twitter
    For Quick Alerts
    ALLOW NOTIFICATIONS  
    For Daily Alerts

    ಆ ಕಡೆ ಅಯೋಧ್ಯೆ ತೀರ್ಪು: ಈ ಕಡೆ ಧ್ರುವ ಸರ್ಜಾ ಟ್ವೀಟ್

    |

    ಉತ್ತರ ಪ್ರದೇಶ ರಾಜ್ಯದ ಅಯೋಧ್ಯೆಯಲ್ಲಿರುವ ರಾಮ ಜನ್ಮ ಭೂಮಿ ವಿವಾದಿತ ಆಸ್ತಿ ಹಕ್ಕು ಪ್ರಕರಣಕ್ಕೆ ಸಂಬಂಧಿಸಿದಂತೆ, ಶನಿವಾರ ಬೆಳಿಗ್ಗೆ ಸುಪ್ರೀಂಕೋರ್ಟ್ ನ ಸಾಂವಿಧಾನಿಕ ನ್ಯಾಯಪೀಠವು ಮಹತ್ವದ ತೀರ್ಪು ಪ್ರಕಟಿಸಿದೆ.

    ವಿವಾದಿತ ಭೂಮಿಯನ್ನ ಮಂದಿರಕ್ಕೆ ಮತ್ತು ಮಸೀದಿಗೆ ಪ್ರತ್ಯೇಕ ಜಾಗ ಹಂಚಿಕೆ ಮಾಡಿ ಎಂದು ಆದೇಶ ನೀಡಿದೆ. ಈ ತೀರ್ಪು ಪ್ರಕಟವಾದ ಬಳಿಕ ಅನೇಕರ ಟ್ವೀಟ್ ಮಾಡಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

    ಸುಪ್ರೀಂ ತೀರ್ಪು: ಅಯೋಧ್ಯಾ ಭೂ ವ್ಯಾಜ್ಯ ಅಂತ್ಯ, ಮಂದಿರ-ಮಸೀದಿಗೆ ಹಂಚಿಕೆ

    ಆ ಕಡೆ ಅಯೋಧ್ಯೆ ತೀರ್ಪು ಪ್ರಕಟವಾಗುತ್ತಿದ್ದಂತೆ ಈ ಕಡೆ ಕನ್ನಡ ನಟ ಧ್ರುವ ಸರ್ಜಾ ಟ್ವೀಟ್ ಮಾಡಿದ್ದಾರೆ. ಏನದು? ಮುಂದೆ ಓದಿ.....

    ಜೈ ಶ್ರೀರಾಮ್ ಎಂದ ಧ್ರುವ ಸರ್ಜಾ

    ಜೈ ಶ್ರೀರಾಮ್ ಎಂದ ಧ್ರುವ ಸರ್ಜಾ

    ಅಯೋಧ್ಯೆ ತೀರ್ಪು ಪ್ರಕಟವಾದ ಬಳಿಕ ಕನ್ನಡ ನಟ ಧ್ರುವ ಸರ್ಜಾ ಅವರು ''ಬೋಲೋ ಭಾರತ್ ಮಾತಾ ಕೀ ಜಯ್....ಜೈ ಶ್ರೀರಾಮ್....ಜೈ ಆಂಜನೇಯ'' ಎಂದು ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ಗೆ ಅವರ ಅಭಿಮಾನಿಗಳು ರೀ-ಟ್ವೀಟ್ ಮಾಡಿ ಸಂಭ್ರಮ ಪಡುತ್ತಿದ್ದಾರೆ.

    ಅಯೋಧ್ಯಾ ಪ್ರಕರಣ Timeline : 1528 ರಿಂದ 2019ರ ತನಕ ಕಾಲಾನುಕ್ರಮದಲ್ಲಿ

    ಪಾರೂಲ್ ಯಾದವ್ ಟ್ವೀಟ್

    ಪಾರೂಲ್ ಯಾದವ್ ಟ್ವೀಟ್

    ''ಎಲ್ಲರೂ ಈಗ ಖುಷಿಯಾಗಿದ್ದೀರಾ ಎಂದು ನಾನು ಭಾವಿಸುತ್ತೇನೆ. ಎಲ್ಲರೂ ಒಟ್ಟಾಗಿ ಅದ್ಭುತವಾದ ದೇಶ ಕಟ್ಟಲು ನಾನು ಮುಂದೆ ಸಾಗಬಹದು. #indiaisone #unityindiversity #AYODHYAVERDICT'' ಎಂದು ಪಾರೂಲ್ ಟ್ವೀಟ್ ಮಾಡಿದ್ದಾರೆ.

    ಲಕ್ಷ್ಮಿ ಮಂಚು ಟ್ವೀಟ್

    ಲಕ್ಷ್ಮಿ ಮಂಚು ಟ್ವೀಟ್

    ತೆಲುಗು ಚಿತ್ರರಂಗದ ನಟಿ, ನಿರ್ಮಾಪಕಿ ಲಕ್ಷ್ಮಿ ಮಂಚು ಕೂಡ ಅಯೋಧ್ಯೆ ತೀರ್ಪಿನ ಬಗ್ಗೆ ಟ್ವೀಟ್ ಮಾಡಿದ್ದಾರೆ. ''ನಮ್ಮ ದೇಶ ಶಾಂತಿ ಮತ್ತು ಗೌರವ ಸಾಧಿಸಲಿ. ಇತರೆ ದೇಶಗಳಿಗಿಂತ ನಮ್ಮ ದೇಶ ಏಕೆ ಸುಂದರ ಅಂದ್ರೆ ನಮ್ಮಲ್ಲಿ ಕಂಡ ಬರುವ ವೈವಿಧ್ಯತೆ ಮತ್ತು ಒಟ್ಟುಗೂಡವಿಕೆ ಕಾರಣ'' ಎಂದಿದ್ದಾರೆ.

    ಅಯೋಧ್ಯಾ ತೀರ್ಪಿನ ವೇಳೆ ಸಿಜೆಐ ಉಲ್ಲೇಖಿಸಿದ ಅಂಶಗಳೇನು?

    ಸುಪ್ರೀಂ ತೀರ್ಪನ್ನು ಗೌರವಿಸಿ

    ಸುಪ್ರೀಂ ತೀರ್ಪನ್ನು ಗೌರವಿಸಿ

    ಬಾಲಿವುಡ್ ನಟಿ ಹುಮಾ ಖುರೇಶಿ ಈ ಬಗ್ಗೆ ಟ್ವೀಟ್ ಮಾಡಿದ್ದು, ''ನನ್ನ ಪ್ರೀತಿಯ ಭಾರತೀಯರೇ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪನ್ನು ಗೌರವಿಸಿ. ಈ ಒಂದು ದೇಶಕ್ಕಾಗಿ ನಾವೆಲ್ಲರೂ ಒಟ್ಟಾಗಿ ಹೆಜ್ಜೆ ಇಡಬೇಕಿದೆ'' ಎಂದಿದ್ದಾರೆ.

    English summary
    Kannada actor Dhruva Sarja, parul yadav, bollywood actress hhuma qureshi, telugu actress lakshmi manchu tweeted about ayodhya verdict.
    Saturday, November 9, 2019, 13:15
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X