For Quick Alerts
  ALLOW NOTIFICATIONS  
  For Daily Alerts

  ನಿಶ್ಚಿತಾರ್ಥಕ್ಕಾಗಿ 21 ಲಕ್ಷ ಮೌಲ್ಯದ ವಜ್ರದ ಉಂಗುರ ಖರೀದಿಸಿದ ಧ್ರುವ ಸರ್ಜಾ

  |

  ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾಗೆ ಮದುವೆ ಫಿಕ್ಸ್ ಆಗಿರುವ ವಿಷಯ ನಿಮಗೆಲ್ಲಾ ಗೊತ್ತೇ ಇದೆ. ನಾಳೆ.. ಅಂದ್ರೆ ಡಿಸೆಂಬರ್ 9 ರಂದು ಧ್ರುವ ಸರ್ಜಾ-ಪ್ರೇರಣಾ ಶಂಕರ್ ನಿಶ್ಚಿತಾರ್ಥ ನಡೆಯಲಿದೆ.

  'ಬಹದ್ದೂರ್' ಗಂಡು ಧ್ರುವ ಸರ್ಜಾಗೆ ಕೂಡಿ ಬಂತು ಕಂಕಣ ಭಾಗ್ಯ

  ನಿಶ್ಚಿತಾರ್ಥ ಸಮಾರಂಭದಲ್ಲಿ ಮನದೊಡತಿ ಪ್ರೇರಣಾ ಶಂಕರ್ ಕೈ ಬೆರಳಿಗೆ ತೊಡಿಸಲು ವಜ್ರದ ಉಂಗುರ ಖರೀದಿ ಮಾಡಿದ್ದಾರೆ ನಟ ಧ್ರುವ ಸರ್ಜಾ. 21 ಲಕ್ಷ ರೂಪಾಯಿ ಬೆಲೆ ಬಾಳುವ ವಜ್ರದ ಉಂಗುರವನ್ನು ಧ್ರುವ ಸರ್ಜಾ ಕೊಂಡುಕೊಂಡಿದ್ದಾರೆ.

  ನಟ ಧ್ರುವ ಸರ್ಜಾ - ಪ್ರೇರಣಾ ನಿಶ್ಚಿತಾರ್ಥಕ್ಕೆ ತಯಾರಿ

  ಬೆಂಗಳೂರಿನ ಬನಶಂಕರಿ ಬಳಿಯ ಧರ್ಮಗಿರಿ ದೇವಾಲಯದಲ್ಲಿ ಧ್ರುವ ಸರ್ಜಾ-ಪ್ರೇರಣಾ ಶಂಕರ್ ಎಂಗೇಜ್ಮೆಂಟ್ ನಡೆಯಲಿದೆ. ಕುಟುಂಬಸ್ಥರು, ಸ್ನೇಹಿತರು ಹಾಗೂ ಚಿತ್ರರಂಗದ ಗಣ್ಯರ ಸಮ್ಮುಖದಲ್ಲಿ ಧ್ರುವ ಸರ್ಜಾ-ಪ್ರೇರಣಾ ಶಂಕರ್ ಉಂಗುರ ಬದಲಾಯಿಸಿಕೊಳ್ಳಲಿದ್ದಾರೆ.

  ಧ್ರುವಗೆ ಪ್ರೀತಿಯ ಪಾಠ ಮಾಡಿದ ಈ ಟೀಚರ್ ಯಾರು?

  ಧ್ರುವ ಸರ್ಜಾ-ಪ್ರೇರಣಾ ನಿಶ್ಚಿತಾರ್ಥಕ್ಕಾಗಿ ಅರುಣ್ ಸಾಗರ್ ಸ್ಪೆಷಲ್ ಸೆಟ್ ನಿರ್ಮಾಣ ಮಾಡಿದ್ದಾರೆ. ತೆಂಗಿನ ಗರಿಗಳು ಮತ್ತು ಸಾಂಪ್ರದಾಯಿಕ ಪರಿಕರಗಳಿಂದ ಸೆಟ್ ನಿರ್ಮಿಸಲಾಗಿದೆ. ಗೋಮಾತೆಗೆ ಪೂಜೆ ಸಲ್ಲಿಸಿ, ನಿಶ್ಚಿತಾರ್ಥ ಸಮಾರಂಭದಲ್ಲಿ ಧ್ರುವ ಸರ್ಜಾ ಪಾಲ್ಗೊಳ್ಳಲಿದ್ದಾರೆ.

  English summary
  Kannada Actor Dhruva Sarja purchases Rs.21 lakhs worth Diamond ring for his engagement.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X