»   » 'ಭರ್ಜರಿ' ಅಭಿಮಾನಿಗಳಿಗೆ ಕೊನೆಗೂ ಸಿಕ್ತು ಗುಡ್ ನ್ಯೂಸ್

'ಭರ್ಜರಿ' ಅಭಿಮಾನಿಗಳಿಗೆ ಕೊನೆಗೂ ಸಿಕ್ತು ಗುಡ್ ನ್ಯೂಸ್

Posted By:
Subscribe to Filmibeat Kannada

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಬಹುನಿರೀಕ್ಷಿತ ಚಿತ್ರ 'ಭರ್ಜರಿ' ಸಿನಿಮಾಗಾಗಿ ಸಿನಿ ಪ್ರೇಮಿಗಳು ಬಕಪಕ್ಷಿಗಳಂತೆ ಕಾದು ಕುಂತಿದ್ದಾರೆ. ಕಳೆದ ಕೆಲ ತಿಂಗಳುಗಳಿಂದ 'ಭರ್ಜರಿ' ಸಿನಿಮಾ ಈಗ ರಿಲೀಸ್ ಆಗುತ್ತೆ, ಆಗ ರಿಲೀಸ್ ಆಗುತ್ತೆ ಕಾದು ಕಾದು ಬೇಜಾರಾಗಿದ್ದಾರೆ.

ಹೀಗೆ, ಧ್ರುವ ಸಿನಿಮಾಗಾಗಿ ಕಾದಿರುವ ಅಭಿಮಾನಿಗಳಿಗೆ ಗುಡ್ ನ್ಯೂಸ್ ಸಿಕ್ಕಿದೆ. ಹೌದು, 'ಭರ್ಜರಿ' ಸಿನಿಮಾ ಸೆನ್ಸಾರ್ ಮುಗಿಸಿ ಬಿಡುಗಡೆಗೆ ಸಿದ್ದವಾಗಿದೆ. ಸೆನ್ಸಾರ್ ಮುಗಿತು ಎಂದರೇ ಸಿನಿಮಾ ಚಿತ್ರಮಂದಿರಕ್ಕೆ ಬರಲು 100% ರೆಡಿಯಾಗಿದೆ ಎಂದರ್ಥ.

ಎರಡೇ ದಿನದಲ್ಲಿ 'ಭರ್ಜರಿ' ಹುಡುಗ ಮಾಡಿದ ದಾಖಲೆ ಏನು?

Dhruva Sarja starrer Bharjari censored

ಇತ್ತೀಚೆಗಷ್ಟೇ ಸೆನ್ಸಾರ್ ಮುಗಿಸಿರುವ 'ಭರ್ಜರಿ' ಚಿತ್ರಕ್ಕೆ ಯು/ಎ ಪ್ರಮಾಣ ಪತ್ರ ನೀಡಲಾಗಿದೆ. ಎಲ್ಲ ಅಂದುಕೊಂಡಂತೆ ಆದರೇ, ಸೆಪ್ಟಂಬರ್ 15 ರಂದು 'ಭರ್ಜರಿ' ತೆರೆಕಾಣಲಿದೆ.

ಇವನೊಂಶ ಸರ್ಜಾ ರೀ,,,,ಇವನು ಆಲ್ವೇಸ್ 'ಭರ್ಜರಿ'.!

ಅಂದ್ಹಾಗೆ, 'ಬಹುದ್ದೂರ್' ಚೇತನ್ ಕುಮಾರ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ರಚಿತಾ ರಾಮ್, ಹರಿಪ್ರಿಯಾ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ವಿ.ಹರಿಕೃಷ್ಣ ಅವರ ಸಂಗೀತದ ಹಾಡುಗಳು ಈಗಾಗಲೇ ಸೂಪರ್ ಹಿಟ್ ಆಗಿದ್ದು, ಕನಕಪುರ ಶ್ರೀನಿವಾಸ ಅವರು ನಿರ್ಮಾಣ ಮಾಡಿದ್ದಾರೆ.

ಧ್ರುವ ಸರ್ಜಾ ಕೈಯಲ್ಲಿದ್ದ ದೊಡ್ಡ ಪ್ರಾಜೆಕ್ಟ್ ನಿಂತೋಯ್ತಾ.!

English summary
Dhruva Sarja starrer 'Bharjari' has been censored with an 'U/A' certificate. With the censor certificate in hand, the team intends to release the film in the second or third week of September

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada