»   » 6 ಕೋಟಿ ಸಂಭಾವನೆ ಬಗ್ಗೆ ಧ್ರುವ ಸರ್ಜಾ ನೇರ ಮಾತು

6 ಕೋಟಿ ಸಂಭಾವನೆ ಬಗ್ಗೆ ಧ್ರುವ ಸರ್ಜಾ ನೇರ ಮಾತು

Posted By:
Subscribe to Filmibeat Kannada

'ಭರ್ಜರಿ' ಚಿತ್ರದ ನಂತರ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರ ಸಂಭಾವನೆ ಹೆಚ್ಚಾಗಿದೆ ಎಂಬ ಸುದ್ದಿ ಗಾಂಧಿನಗರದಲ್ಲಿ ವೈರಸ್ ರೀತಿಯಲ್ಲಿ ಹರಡಿದೆ. ಎಲ್ಲೇ ನೋಡಿದ್ರು ಮೂರು ಸಿನಿಮಾ ಮಾಡಿದ ಧ್ರುವ ಬಾಕ್ಸ್ ಆಫೀಸ್ ಮೇಲೆ ಕಣ್ಣಾಕಿದ್ದಾರೆ ಎಂಬ ಮಾತು.

ದರ್ಶನ್, ಸುದೀಪ್, ಪುನೀತ್ ರಾಜ್ ಕುಮಾರ್ ಅವರಂತೆ 'ಭರ್ಜರಿ' ಹುಡುಗ ಕೂಡ ಸುಮಾರು 6 ಕೋಟಿ ಸಂಭಾವನೆ ಡಿಮ್ಯಾಂಡ್ ಮಾಡ್ತಿದ್ದಾರೆ ಎನ್ನಲಾಗಿತ್ತು. ಅಷ್ಟೆ ಅಲ್ಲದೇ, ಧ್ರುವ 6 ವರ್ಷ ಬಿಜಿ ಎಂದು ಕೂಡ ಹೇಳಲಾಗುತ್ತಿತ್ತು.

ಆದ್ರೆ, ಇದಕ್ಕೆಲ್ಲಾ ಸ್ವತಃ 'ಬಹುದ್ದೂರ್' ಗಂಡು ಧ್ರುವ ಸರ್ಜಾ ಉತ್ತರ ಕೊಟ್ಟಿದ್ದಾರೆ. 6 ಕೋಟಿ ಮತ್ತು 6 ವರ್ಷ ಬಿಜಿ ಎಂಬ ವಿಚಾರದ ಬಗ್ಗೆ ನೇರವಾಗಿ ಮಾತನಾಡಿದ್ದಾರೆ.

6 ಕೋಟಿ ಸಂಭಾವನೆ ನಿಜಾನ?

'ಭರ್ಜರಿ' ಚಿತ್ರದ ನಂತರ ಧ್ರುವ ಸರ್ಜಾ ಅವರ ಸಂಭಾವನೆ 6 ಕೋಟಿ ಆಗಿದೆಯಂತೆ ಎಂಬ ಪ್ರಶ್ನೆಗೆ ಉತ್ತರಿಸಿದ ಧ್ರುವ ''6 ಕೋಟಿ ಸಂಭಾವನೆ ಪಡೆಯುವುದಕ್ಕೆ ಶ್ರಮ ಪಡ್ತೀನಿ. ಮುಂದೆ ಪ್ರಯತ್ನ ಪಡ್ತೀನಿ'' ಎಂದು ಹೇಳುವ ಮೂಲಕ ಇದೆಲ್ಲಾ ವದಂತಿ ಎಂದು ಸ್ಪಷ್ಟನೆ ನೀಡಿದ್ದಾರೆ.

ದರ್ಶನ್, ಸುದೀಪ್ ಸಮಕ್ಕೆ ಬಂದು ನಿಂತ ಧ್ರುವ ಸರ್ಜಾ ಸಂಭಾವನೆ!

6 ವರ್ಷ ಆಕ್ಷನ್ ಪ್ರಿನ್ಸ್ ಬಿಜಿ.!

'ಭರ್ಜರಿ' ಚಿತ್ರದ ನಂತರ ಸಾಲು ಸಾಲು ಸಿನಿಮಾಗಳಲ್ಲಿ ಬಿಜಿಯಾಗಲಿರುವ ಧ್ರುವ ಸರ್ಜಾ ಇನ್ನು 6 ವರ್ಷ ಯಾರ ಕೈಗೆ ಸಿಗಲ್ಲ ಎಂಬ ಸುದ್ದಿಗಳು ಇಂಡಸ್ಟ್ರಿಯಲ್ಲಿ ಚರ್ಚೆಯಾಗಿದ್ದವು. ಅದಕ್ಕೆ ಧ್ರುವ ಸರ್ಜಾ ಹೇಳಿದ್ದೇ ಬೇರೆ.

ನಿಜ ಕಣ್ರೀ... ಇನ್ನೂ ಆರು ವರ್ಷ ಧ್ರುವ ಸರ್ಜಾ ಫ್ರೀ ಇಲ್ಲ.!

'ಪೊಗರು' ನಂತರ ಮೆಹ್ತಾ ಸಿನಿಮಾ

ಸದ್ಯ, 'ಪೊಗರು' ಚಿತ್ರದಲ್ಲಿ ನಟಿಸುತ್ತಿರುವ ಧ್ರುವ ಸರ್ಜಾ, ಅದಾದ ಬಳಿಕ ಬಚ್ಚನ್ ಸಿನಿಮಾ ನಿರ್ಮಾಣ ಮಾಡಿದ್ದ ಉದಯ್ ಮೆಹ್ತಾ ಅವರ ಜೊತೆ ಸಿನಿಮಾ ಮಾಡಲಿದ್ದಾರಂತೆ. ಈ ಚಿತ್ರವನ್ನ ಬಿಟ್ಟರೇ ಬೇರೆ ಯಾವ ಚಿತ್ರವನ್ನ ಸದ್ಯಕ್ಕೆ ಒಪ್ಪಿಕೊಂಡಿಲ್ಲ ಎನ್ನುತ್ತಾರೆ ಭರ್ಜರಿ ನಟ.

ಮುಂದಿನ ಪ್ರಾಜೆಕ್ಟ್ ಗಳು

'ಪೊಗರು' ಮತ್ತು ಉದಯ್ ಮೆಹ್ತಾ ಚಿತ್ರಗಳ ನಂತರ ಜಯಣ್ಣ ಅವರ ಜೊತೆ ಒಂದು ಸಿನಿಮಾ ಮಾಡಲಿದ್ದಾರಂತೆ. ಇನ್ನು 'ಮಾಸ್ಟರ್ ಪೀಸ್', 'ನಿನ್ನಿಂದಲೇ' ಚಿತ್ರಗಳ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ಜೊತೆ ಒಂದು ಸಿನಿಮಾ ಮಾಡಲಿದ್ದಾರೆ ಎನ್ನಲಾಗಿದೆ. ಇದಿಷ್ಟೇ ಅಲ್ಲದೇ, ಜಗ್ಗುದಾದ ನಿರ್ದೇಶಕ ರಾಘವೇಂದ್ರ ಹೆಗಡೆ ಮತ್ತು ಅರ್ಜುನ್ ಸರ್ಜಾ ಜೊತೆಯಲ್ಲೂ ಧ್ರುವ ಸಿನಿಮಾ ಮಾಡಲಿದ್ದಾರೆ ಎನ್ನಲಾಗಿದೆ. ಆದ್ರೆ, ಇದ್ಯಾವುದು ಅಧಿಕೃತ ಘೋಷಣೆ ಆಗಿಲ್ಲ.

English summary
kannada actor, action prince Dhruva Sarja speak about his Remuneration. ಆಕ್ಷನ್ ಪ್ರಿನ್ಸ್, ಧ್ರುವ ಸರ್ಜಾ 6 ಕೋಟಿ ಸಂಭಾವನೆ ಸುದ್ದಿ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada