For Quick Alerts
  ALLOW NOTIFICATIONS  
  For Daily Alerts

  11 ಗಂಟೆಗೆ ಉಂಗುರ ಬದಲಿಸಿಕೊಳ್ಳಲಿರುವ ಧ್ರುವ-ಪ್ರೇರಣಾ

  |

  ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮತ್ತು ಪ್ರೇರಣಾ ಶಂಕರ್ ಅವರ ನಿಶ್ಚಿತಾರ್ಥ ಇಂದು ಬೆಳಿಗ್ಗೆ 11 ಗಂಟೆಗೆ ಬನಶಂಕರಿಯ ಧರ್ಮಗಿರಿಯ ದೇವಸ್ಥಾನದಲ್ಲಿ ನಡೆಯಲಿದೆ.

  ಹಿಂದೂ ಸಂಪ್ರದಾಯದಂತೆ ಶಾಸ್ತ್ರೋಕ್ತವಾಗಿ ಎಂಗೇಜ್ ಮೆಂಟ್ ನಡೆಯಲಿದ್ದು, ಅದಕ್ಕಾಗಿ ಸಕಲ ಸಿದ್ಧತೆಗಳ ನಡೆದಿವೆ. ನಟ, ಕಲಾವಿದ ಅರುಣ್ ಸಾಗರ್ ಕುಸುರಿಯಲ್ಲಿ ತೆಂಗಿನಗರಿಯ ವೇದಿಕೆ ನಿರ್ಮಿಸಿದ್ದಾರೆ. ಧ್ರುವ ನಿಶ್ಚಿತಾರ್ಥಕ್ಕೆ ಕೆಲವೇ ಗಣ್ಯರಿಗೆ ಮಾತ್ರ ಆಹ್ವಾನ ನೀಡಲಿದ್ದಾರೆ, ಚಿತ್ರರಂಗದ ಸ್ಟಾರ್ ನಟರು ಭಾಗಿಯಾಗಲಿದ್ದಾರೆ.

  ನಟ ಧ್ರುವ ಸರ್ಜಾ - ಪ್ರೇರಣಾ ನಿಶ್ಚಿತಾರ್ಥಕ್ಕೆ ತಯಾರಿ

  ಸರ್ಜಾ ಕುಟುಂಬದವರು ಆಂಜನೇಯನ ಪರಮ ಭಕ್ತರಾಗಿದ್ದು ಧರ್ಮಗಿರಿಯ ಆಂಜನೇಯ ಸ್ವಾಮಿ ದೇವಾಲಯದಲ್ಲಿ ನಿಶ್ಚಿತಾರ್ಥ ನಡೆಯಲಿದೆ. ಧ್ರುವ ಮಾವ ಅರ್ಜುನ್ ಸರ್ಜಾ ಸಾರಥ್ಯದಲ್ಲಿ ಎಲ್ಲವೂ ನಡೆಯುತ್ತಿದೆ. ವಿಶೇಷ ಅಂದ್ರೆ, ಪ್ರೇರಣಾಗೆ 24 ಲಕ್ಷ ರೂ. ವೆಚ್ಚದ ಉಂಗುರ ತೊಡಿಸಲಿದ್ದಾರೆ.

  ಧ್ರುವಗೆ ಪ್ರೀತಿಯ ಪಾಠ ಮಾಡಿದ ಈ ಟೀಚರ್ ಯಾರು?

  ಪ್ರೇರಣಾ ನಟ ಧ್ರುವ ಸರ್ಜಾ ಅವರ ಎದುರು ಮನೆಯ ಹುಡುಗಿ. ಸುಮಾರು ವರ್ಷಗಳಿಂದ ಇಬ್ಬರ ನಡುವೆ ಪರಿಚಯ ಇತ್ತು. ಕಳೆದ 14 ವರ್ಷಗಳಿಂದ ಒಬ್ಬರನ್ನೊಬ್ಬರು ಪ್ರೀತಿ ಮಾಡುತ್ತಿದ್ದಾರೆ. ಧ್ರುವ ಸರ್ಜಾ ಹಾಗೂ ಪ್ರೇರಣಾ ನಡುವೆ ಪ್ರೀತಿ ಹುಟ್ಟಿದ್ದ ಸಮಯದಲ್ಲಿ ಧ್ರುವ ಇನ್ನೂ ಚಿತ್ರರಂಗಕ್ಕೆ ಬಂದಿರಲಿಲ್ಲ. 16 ವರ್ಷದ ಹುಡುಗನಾಗಿದ್ದಾಗ ಪ್ರೇರಣಾ ಮೇಲೆ ಧ್ರುವಗೆ ಲವ್ ಆಗಿತ್ತು.

  English summary
  Dhruva Sarja is all set to get engaged to his childhood sweetheart, Prerana Shankar, today 11am at banashankari temple.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X