For Quick Alerts
  ALLOW NOTIFICATIONS  
  For Daily Alerts

  ನವೆಂಬರ್ 6ಕ್ಕೆ ಧ್ರುವ ಸರ್ಜಾ ಹೊಸ ಸಿನಿಮಾದ ಟೈಟಲ್ ಘೋಷಣೆ

  |

  'ಭರ್ಜರಿ' ಸಿನಿಮಾ ಬಳಿಕ ಧ್ರುವ ಸರ್ಜಾ ನಟಿಸುತ್ತಿರುವ ಚಿತ್ರ 'ಪೊಗರು'. ನಂದ ಕಿಶೋರ್ ನಿರ್ದೇಶನದಲ್ಲಿ ತಯಾರಾಗಿರುವ ಈ ಚಿತ್ರ ಎರಡು ವರ್ಷದಿಂದ ಕುತೂಹಲ ಹೆಚ್ಚಿಸಿದೆ. ಹೆಚ್ಚಿನ ನಿರೀಕ್ಷೆಗಳೊಂದಿಗೆ ಚಿತ್ರೀಕರಣ ಮುಗಿಸಿ ಈಗ ಬಿಡುಗಡೆಗೂ ಸಜ್ಜಾಗಿದೆ.

  ಧ್ರುವ ಸರ್ಜಾ ಮತ್ತು ನಂದ ಕಿಶೋರ್ ಕಾಂಬಿನೇಷನ್ ಮೊದಲ ಸಿನಿಮಾ ಬಿಡುಗಡೆಗೂ ಮುಂಚೆ ಈ ಜೋಡಿ ಮತ್ತೊಂದು ಚಿತ್ರ ಕೈಗೆತ್ತಿಕೊಂಡಿದೆ. 'ಬಚ್ಚನ್' ಸಿನಿಮಾ ನಿರ್ಮಿಸಿದ್ದ ಉದಯ್ ಮೆಹ್ತಾ ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರದ ಸ್ಕ್ರಿಪ್ಟ್ ಪೂಜೆ ಅಕ್ಟೋಬರ್ 17 ರಂದು ನಡೆದಿತ್ತು.

  ಚಿರು ಹುಟ್ಟುಹಬ್ಬದಂದು ಧ್ರುವ ಸರ್ಜಾ ಹೊಸ ಸಿನಿಮಾ ಸ್ಕ್ರಿಪ್ಟ್ ಪೂಜೆಚಿರು ಹುಟ್ಟುಹಬ್ಬದಂದು ಧ್ರುವ ಸರ್ಜಾ ಹೊಸ ಸಿನಿಮಾ ಸ್ಕ್ರಿಪ್ಟ್ ಪೂಜೆ

  ಇದೀಗ, ಚಿತ್ರದ ಮುಹೂರ್ತ ಹಾಗೂ ಟೈಟಲ್ ಏನು ಎಂಬುದರ ಕುರಿತು ಧ್ರುವ ಸರ್ಜಾ ಮಾಹಿತಿ ನೀಡಿದ್ದಾರೆ. ಅಕ್ಟೋಬರ್ 26 ರಂದು ಉದಯ್ ಮೆಹ್ತಾ ನಿರ್ಮಾಣದ ಹೊಸ ಸಿನಿಮಾದ ಮೂಹೂರ್ತ ಕಾರ್ಯಕ್ರಮ ನಡೆಯಲಿದೆ.

  ಅಕ್ಟೋಬರ್ 26 ರಂದು ಬಸವೇಶ್ವರ ನಗರದ ಮಹಾಗಣಪತಿ ದೇವಸ್ಥಾನದಲ್ಲಿ ಮುಂಜಾನೆ 5 ಗಂಟೆಗೆ ಮೂಹೂರ್ತ ನಡೆಯಲಿದೆ. ಇನ್ನು ನವೆಂಬರ್ 6 ರಂದು ಈ ಚಿತ್ರದ ಹೆಸರೇನು ಎನ್ನುವುದನ್ನು ಘೋಷಣೆ ಮಾಡಲಾಗುವುದು ಎಂದು ಬಹಿರಂಗಪಡಿಸಿದ್ದಾರೆ.

  ನನ್ನ ಮನೆಯಲ್ಲಿ ಚಿರುಗೆ ಒಂದು ದೇಗುಲ ಮಾಡಿ ಅಲ್ಲಿ ಅವನ ಫೋಟೋ ಇಟ್ಟಿದೀನಿ | Pannaga Bharana | Chiranjeevi Sarja

  ಇನ್ನುಳಿದಂತೆ 'ಪೊಗರು' ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ನಾಯಕಿಯಾಗಿದ್ದಾರೆ. ಡಾಲಿ ಧನಂಜಯ್ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ತೆಲುಗು ನಟ ಜಗಪತಿ ಬಾಬು ಖಳನಾಯಕನಾಗಿ ಅಭಿನಯಿಸಿದ್ದಾರೆ.

  English summary
  Kannadaa Actor Dhruva Sarja Gives Update on his New movie Directed by Nanda Kishore, produced by Uday K Mehta.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X