For Quick Alerts
  ALLOW NOTIFICATIONS  
  For Daily Alerts

  ಗಾಂಧಿ ಜಯಂತಿಯ ವಿಶೇಷ ದಿನದಂದು ತಂದೆಯಾದ ಖುಷಿ ಹಂಚಿಕೊಂಡ ಧ್ರುವ ಸರ್ಜಾ

  |

  ಕನ್ನಡ ಚಿತ್ರರಂಗದ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರ ಪತ್ನಿ ಪ್ರೇರಣಾ ಧ್ರುವ ಸರ್ಜಾ ಗಾಂಧಿಜಯಂತಿಯ ವಿಶೇಷ ದಿನದಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

  ನಿನ್ನೆ ( ಅಕ್ಟೋಬರ್ 1 ) ಬೆಂಗಳೂರಿನ ಕೆ ಆರ್ ರಸ್ತೆಯಲ್ಲಿರುವ ಅಕ್ಷ ಆಸ್ಪತ್ರೆಗೆ ದಾಖಲಾಗಿದ್ದ ಪ್ರೇರಣಾ ಧ್ರುವ ಸರ್ಜಾ ಅವರನ್ನು ಇಂದು ಬೆಳಿಗ್ಗೆ 8.30ಕ್ಕೆ ಆಪರೇಷನ್ ಕೊಠಡಿಗೆ ಕೊಂಡೊಯ್ಯಲಾಗಿತ್ತು. ಈ ಸಂದರ್ಭದಲ್ಲಿ ಧ್ರುವ ಸರ್ಜಾ ಆಪರೇಷನ್ ಕೊಠಡಿ ಬಳಿ ಗೌನ್ ಧರಿಸಿ ಕಾಯುತ್ತಾ ನಿಂತಿದ್ದ ದೃಶ್ಯಗಳು ಹಾಗೂ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು. ಸದ್ಯ ಈ ಕುರಿತಾಗಿ ಸ್ವತಃ ಧ್ರುವ ಸರ್ಜಾ ಅವರೇ ಮಾಹಿತಿಯನ್ನು ನೀಡಿದ್ದು ತಮಗೆ ಹೆಣ್ಣು ಮಗು ಜನಿಸಿರುವ ವಿಷಯವನ್ನು ಇನ್ ಸ್ಟಾಗ್ರಾಂ ಸ್ಟೋರಿಯ ಮೂಲಕ ಹಂಚಿಕೊಂಡಿದ್ದಾರೆ.

  'ಸುಂದರವಾದ ಹೆಣ್ಣು ಮಗು ಜನಿಸಿದೆ. ನಾರ್ಮಲ್ ಡೆಲಿವರಿ ಆಗಿದೆ. ವೈದ್ಯ ಮಾಧುರಿ ಸುಮಂತ್ ಅವರಿಗೆ ಧನ್ಯವಾದಗಳು. ಜೈ ಹನುಮಾನ್' ಎಂದು ಧ್ರುವ ಸರ್ಜಾ ಸ್ಟೋರಿಯಲ್ಲಿ ಬರೆದುಕೊಳ್ಳುವುದರ ಮೂಲಕ ತಮ್ಮ ಅನುಯಾಯಿಗಳ ಜತೆ ತಂದೆಯಾದ ಖುಷಿಯನ್ನು ಹಂಚಿಕೊಂಡಿದ್ದಾರೆ.

  ಹೆಣ್ಣುಮಗು ಬೇಕೆಂದು ಈ ಹಿಂದೆಯೇ ಸಂದರ್ಶನದಲ್ಲಿ ಹೇಳಿದ್ದ ಧ್ರುವ

  ಹೆಣ್ಣುಮಗು ಬೇಕೆಂದು ಈ ಹಿಂದೆಯೇ ಸಂದರ್ಶನದಲ್ಲಿ ಹೇಳಿದ್ದ ಧ್ರುವ

  ಇನ್ನು ಈ ಹಿಂದೆ ಖಾಸಗಿ ವಾಹಿನಿಯೊಂದರ ಸಂದರ್ಶನದಲ್ಲಿ ಭಾಗವಹಿಸಿದ್ದ ಧ್ರುವ ಸರ್ಜಾಗೆ ಹೆಣ್ಣು ಮಗು ಬೇಕಾ ಅಥವಾ ಗಂಡು ಮಗು ಬೇಕಾ ಎಂಬ ಪ್ರಶ್ನೆಯನ್ನು ಕೇಳಲಾಗಿತ್ತು. ಈ ಪ್ರಶ್ನೆಗೆ ಉತ್ತರಿಸಿದ್ದ ಧ್ರುವ ಸರ್ಜಾ 'ಯಾವ ಮಗು ಆದರೂ ಸಹ ಸಂತೋಷಾನೆ. ಮನೆಯಲ್ಲಿ ಈಗಾಗಲೇ ಗಂಡು ಮಗ ರಾಯನ್ ಇದ್ದಾನೆ. ಹೀಗಾಗಿ ಹೆಣ್ಣು ಮಗು ಆಗಬೇಕು. ವೈಯಕ್ತಿಕವಾಗಿ ನನಗೆ ಹೆಣ್ಣು ಮಗು ಎಂದರೆ ಇಷ್ಟ. ಹೆಣ್ಣುಮಗುನೇ ಜನಿಸಬೇಕು' ಎಂದು ಹೇಳಿಕೆ ನೀಡಿದ್ದರು. ಇದೀಗ ಧ್ರುವ ಸರ್ಜಾ ಕೋರಿಕೆಯಂತೆ ಹೆಣ್ಣು ಮಗುವಿಗೆ ತಂದೆಯಾಗಿದ್ದಾರೆ.

  ವಿಷಯ ತಿಳಿಯುತ್ತಿದ್ದಂತೆ ಹರಿದುಬಂತು ಶುಭಾಶಯಗಳ ಮಹಾಪೂರ

  ವಿಷಯ ತಿಳಿಯುತ್ತಿದ್ದಂತೆ ಹರಿದುಬಂತು ಶುಭಾಶಯಗಳ ಮಹಾಪೂರ

  ಇನ್ನು ಧ್ರುವ ಸರ್ಜಾ ಪತ್ನಿ ಪ್ರೇರಣಾ ಧ್ರುವ ಸರ್ಜಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ ಎಂಬ ಸುದ್ದಿ ಹೊರ ಬೀಳುತ್ತಿದ್ದಂತೆಯೇ ಸಾಮಾಜಿಕ ಜಾಲತಾಣದ ತುಂಬಾ ದಂಪತಿಗಳಿಗೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಹಲವಾರು ಸೆಲೆಬ್ರಿಟಿಗಳು ಹಾಗೂ ಅಭಿಮಾನಿಗಳು ಧ್ರುವ ಸರ್ಜಾ ಮತ್ತು ಪ್ರೇರಣಾ ಸರ್ಜಾರನ್ನು ತಮ್ಮ ಖಾತೆಗಳಲ್ಲಿ ಉಲ್ಲೇಖಿಸಿ ಶುಭಾಶಯಗಳನ್ನು ಕೋರಿ ಮಗು ಆರೋಗ್ಯದಿಂದ ಇರಲಿ ಎಂದು ಆಶಿಸಿದ್ದಾರೆ.

  ಮಗುವಿನ ಚಿತ್ರಕ್ಕಾಗಿ ಕಾಯುತ್ತಿದ್ದಾರೆ ಫ್ಯಾನ್ಸ್

  ಮಗುವಿನ ಚಿತ್ರಕ್ಕಾಗಿ ಕಾಯುತ್ತಿದ್ದಾರೆ ಫ್ಯಾನ್ಸ್

  ಇಷ್ಟು ದಿನಗಳವರೆಗೆ ಧ್ರುವ ಸರ್ಜಾಗೆ ಯಾವ ಮಗು ಜನಿಸಬಹುದು ಎಂಬ ಚರ್ಚೆಗಳು ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿದ್ದವು. ಸದ್ಯ ಇದೀಗ ಹೆಣ್ಣು ಮಗು ಜನಿಸಿದ ನಂತರ ಮಗು ಹೇಗಿದೆ ಎಂಬ ಕುತೂಹಲ ಹೆಚ್ಚಿದೆ. ಧ್ರುವ ಸರ್ಜಾ ಆದಷ್ಟು ಬೇಗ ಮಗುವಿನ ಚಿತ್ರವನ್ನು ಹಂಚಿಕೊಳ್ತಾರಾ ಅಥವಾ ಇತರೆ ಸೆಲೆಬ್ರಿಟಿಗಳ ಹಾಗೆ ಹಲವು ತಿಂಗಳುಗಳು ಕಳೆದ ನಂತರ ತಮ್ಮ ಮಗುವಿನ ಚಿತ್ರವನ್ನು ಹಂಚಿಕೊಳ್ಳಲಿದ್ದಾರಾ ಎಂಬ ಪ್ರಶ್ನೆ ಎದ್ದಿದೆ.

  English summary
  Dhruva Sarja and Prerana Dhruva Sarja blessed with Baby girl
  Monday, October 3, 2022, 10:22
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X