»   » ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಯಾರ ಕಣ್ಣಿಗೂ ಬೀಳ್ತಿಲ್ಲ ಯಾಕೆ.?

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಯಾರ ಕಣ್ಣಿಗೂ ಬೀಳ್ತಿಲ್ಲ ಯಾಕೆ.?

Posted By:
Subscribe to Filmibeat Kannada
ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಯಾರ ಕಣ್ಣಿಗೂ ಬೀಳ್ತಿಲ್ಲ ಯಾಕೆ.? | Filmibeat Kannada

ಕನ್ನಡ ಚಿತ್ರರಂಗಕ್ಕೆ ಧ್ರುವ ಸರ್ಜಾ ಕಾಲಿಟ್ಟು ಹತ್ತತ್ರ ಆರು ವರ್ಷಗಳು ಉರುಳಿವೆ. ಆದರೂ, ತೆರೆಮೇಲೆ ಧ್ರುವ ಸರ್ಜಾ ಮಿನುಗಿರುವುದು ಮೂರೇ ಚಿತ್ರಗಳಲ್ಲಿ.!

ಅಭಿನಯಿಸಿರುವುದು ಮೂರೇ ಚಿತ್ರಗಳಾದರೂ, ಮೂರಕ್ಕೆ ಮೂರೂ ಹ್ಯಾಟ್ರಿಕ್ ಹಿಟ್ ಕೊಟ್ಟ ಖ್ಯಾತಿ ಧ್ರುವ ಸರ್ಜಾ ರವರದ್ದು. ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನೇ ನೀಡುತ್ತಾ ಬಂದಿರುವ ಧ್ರುವ ಸರ್ಜಾಗೆ ಇದೀಗ ದೊಡ್ಡ ಅಭಿಮಾನಿ ಬಳಗ ಇದೆ. ಒಳ್ಳೆಯ ಚಿತ್ರಗಳನ್ನ ನೀಡುವ ಜವಾಬ್ದಾರಿ ಧ್ರುವ ಸರ್ಜಾ ಹೆಗಲ ಮೇಲಿದೆ.

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ 'ಭರ್ಜರಿ' ಸಿನಿಮಾ ಬಿಡುಗಡೆ ಆಗಿ ಆರು ತಿಂಗಳು ಕಳೆದಿದೆ. 'ಭರ್ಜರಿ' ಬಳಿಕ 'ಪೊಗರು' ಚಿತ್ರದಲ್ಲಿ ಧ್ರುವ ಆಕ್ಟ್ ಮಾಡ್ತಿರೋದು ನಿಮಗೆಲ್ಲ ಗೊತ್ತೇ ಇದೆ. ಸದ್ಯ 'ಪೊಗರು' ಚಿತ್ರತಂಡ ಚಿತ್ರೀಕರಣದಿಂದ ಬ್ರೇಕ್ ತೆಗೆದುಕೊಂಡಿದೆ. ಹೀಗಿದ್ದರೂ, ಕಳೆದ ಕೆಲವು ದಿನಗಳಿಂದ ಧ್ರುವ ಸರ್ಜಾ ಎಲ್ಲೂ ಕಾಣಿಸಿಕೊಳ್ಳುತ್ತಿಲ್ಲ. ಯಾರ ಕಣ್ಣಿಗೂ ಧ್ರುವ ಬೀಳುತ್ತಿಲ್ಲ. ಅಭಿಮಾನಿಗಳನ್ನೂ ಧ್ರುವ ಭೇಟಿ ಆಗುತ್ತಿಲ್ಲ. ಹೀಗ್ಯಾಕೆ ಅಂತ ಹುಡುಕ್ಕೊಂಡು ಹೋದಾಗ, 'ಪೊಗರು' ನಿರ್ದೇಶಕ ನಂದ ಕಿಶೋರ್ ಒಂದು ಸೀಕ್ರೆಟ್ ಬಿಚ್ಚಿಟ್ಟರು. ಅದೇನು ಅಂತ ತಿಳಿಯುವ ಕುತೂಹಲ ಇದ್ದರೆ ಫೋಟೋ ಸ್ಲೈಡ್ ಗಳತ್ತ ಕಣ್ಣಾಡಿಸಿ...

30 ಕೆ.ಜಿ ಕಮ್ಮಿ ಆಗಿರುವ ಧ್ರುವ ಸರ್ಜಾ

'ಪೊಗರು' ಚಿತ್ರಕ್ಕಾಗಿ ನಟ ಧ್ರುವ ಸರ್ಜಾ 30 ಕೆ.ಜಿ ತೂಕ ಇಳಿಸಿಕೊಂಡಿದ್ದಾರೆ. ಒಂದು ತಿಂಗಳ ಕಾಲ ಕಠಿಣ ಡಯೆಟ್ ಅನುಸರಿಸಿ, ಚಿತ್ರಕ್ಕೋಸ್ಕರ 30 ಕೆ.ಜಿ ಕಮ್ಮಿ ಆಗಿದ್ದಾರೆ ಧ್ರುವ ಸರ್ಜಾ.

ಭರ್ಜರಿ ಯಶಸ್ಸಿನಲ್ಲಿ ಹೊಸ ಚಿತ್ರಗಳನ್ನ ಅನೌನ್ಸ್ ಮಾಡಿದ ಆಕ್ಷನ್ ಪ್ರಿನ್ಸ್

13 ವರ್ಷದ ಹುಡುಗನಂತೆ ಕಾಣಲು ಧ್ರುವ ಹರಸಾಹಸ

'ಪೊಗರು' ಚಿತ್ರದಲ್ಲಿ ನಾಯಕನ ಶಾಲೆಯ ಸನ್ನಿವೇಶ ಕೂಡ ಇದೆ. ಹೀಗಾಗಿ, 8 ಅಥವಾ 9ನೇ ಕ್ಲಾಸ್ ನಲ್ಲಿ ಓದುವ ಹುಡುಗನಾಗಿ ಅಂದ್ರೆ 13 ವರ್ಷದ ಹುಡುಗನಾಗಿ ಧ್ರುವ ಸರ್ಜಾ ಕಾಣಿಸಿಕೊಳ್ಳಬೇಕು. ಅದಕ್ಕಂತಲೇ, ಒಂದು ತಿಂಗಳ ಕಾಲ ಬರೀ ಲಿಕ್ವಿಡ್ ಫುಡ್ ಸೇವಿಸಿ 30 ಕೆ.ಜಿ ಇಳಿಸಿದ್ದಾರೆ ಧ್ರುವ ಸರ್ಜಾ.

ಹೊರಗೆ ಯಾಕೆ ಬರುತ್ತಿಲ್ಲ ಅಂದ್ರೆ...

30 ಕೆ.ಜಿ ಇಳಿಸಿರುವ ಧ್ರುವ 13 ವರ್ಷದ ಹುಡುಗನಾಗಿ ಹೇಗೆ ಕಾಣ್ತಾರೆ.? ಎಂಬ ಕುತೂಹಲ ಸಹಜವಾಗಿ ಎಲ್ಲರಲ್ಲೂ ಇರಬಹುದು. ಈ ಕುತೂಹಲ 'ಪೊಗರು' ತೆರೆಗೆ ಬರುವವರೆಗೂ ಇರಬೇಕು ಎಂಬ ಕಾರಣಕ್ಕೆ ಧ್ರುವ ಸರ್ಜಾ ಹೊರಗೆಲ್ಲೂ ಕಾಣಿಸಿಕೊಳ್ಳುತ್ತಿಲ್ಲ. ಅಭಿಮಾನಿಗಳನ್ನೂ ಭೇಟಿ ಮಾಡುತ್ತಿಲ್ಲ. ''ಧ್ರುವ ಸರ್ಜಾ ಲುಕ್ ಈಗಲೇ ರಿವೀಲ್ ಆಗ್ಬಿಟ್ಟರೆ, ಸಿನಿಮಾದಲ್ಲಿ ಅಂತ ಕೌತುಕ ಇರಲ್ಲ ಅಂತಷ್ಟೇ'' ಅಂತಾರೆ ನಿರ್ದೇಶಕ ನಂದ ಕಿಶೋರ್.

ಮತ್ತೆ ಬಾಡಿ ಬಿಲ್ಡ್ ಮಾಡುತ್ತಿರುವ ಧ್ರುವ ಸರ್ಜಾ

30 ಕೆ.ಜಿ ತೂಕ ಇಳಿಸಿದ್ಮೇಲೆ, ಶಾಲೆಯ ಸನ್ನಿವೇಶಗಳ ಚಿತ್ರೀಕರಣ ಮಾಡಲಾಗಿದೆ. ಅದು ಮುಗಿದ ನಂತರ ಮತ್ತೆ ಬಾಡಿ ಬಿಲ್ಡ್ ಮಾಡಲು ಧ್ರುವ ಸರ್ಜಾ ಜಿಮ್ ಕಡೆ ಮುಖ ಮಾಡಿದ್ದಾರೆ.

45 ದಿನ ಬೇಕು

ಮತ್ತೆ ಮೊದಲಿನಂತೆ ಆಗಲು 45 ದಿನಗಳ ಕಾಲ ಜಿಮ್ ನಲ್ಲಿ ಧ್ರುವ ಸರ್ಜಾ ಬೆವರಿಳಸಬೇಕು. ಒಟ್ನಲ್ಲಿ, 'ಪೊಗರು' ಚಿತ್ರಕ್ಕಾಗಿ ತಮ್ಮ ದೇಹವನ್ನ ಧ್ರುವ ಸರ್ಜಾ ಸಿಕ್ಕಾಪಟ್ಟೆ ದಂಡಿಸುತ್ತಿದ್ದಾರೆ.

ಹ್ಯಾಟ್ಸ್ ಆಫ್ ಹೇಳಿದ ನಂದ ಕಿಶೋರ್.!

''ಸಿನಿಮಾ ಅಂದ್ರೆ ಧ್ರುವ ಸರ್ಜಾಗೆ ಪ್ರಾಣ. ಧ್ರುವ ಸರ್ಜಾ ಡೆಡಿಕೇಷನ್ ಗೆ ಹ್ಯಾಟ್ಸ್ ಆಫ್ ಹೇಳಲೇಬೇಕು. ಚೈಲ್ಡ್ ಹೂಡ್ ಸೀಕ್ವೆನ್ಸ್ ನಲ್ಲಿ ನಾನೇ ನಟಿಸುತ್ತೇನೆ ಎಂದು 30 ಕೆ.ಜಿ ತೂಕ ಇಳಿಸಿದ್ದಾರೆ ಧ್ರುವ ಸರ್ಜಾ. ಮತ್ತೆ ಮೊದಲಿನಂತೆ ಆಗಲು 45 ದಿನ ಕೇಳಿದ್ದಾರೆ. ಸಿನಿಮಾದಲ್ಲಿ ಧ್ರುವ ಅವರನ್ನ ಎರಡು-ಮೂರು ವಿಭಿನ್ನ ರೀತಿಯಲ್ಲಿ ನೀವು ನೋಡಬಹುದು'' ಎನ್ನುತ್ತಾರೆ ನಿರ್ದೇಶಕ ನಂದ ಕಿಶೋರ್

'ಪೊಗರು' ರಿಲೀಸ್ ಯಾವಾಗ.?

'ಪೊಗರು' ಚಿತ್ರವನ್ನ ಆಗಸ್ಟ್ ನಲ್ಲಿ ಬಿಡುಗಡೆ ಮಾಡುವ ಪ್ಲಾನ್ ನಂದ ಕಿಶೋರ್ ಗಿದೆ. ಅಂದ್ಹಾಗೆ, ಇದೇ ಸಿನಿಮಾದಲ್ಲಿ ಧ್ರುವ ಸರ್ಜಾ ಮಲ್ಲಗಂಬ ಪ್ರದರ್ಶನವನ್ನೂ ಮಾಡ್ತಾರಂತೆ. ಒಟ್ಟಾರೆ, 'ಪೊಗರು' ಚಿತ್ರ ಧ್ರುವ ಸರ್ಜಾ ಫ್ಯಾನ್ಸ್ ಗೆ ರಸದೌತಣ ನೀಡುವುದರಲ್ಲಿ ಡೌಟೇ ಇಲ್ಲ.

English summary
Kannada Actor Dhruva Sarja looses 30 kgs for Kannada Film 'Pogaru'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X