For Quick Alerts
  ALLOW NOTIFICATIONS  
  For Daily Alerts

  ಚಿರಂಜೀವಿ ಸರ್ಜಾಗೆ ಮರಣೋತ್ತರ ಕಲಾಭೂಷಣ ಪ್ರಶಸ್ತಿ: ಧ್ರುವ ಸರ್ಜಾ ಅತಿಥಿ!

  |

  ಯುವ ಸಾಮ್ರಾಟ್ ಚಿರಂಜೀವಿ ಸರ್ಜಾ ಅಭಿಮಾನಿಗಳನ್ನು, ಆಪ್ತರನ್ನು ಅಗಲಿ ಎರಡು ವರ್ಷಗಳಾಗಿದೆ. ಆ ದು:ಖದಲ್ಲಿ ಇನ್ನೂ ಅವರ ಕುಟುಂಬದಿಂದ ಮರೆಯಾಗಿಲ್ಲ. ಚಿರು ನೆನಪಿನಲ್ಲಿ ಬದುಕನ್ನು ಮುನ್ನೆಡೆಸುತ್ತಿದ್ದಾರೆ. ಚಿರು ನಟಿಸಿ, ಬಿಟ್ಟು ಹೋದ ಸಿನಿಮಾಗಳು ನೆನಪಾಗಿ ಕಾಡುತ್ತಿವೆ.

  ಚಿರಂಜೀವಿ ಸರ್ಜಾ ನೆನಪಿನ ಅಂಗವಾಗಿ ಗೆಲುವು ಕನ್ನಡ ಗೆಳೆಯರ ಬಳಗ ಹಾಗೂ ಚಾರಿಟೆಬಲ್ ಟ್ರೆಸ್ಟ್‌ ಕಡೆಯಿಂದ 'ಕನ್ನಡ ಸಂಭ್ರಮ' ಹಬ್ಬವನ್ನು ಹಮ್ಮಿಕೊಂಡಿದೆ. ಈ ಕಾರ್ಯಕ್ರಮದಲ್ಲಿ ಚಿರಂಜೀವಿ ಸರ್ಜಾಗೆ ಮರಣೋತ್ತರ ಕಲಾಭೂಷಣ ಪ್ರಶಸ್ತಿಯನ್ನು ಪ್ರಧಾನ ಮಾಡುತ್ತಿದ್ದಾರೆ.

  ಈ ಕಾರ್ಯಕ್ರಮ ಡಿಸೆಂಬರ್ 10ರಂದು ಚಿರು ಸಹೋದರ ಹಾಗೂ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮುಖ್ಯ ಅತಿಥಿಯಾಗಿ ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದಾರೆ. ಈ ವೇಳೆ ಚಿರಂಜೀವಿ ಸರ್ಜಾಗೆ ಮರಣೋತ್ತರ ಪ್ರಶಸ್ತಿಯನ್ನು ಪ್ರಧಾನ ಮಾಡಲಾಗುತ್ತೆ.

  ಕನ್ನಡ ಸಂಭ್ರಮ ಕಾರ್ಯಕ್ರಮ ಡಿಸೆಂಬರ್ 6 ರಿಂದ ಸುಮಾರು 11ರ ದಿನದವರೆಗೂ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಈ ವೇಳೆ ಎರಡು ದಿನ ಸರ್ಕಾರಿ ಶಾಲೆಗೆ ಸ್ಕೂಲ್ ಡೇ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದೆ. ಎರಡು ದಿನ ಸ್ಕೂಲ್ ಡೇ, ಮತ್ತೆರಡು ದಿನ ದೇವರ ಕಾರ್ಯಕ್ರಮ, ಉಳಿದ ಎರಡು ದಿನ ಸಂಗೀತ ಕಾರ್ಯಕ್ರಮ ನಡೆಯಲಿದೆ.

  ಡಿಸೆಂಬರ್ 10ರಂದು ನಡೆಯುತ್ತಿರುವ ಸಂಗೀತ ಕಾರ್ಯಕ್ರಮದಲ್ಲಿ ಗಾಯಕರಾದ ವಿಜಯ್ ಪ್ರಕಾಶ್, ನವೀನ್ ಸಜ್ಜು ಗಾಯಕಿ ಅನನ್ಯ ಭಟ್ ಕಾರ್ಯಕ್ರಮಗಳನ್ನು ನೀಡುತ್ತಿದ್ದಾರೆ. ಡಿಸೆಂಬರ್ 11ರಂದು ಎಸ್‌ಪಿ ಬಾಲಸುಬ್ರಹ್ಮಣ್ಯಂ ಅವರ ಪುತ್ರ ಎಸ್‌ಪಿಬಿ ಚರಣ್, ಗಾಯಕ ಮನು, ಅನುರಾಧ ಶ್ರೀರಾಮ್ ಸಂಗೀತ ಕಾರ್ಯಕ್ರಮವನ್ನು ನೀಡುತ್ತಿದ್ದಾರೆ. ಈ ಎಲ್ಲಾ ಕಾರ್ಯಕ್ರಮಗಳ ಉಸ್ತುವಾರಿಯನ್ನು ವರುಣ್ ಸ್ಟುಡಿಯೋಸ್ ಹಮ್ಮಿಗೊಂಡಿದೆ.

  Dhruva Sarja Is The Chief Guest For Chiranjeevi Sarja Kannada Kalabhushan Award

  ಇನ್ನು ಡಿಸೆಂಬರ್ 11 ಕೊನೆಯ ದಿನ ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ನಟಿಸಿರುವ 125ನೇ ಸಿನಿಮಾ 'ವೇದ' ತಂಡ ಭಾಗವಹಿಸುತ್ತಿದೆ. ಈ ವೇಳೆ ಜನರಿಗೆ 'ವೇದ' ಚಿತ್ರದ ಟೀಸರ್, ಸಾಂಗ್‌ಗಳನ್ನುತೋರಿಸಲಿದೆ.

  English summary
  Dhruva Sarja Is The Chief Guest For Chiranjeevi Sarja Kannada Kalabhushan Award
  Friday, December 2, 2022, 23:53
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X