For Quick Alerts
  ALLOW NOTIFICATIONS  
  For Daily Alerts

  ಅಣ್ಣನ ಚಿತ್ರ ನೋಡಲು ಚಿತ್ರಮಂದಿರಕ್ಕೆ ಬನ್ನಿ: ಧ್ರುವ ಸರ್ಜಾ ಮನವಿ

  |

  ದಿವಂಗತ ನಟ ಚಿರಂಜೀವಿ ಸರ್ಜಾ ನಟನೆಯಲ್ಲಿ ಮೂಡಿಬಂದಿದ್ದ ಶಿವಾರ್ಜುನ ಸಿನಿಮಾ ಮತ್ತೆ ರಿ-ರಿಲೀಸ್ ಆಗುತ್ತಿದೆ. ಮಾರ್ಚ್ ತಿಂಗಳಲ್ಲಿ ಶಿವಾರ್ಜುನ ಬಿಡುಗಡೆಯಾಗಿತ್ತು. ಈ ಸಿನಿಮಾ ತೆರೆಕಂಡು ಒಂದೇ ವಾರದಲ್ಲಿ ಲಾಕ್‌ಡೌನ್ ಘೋಷಣೆ ಆಯಿತು.

  ಅಭಿಮಾನಿಗಳ ಮುಂದೆ ಪ್ರೀತಿಯಿಂದ ಮನವಿ ಮಾಡಿಕೊಂಡ Dhruva Sarja | Filmibeat Kannada

  ಲಾಕ್‌ಡೌನ್‌ನಿಂದ ಆರೇಳು ತಿಂಗಳು ಚಿತ್ರಮಂದಿರಗಳು ಬಂದ್ ಆಗಿದ್ದವು. ಇದೀಗ, ಥಿಯೇಟರ್ ತೆರೆಯಲು ಸರ್ಕಾರ ಅನುಮತಿ ನೀಡಿದ್ದು, ಅಕ್ಟೋಬರ್ 15 ರಿಂದ ಸಿನಿಮಾ ಹಾಲ್ ಕಾರ್ಯಾರಂಭ ಮಾಡಲಿದೆ.

  ಚಿರಂಜೀವಿ ಸರ್ಜಾ ರ ಕೊನೆಯ ಸಿನಿಮಾ ಮತ್ತೆ ಚಿತ್ರಮಂದಿರಕ್ಕೆ

  ಮತ್ತೆ ಚಿತ್ರಮಂದಿರಗಳು ತೆರೆಯುತ್ತಿರುವುದರಿಂದ ಹೊಸ ಸಿನಿಮಾಗಳ ಬದಲು ಹಳೇ ಚಿತ್ರಗಳನ್ನು ರಿ-ರಿಲೀಸ್ ಮಾಡಲು ನಿರ್ಮಾಪಕರು ಮುಂದಾಗಿದ್ದಾರೆ. ಈ ಹಿನ್ನೆಲೆ ಶಿವಾರ್ಜುನ ಸಿನಿಮಾ ಸಹ ಅಕ್ಟೋಬರ್ 16 ರಂದು ಮತ್ತೆ ಚಿತ್ರಮಂದಿರಕ್ಕೆ ಬರ್ತಿದೆ.

  ಚಿರು ಸರ್ಜಾ ಸಿನಿಮಾ ಮತ್ತೆ ಪ್ರೇಕ್ಷಕರೆದುರು ಬರುತ್ತಿರುವ ಹಿನ್ನೆಲೆ ಸಹೋದರ ಧ್ರುವ ಸರ್ಜಾ ಅಣ್ಣನ ಸಿನಿಮಾವನ್ನು ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡಿ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.

  ಅಂದ್ಹಾಗೆ, ಶಿವತೇಜಸ್ ಈ ಚಿತ್ರ ನಿರ್ದೇಶಿಸಿದ್ದು, ಎಂ ಬಿ ಮಂಜುಳ ನಿರ್ಮಾಣ ಮಾಡಿದ್ದರು. ಚಿರಂಜೀವಿ ಸರ್ಜಾ, ಅಮೃತಾ ಅಯ್ಯಂಗಾರ್. ರವಿಕಿಶನ್, ಸಾಧುಕೋಕಿಲಾ, ತಾರಾ, ಕಿಶೋರ್ ಸೇರಿದಂತೆ ಹಲವರು ನಟಿಸಿದ್ದರು. ಸುರಾಗ್ ಕೋಕಿಲಾ ಸಂಗೀತ ನೀಡಿದ್ದರು. ಮಾರ್ಚ್ 12, 2020 ರಂದು ಈ ಹಿಂದೆ ಬಿಡುಗಡೆಯಾಗಿತ್ತು.

  English summary
  Chiranjeevi Sarja Brother Dhruva sarja Requested fans to Watch Shivarjuna Movie in Theaters from october 16th.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X