For Quick Alerts
  ALLOW NOTIFICATIONS  
  For Daily Alerts

  ಹುಟ್ಟುಹಬ್ಬದ ಸಂಭ್ರಮದಲ್ಲಿ ಧ್ರುವ ಸರ್ಜಾ: ಫ್ಯಾನ್ಸ್ ಜೊತೆ ಸೆಲೆಬ್ರೇಷನ್ ಇಲ್ಲ!

  |

  ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ 34ನೇ ಕಾಲಿಟ್ಟಿದ್ದಾರೆ. ನೆಚ್ಚಿನ ನಟನಿಗೆ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದು ಬರ್ತಿದೆ. ಅಕ್ಟೋಬರ್ 1ರಂದು ಧ್ರುವ ಪತ್ನಿ ಪ್ರೇರಣಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಸದ್ಯ ಮಡದಿ, ಮಗಳ ಜೊತೆ ಧ್ರುವ ಆಸ್ಪತ್ರೆಯಲ್ಲಿ ಕಾಲ ಕಳಿತ್ತಿದ್ದಾರೆ. ಹಾಗಾಗಿ ಈ ಬಾರಿ ಹುಟ್ಟುಹಬ್ಬದ ಸಂಭ್ರಮಾಚರಣೆ ಬೇಡ, ನೀವು ಇರುವ ಕಡೆಯಿಂದಲೇ ಶುಭಾಶಯ ತಿಳಿಸಿ ಎಂದು ಧ್ರುವ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.

  ಧ್ರುವ ಸರ್ಜಾ ಬರ್ತ್‌ಡೇ ಸ್ಪೆಷಲ್ 'ಮಾರ್ಟಿನ್' ಪೋಸ್ಟರ್‌ ಸಿಂಪ್ಲಿ ಸೂಪರ್!ಧ್ರುವ ಸರ್ಜಾ ಬರ್ತ್‌ಡೇ ಸ್ಪೆಷಲ್ 'ಮಾರ್ಟಿನ್' ಪೋಸ್ಟರ್‌ ಸಿಂಪ್ಲಿ ಸೂಪರ್!

  'ಅದ್ಧೂರಿ' ಹುಡುಗನ ಹುಟ್ಟುಹಬ್ಬದ ವಿಶೇಷವಾಗಿ ಒಂದು ದಿನ ಮೊದಲೇ 'ಮಾರ್ಟಿನ್' ಚಿತ್ರತಂಡ ಸ್ಪೆಷಲ್ ಪೋಸ್ಟರ್ ರಿಲೀಸ್ ಮಾಡಿ ಶುಭ ಕೋರಿದೆ. ಸದ್ಯ 'ಮಾರ್ಟಿನ್' ಸಿನಿಮಾ ಪೋಸ್ಟರ್ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡ್ತಿದೆ. ಇನ್ನು ಜೋಗಿ ಪ್ರೇಮ್ ನಿರ್ದೇಶನದ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಆಕ್ಷನ್ ಪ್ರಿನ್ಸ್ ನಟಿಸ್ತಿದ್ದಾರೆ. ಶೀಘ್ರದಲ್ಲೇ ಈ ಸಿನಿಮಾ ಟೈಟಲ್ ಟೀಸರ್ ರಿಲೀಸ್ ಆಗಲಿದೆ. ನಟಿಸಿರುವುದು 4 ಸಿನಿಮಾಗಳಾದರೂ ಕಡಿಮೆ ಸಮಯದಲ್ಲಿ ಧ್ರುವ ದೊಡ್ಡಸಂಖ್ಯೆಯಲ್ಲಿ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ.

  ಸರ್ಜಾ ಕುಟುಂಬದ ಕುಡಿ ಧ್ರುವ ಸರ್ಜಾ 2012ರಲ್ಲಿ ಬಂದ 'ಅದ್ಧೂರಿ' ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಎ. ಪಿ ಅರ್ಜುನ್ ನಿರ್ದೇಶನದ ಈ ಸಿನಿಮಾ ಸೂಪರ್ ಹಿಟ್ ಆಗಿ ಆಕ್ಷನ್‌ ಪ್ರಿನ್ಸ್‌ಗೆ ದೊಡ್ಡ ಬ್ರೇಕ್ ಕೊಟ್ಟಿತ್ತು. ನಂತರ 'ಬಹದ್ಧೂರ್' ಕೂಡ ಹಿಟ್ ಲಿಸ್ಟ್ ಸೇರಿತ್ತು. 3ನೇ ಸಿನಿಮಾ 'ಭರ್ಜರಿ' ತೆರೆಗೆ ಬರೋದು ಕೊಂಚ ತಡವಾದರೂ ಬೇರೆ ಯಾವುದೇ ಸಿನಿಮಾ ಒಪ್ಪಿಕೊಳ್ಳದೇ ಆ ಸಿನಿಮಾ ಮೂಲಕ ಹ್ಯಾಟ್ರಿಕ್ ಹಿಟ್ ಬಾರಿಸಿದರು. ತಮ್ಮ ವಿಭಿನ್ನ ಮ್ಯಾನರಿಸಂ, ಡ್ಯಾನ್ಸ್, ಆಕ್ಷನ್ ಹಾಗೂ ಡೈಲಾಗ್ ಡೆಲಿವರಿಯಿಂದ ಧ್ರುವ ಅಭಿಮಾನಿಗಳ ಮನ ಗೆದ್ದಿದ್ದಾರೆ.

  Dhruva sarja turns 34 Fans wish Martin star on birthday

  ಕಳೆದ ವರ್ಷ ರಿಲೀಸ್ ಆಗಿದ್ದ 'ಪೊಗರು' ಸಿನಿಮಾ ಕೂಡ ದೊಡ್ಡಮಟ್ಟದಲ್ಲಿ ಸದ್ದು ಮಾಡಿ ಪ್ರೇಕ್ಷಕರನ್ನು ರಂಜಿಸಿತ್ತು. ಇದೀಗ ಪ್ಯಾನ್ ಇಂಡಿಯಾ ಸಿನಿಮಾಗಳ ಮೂಲಕ ಮತ್ತೆ ಅಭಿಮಾನಿಗಳ ಮನಗೆಲ್ಲಲು ಮುಂದಾಗಿದ್ದಾರೆ. ಮತ್ತೊಂದ್ಕಡೆ ಸರ್ಜಾ ಕುಟುಂಬಕ್ಕೆ ಮಹಾಲಕ್ಷ್ಮಿಯ ಆಗಮನವಾಗಿದೆ. ಹಾಗಾಗಿ ಶೂಟಿಂಗ್‌ನಿಂದ ಬಿಡುವು ಪಡೆದು ಫ್ಯಾಮಿಲಿಗೆ ಸಮಯ ಕೊಡುತ್ತಿದ್ದಾರೆ. ಶೀಘ್ರದಲ್ಲೇ ಮತ್ತೆ 'ಮಾರ್ಟಿನ್' ಸಿನಿಮಾ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ. ಚಿರು ಸರ್ಜಾ, ಧ್ರುವ ಸರ್ಜಾ, ರಾಯನ್ ಈಗ ಧ್ರುವ ಮಗಳು ಹುಟ್ಟಿರುವುದು ಕೂಡ ಅಕ್ಟೋಬರ್‌ ತಿಂಗಳಿನಲ್ಲೇ. ಹಾಗಾಗಿ ಸರ್ಜಾ ಫ್ಯಾಮಿಲಿಗೆ ಅಕ್ಟೋಬರ್ ತಿಂಗಳು ಬಹಳ ವಿಶೇಷ.

  English summary
  Dhruva sarja turns 34 Fans wish Martin star on birthday. Dhruva Sarja is celebrating his 34th birthday today. His fans took to social media to wish their favourite star. know more.
  Thursday, October 6, 2022, 9:41
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X