For Quick Alerts
  ALLOW NOTIFICATIONS  
  For Daily Alerts

  ಅಭಿಮಾನಿಗಳಿಗೆ ಕೊನೆಗೂ ಒಂದು ಖುಷಿ ಸುದ್ದಿ ನೀಡಿದ 'ಪೊಗರು' ಚಿತ್ರ

  |

  ಸೆಟ್ಟೇರಿ ವರ್ಷಗಳು ಉರುಳಿದರೂ ಧ್ರುವ ಸರ್ಜಾ ಅಭಿನಯದ 'ಪೊಗರು' ಚಿತ್ರ ಇನ್ನೂ ತೆರೆಕಂಡಿಲ್ಲ. ಮೂರು ವರ್ಷಗಳಿಂದ ಧ್ರುವ ಸರ್ಜಾ ಅಭಿಮಾನಿಗಳು ಅವರ ಸಿನಿಮಾಕ್ಕೆ ಕಾದು ಕಾದು ಹೈರಾಣಾಗಿದ್ದಾರೆ. ಎರಡು ವರ್ಷದ ಹಿಂದೆ ಆರಂಭವಾದ ಚಿತ್ರೀಕರಣ ಮುಗಿಸಿ ಸಿನಿಮಾ ಬಿಡುಗಡೆಯಾಗಲಿದೆ ಎಂದು ಕಾತರದಿಂದ ಕಾಯುತ್ತಿದ್ದಾರೆ.

  ಧ್ರುವ ಸರ್ಜಾ ಅಭಿಮಾನಿಗಳಿಗೆ ಸಿಹಿ ಸುದ್ದಿ | Pogaru Song Release | Dhruva Sarja | Filmibeat kannada

  ಈಗಾಗಲೇ ಚಿತ್ರತಂಡದ ಕೆಲವು ಮೂಲಗಳಿಂದ ಸಿನಿಮಾ ಬಿಡುಗಡೆಯ ದಿನಾಂಕದ ಮಾಹಿತಿ ಹೊರಬಂದಿದೆ. ಏಪ್ರಿಲ್ 24ರಂದು ಸಿನಿಮಾ ತೆರೆಕಾಣಲಿದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಚಿತ್ರತಂಡದಿಂದ ಬಂದಿಲ್ಲ. ಸೆನ್ಸಾರ್ ಆದ ಬಳಿಕ ರಿಲೀಸ್ ಡೇಟ್‌ಅನ್ನು ಚಿತ್ರತಂಡ ಖಚಿತಪಡಿಸಲಿದೆ. ಈ ನಡುವೆ ಚಿತ್ರತಂಡದಿಂದ ಅಭಿಮಾನಿಗಳಿಗೆ ಒಂದು ಖುಷಿಯ ಮಾಹಿತಿ ಸಿಕ್ಕಿದೆ.

  ಬರಲಿದೆ ಖರಾಬು ಹಾಡು

  ಬರಲಿದೆ ಖರಾಬು ಹಾಡು

  ಇನ್ನು ಒಂಬತ್ತು ದಿನಗಳಲ್ಲಿ 'ಪೊಗರು' ಚಿತ್ರದ ಮೊದಲ ಹಾಡು ಅಭಿಮಾನಿಗಳ ಮುಂದೆ ಬರಲಿದೆ. ಆನಂದ್ ಆಡಿಯೋ 'ಖರಾಬು' ಎಂಬ ಹಾಡನ್ನು ಬಿಡುಗಡೆ ಮಾಡಲಿದೆ. ಈ ಮಾಹಿತಿಯನ್ನು ಧ್ರುವ ಸರ್ಜಾ ಹಂಚಿಕೊಂಡಿದ್ದಾರೆ. ಮಾರ್ಚ್ 27ರಂದು ಪೊಗರು ಚಿತ್ರದ ಖರಾಬು ಎಂಬ ಹಾಡು ಬಿಡುಗಡೆಯಾಗಲಿದೆ.

  ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿಮಾನಿಗಳಿಗೆ ಸಂತಸದ ಸುದ್ದಿ: ಪೊಗರು ರಿಲೀಸ್ ಡೇಟ್ ಬಹಿರಂಗಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿಮಾನಿಗಳಿಗೆ ಸಂತಸದ ಸುದ್ದಿ: ಪೊಗರು ರಿಲೀಸ್ ಡೇಟ್ ಬಹಿರಂಗ

  ಇನ್ನು ಕಾಯಲು ಆಗೊಲ್ಲ ಎಂದು ಫ್ಯಾನ್ಸ್

  ಇನ್ನು ಕಾಯಲು ಆಗೊಲ್ಲ ಎಂದು ಫ್ಯಾನ್ಸ್

  ಕಾಯುವಿಕೆ ಮುಗಿದಿದೆ, ಕ್ಷಣಗಣನೆ ಆರಂಭವಾಗಿದೆ ಎಂದು ಆನಂದ್ ಆಡಿಯೋ ಟ್ವೀಟ್ ಮಾಡಿದೆ. ಈ ರೀತಿ ಭರವಸೆಗಳನ್ನು ಕೇಳಿ ಬೇಸೆತ್ತಿದ್ದ ಅಭಿಮಾನಿಗಳು ಚಿತ್ರತಂಡವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಕ್ಷಣಗಣನೆ ಎಂದರೆ ಮತ್ತೆ ಎರಡು ಮೂರು ವರ್ಷವೇ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ. ನಮ್ಮಿಂದ ಇನ್ನು ಕಾಯಲು ಆಗುವುದಿಲ್ಲ, ಬೇಗನೆ ಸಿನಿಮಾ ಮಾಡಿ ಎನ್ನುತ್ತಿದ್ದಾರೆ.

   15 ಮಿಲಿಯನ್ ವೀಕ್ಷಣೆ

  15 ಮಿಲಿಯನ್ ವೀಕ್ಷಣೆ

  ಈ ನಡುವೆ ಪೊಗರು ಚಿತ್ರದ ಡೈಲಾಗ್ ಟೀಸರ್ 15 ಮಿಲಿಯನ್ ವೀಕ್ಷಣೆಗಳನ್ನು ದಾಟಿದೆ. ನಾಲ್ಕು ತಿಂಗಳ ಹಿಂದೆ ಬಿಡುಗಡೆಯಾದ ಡೈಲಾಗ್ ಟೀಸರ್, ಅಭಿಮಾನಿಗಳನ್ನು ಹುಚ್ಚೆಬ್ಬಿಸಿತ್ತು. ಭರ್ಜರಿ ಕಿಕ್ ಕೊಡುವ ಸಂಭಾಷಣೆಗಳು ರಂಜಿಸಿದ್ದವು. ಅದರ ಬಳಿಕ ಈಗ ಮೊದಲ ಹಾಡು ಬಿಡುಗಡೆಯಾಗಲಿದೆ.

  ರಶ್ಮಿಕಾ ಮಂದಣ್ಣ ಜೋಡಿ

  ರಶ್ಮಿಕಾ ಮಂದಣ್ಣ ಜೋಡಿ

  ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾಗೆ ನಾಯಕಿಯಾಗಿ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ಧನಂಜಯ್, ರಾಘವೇಂದ್ರ ರಾಜಕುಮಾರ್, ರವಿಶಂಕರ್, ಸಾಧುಕೋಕಿಲ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ. ನಿರೀಕ್ಷೆಯಂತೆ ಏಪ್ರಿಲ್ ಅಂತ್ಯದಲ್ಲಿ ಸಿನಿಮಾ ತೆರೆಗೆ ಬಂದರೆ ಧ್ರುವ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟುವುದು ಖಚಿತ.

  English summary
  Kharaabu song of Pogaru movie will be released on March 27th. Movie may release on April last week.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X