»   » ಬಹದ್ದೂರ್ ಬಹಳ ಅದ್ದೂರಿ ಫೈಟ್ ಗೆ ಒಂದು ಕೋಟಿ

ಬಹದ್ದೂರ್ ಬಹಳ ಅದ್ದೂರಿ ಫೈಟ್ ಗೆ ಒಂದು ಕೋಟಿ

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ಅಂದರೆ ಕೋಟಿಗಳನ್ನ ಬಿಚ್ಚಲ್ಲ. ಖರ್ಚು ಮಾಡೋದಿಲ್ಲ. ಸಿನಿಮಾನ ರಿಚ್ ಆಗಿ ಮಾಡೋದಿಲ್ಲ ಅನ್ನೋ ದೂರುಗಳು ಇತ್ತೀಚೆಗೆ ಕಡಿಮೆಯಾಗ್ತಿದೆ. ಯಾಕಂದ್ರೆ ಕನ್ನಡದ ಸಿನಿಮಾಗಳೂ ಕೂಡ ನಾವು ಯಾರ್ಗೂ ಕಮ್ಮಿ ಇಲ್ಲ ಅಂತ ರಿಚ್ ಆಗಿಯೇ ತಯಾರಾಗ್ತಿವೆ. ಇದಕ್ಕೊಂದು ಬೆಸ್ಟ್ ಎಕ್ಸಾಂಪಲ್ ಅಂದ್ರೆ ಧ್ರುವ ಸರ್ಜಾ ಅಭಿನಯದ 'ಬಹದ್ದೂರ್' ಚಿತ್ರ.

'ಬಹದ್ದೂರ್' ಚಿತ್ರಕ್ಕೆ ಒಂದು ಫೈಟ್ ರೆಡಿಮಾಡಿರೋ ಚಿತ್ರತಂಡ ಎಂಟು ರೀತಿಯ ವೆರೈಟಿ ಫೈಟ್ ಗಳನ್ನ ಒಂದೇ ಫೈಟ್ ಸೀಕ್ವೆನ್ಸ್ ನಲ್ಲಿ ತಂದಿದೆ. ಕರಾಟೆ, ಕುಂಗ್ ಫು, ಮಾರ್ಷಲ್ ಆರ್ಟ್ಸ್ ಹೀಗೆ ಎಂಟು ರೀತಿಯಲ್ಲಿ ಹೀರೋನನ್ನ ವಿಲನ್ ಗಳು ಅಟ್ಯಾಕ್ ಮಾಡ್ತಾರೆ. ಒಂದೊಂದು ಫೈಟ್ಗೂ ಒಂದೊಂದು ದಿನ ಶೂಟ್ ಮಾಡಿರೋ ಚಿತ್ರತಂಡ ಒಂದು ಫೈಟಿಂಗಾಗಿ 8 ದಿನ ಶೂಟ್ ಮಾಡಿದೆ. [ಕೈ ಸುಟ್ಟುಕೊಂಡ ನಿರ್ಮಾಪಕನ ಕೈ ಹಿಡಿದ ಅದ್ದೂರಿ]


ಬಹುಶಃ ಕನ್ನಡದ ಯಾವ ಸಿನಿಮಾ ಕೂಡ ಒಂದು ಫೈಟನ್ ಎಂಟು ದಿನ ಮಾಡಿಲ್ಲ. ಎಂಟು ದಿನದಲ್ಲಿ ಸಿನಿಮಾದಲ್ಲಿ ಬರೋ ನಾಲ್ಕೂ ಫೈಟನ್ನ ಮುಗಿಸ್ತಾರೆ. ಆದರೆ ಚೆನ್ನೈ ಮೂಲದ ಗಣೇಶ್ ಅನ್ನೋ ಫೈಟ್ ಮಾಸ್ಟರ್ ರಿಂದ ಈ ರಿಚ್ ಫೈಟ್ ಮಾಡಿಸಿರೋ ಚಿತ್ರತಂಡ ಇದಕ್ಕಾಗಿ ಮೂರು ಕಡೆ ಭರ್ಜರಿ ಸೆಟ್ ಹಾಕಿದೆ. ಈ ಒಂದು ಫೈಟ್ಗೇನೇ ಚಿತ್ರತಂಡ ಕೋಟಿ ಖರ್ಚು ಮಾಡಿದೆ.

ಚೇತನ್ ನಿರ್ದೇಶನದ 'ಬಹದ್ದೂರ್' ಚಿತ್ರದಲ್ಲಿ ಸೂಪರ್ ಹಿಟ್ 'ಅದ್ಧೂರಿ' ಚಿತ್ರದ ಜೋಡಿ ರಾಧಿಕಾ ಪಂಡಿತ್ ಧ್ರುವ ಸರ್ಜಾ ಮತ್ತೊಮ್ಮೆ ಜೋಡಿಯಾಗಿದ್ದಾರೆ. ಇತ್ತೀಚೆಗೆ ಚಿತ್ರತಂಡ ಚಿತ್ರದ ಮತ್ತೊಂದು ಫೈಟ್ ಗೆ 32 ಅಡಿ ಎತ್ತರದ ಪಂಚಮುಖಿ ಹನುಮಾನ್ ಮೂರ್ತಿಯ ಸೆಟ್ ಹಾಕಿ ಅದ್ಧೂರಿ ಫೈಟ್ ಶೂಟಿಂಗ್ ಮಾಡಿತ್ತು.

ಇದರ ಬಗ್ಗೆ ನಿರ್ದೇಶಕ ಚೇತನ್ ಹೇಳೋದು ಒಂದೇ ಮಾತು; ನಾವು ತೆಲುಗು, ತಮಿಳಿಗಿಂತ ಕಡಿಮೆ ಇರ್ಬಾರ್ದು, ಅದ್ಧೂರಿತನಕ್ಕೆ ಮತ್ತೊಂದು ಹೆಸರೇ ಬಹಾದ್ದೂರ್. ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ಇದ್ದು ಲೆಜೆಂಡ್ ಇಂಟರ್ ನ್ಯಾಶನಲ್ ಗ್ರೂಪ್ ಚಿತ್ರವನ್ನು ನಿರ್ಮಿಸುತ್ತಿದೆ.

English summary
Recently Dhruva Sarja & Radhika Pandit lead Kannanda movie Bahaddur superb action fight scene shot in eight days and spent on Rs.1 crore. The movie directed by new comer Chethan Kumar. It's a swamake. Story screenplay written by Chethan.
Please Wait while comments are loading...