ಕುತೂಹಲ

  ನಾಯಕಿ ಬಗ್ಗೆ ಕುತೂಹಲ

  ದುಬಾರಿ ಸಿನಿಮಾ ಮಾಡಬೇಕಿದ್ದ ಉದಯ್ ಮೆಹ್ತಾ ಅವರೇ ಈ ಚಿತ್ರಕ್ಕೂ ಬಂಡವಾಳ ಹಾಕ್ತಿದ್ದಾರೆ. ಸದ್ಯಕ್ಕೆ ಟೈಟಲ್ ಬಗ್ಗೆ ಸುಳಿವು ಸಿಕ್ಕಿದ್ದು, ಈ ಚಿತ್ರಕ್ಕೆ ನಾಯಕಿ ಯಾರಾಗ್ತಾರೆ ಎಂದು ಕಾತುರತೆ ಹೆಚ್ಚಿಸಿದೆ. ಸುಮಾರು 9 ವರ್ಷದ ನಂತರ ಧ್ರುವ ಮತ್ತು ಅರ್ಜುನ್ ಒಟ್ಟಿಗೆ ಸಿನಿಮಾ ಮಾಡ್ತಿರುವುದು ಕೂಡ ಸಹಜವಾಗಿ ಥ್ರಿಲ್ ಹೆಚ್ಚಿಸಿದೆ. ಧ್ರುವ ಸರ್ಜಾ ಚೊಚ್ಚಲ ಸಿನಿಮಾ 'ಅದ್ಧೂರಿ' 2012ರಲ್ಲಿ ಬಿಡುಗಡೆಯಾಗಿತ್ತು. ರಾಧಿಕಾ ಪಂಡಿತ್ ನಾಯಕಿಯಾಗಿದ್ದರು.

  ಮತ್ತೆ ಒಂದಾದ 'ಅದ್ದೂರಿ' ಜೋಡಿ: 'ದುಬಾರಿ'ಗೂ ಮೊದಲು ಮತ್ತೊಂದು ಸಿನಿಮಾಗೆ ಸಜ್ಜಾದ ಧ್ರುವಮತ್ತೆ ಒಂದಾದ 'ಅದ್ದೂರಿ' ಜೋಡಿ: 'ದುಬಾರಿ'ಗೂ ಮೊದಲು ಮತ್ತೊಂದು ಸಿನಿಮಾಗೆ ಸಜ್ಜಾದ ಧ್ರುವ

  ದುಬಾರಿ ಸಿನಿಮಾ ನಿಲ್ಲಲು ಕಾರಣವೇನು?

  ದುಬಾರಿ ಸಿನಿಮಾ ನಿಲ್ಲಲು ಕಾರಣವೇನು?

  ಪೊಗರು ಸಿನಿಮಾ ಆಗುತ್ತಿದ್ದಂತೆ ಅದೇ ಕಾಂಬಿನೇಷನ್‌ನಲ್ಲಿ 'ದುಬಾರಿ' ಸಿನಿಮಾ ಆರಂಭ ಆಯಿತು. ಸ್ಕ್ರಿಪ್ಟ್ ಪೂಜೆ ಹಾಗೂ ಮುಹೂರ್ತ ಸಹ ನಡೆದಿತ್ತು. ಅದಾದ ಮೇಲೆ ಚಿತ್ರ ಸ್ಥಗಿತಗೊಂಡಿದೆ. ಇದುವರೆಗೂ ದುಬಾರಿ ಸಿನಿಮಾ ನಿಲ್ಲಲು ಸ್ಪಷ್ಟ ಕಾರಣ ಬಹಿರಂಗವಾಗಿಲ್ಲ. ಆದರೆ, ನಿರ್ದೇಶಕರ ವಿಚಾರದಲ್ಲಿ ಚಿತ್ರತಂಡ ಕಾಂಪ್ರುಮೈಸ್ ಆಗಿಲ್ಲ ಎಂದು ವರದಿಯಾಗಿದೆ. ಮತ್ತೊಂದೆಡೆ ದುಬಾರಿ ಚಿತ್ರದಿಂದ ಹಿಂದೆ ಸರಿದಿರುವ ನಂದಕಿಶೋರ್ ನಿರ್ಮಾಪಕ ಕೆ ಮಂಜು ಅವರ ಮಗ ಶ್ರೇಯಸ್ ಜೊತೆ 'ರಾಣಾ' ಸಿನಿಮಾ ಮಾಡ್ತಿದ್ದಾರೆ.

  ಪ್ರೇಮ್ ಜೊತೆ ಧ್ರುವ ಸರ್ಜಾ ಸಿನಿಮಾ

  ಪ್ರೇಮ್ ಜೊತೆ ಧ್ರುವ ಸರ್ಜಾ ಸಿನಿಮಾ

  'ಜೋಗಿ' ಪ್ರೇಮ್ ತಮ್ಮ ಮುಂದಿನ ಸಿನಿಮಾವನ್ನು ಆಗಸ್ಟ್ 24 ರಂದು ಘೋಷಣೆ ಮಾಡಲಿದ್ದಾರೆ. ಅದಾಗಲೇ ಸ್ಕ್ರಿಪ್ಟ್ ಕೆಲಸ ಮುಗಿಸಿ ಪೂಜೆ ಸಹ ಮಾಡಿದ್ದರು. ಈ ಚಿತ್ರಕ್ಕೆ ಹೀರೋ ಯಾರಾಗ್ತಾರೆ ಎನ್ನುವ ಕುತೂಹಲ ಹೆಚ್ಚಿದ್ದು, ಧ್ರುವ ಸರ್ಜಾ ಹೆಸರು ಹೆಚ್ಚು ಚರ್ಚೆಯಲ್ಲಿದೆ. ಜಗ್ಗುದಾದ ನಿರ್ದೇಶನ ಮಾಡಿದ್ದ ರಾಘವೇಂದ್ರ ಹಗ್ಡೆ ಜೊತೆಯೂ ಧ್ರುವ ಸಿನಿಮಾವೊಂದಕ್ಕೆ ಕಮಿಟ್ ಆಗಿದ್ದಾರೆ ಎನ್ನಲಾಗಿದೆ.

  English summary
  Kannada actor Dhruva Sarja and AP Arjun Movie produced by Uday Mehta Titled as Martin.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X