»   » ಸೋದರಳಿಯನ 'ಭರ್ಜರಿ' ನೋಡಿ ಅರ್ಜುನ್ ಸರ್ಜಾ ಫುಲ್ ಖುಷ್.!

ಸೋದರಳಿಯನ 'ಭರ್ಜರಿ' ನೋಡಿ ಅರ್ಜುನ್ ಸರ್ಜಾ ಫುಲ್ ಖುಷ್.!

Posted By:
Subscribe to Filmibeat Kannada
Arjun Sarja appreciates Dhruva Sarja for Bharjari movie | Filmibeat Kannada

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ 'ಭರ್ಜರಿ' ಚಿತ್ರ ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು, 'ಭರ್ಜರಿ' ಚಿತ್ರವನ್ನ ಧ್ರುವ ಸರ್ಜಾರ ಅಂಕಲ್ ಅರ್ಜುನ್ ಸರ್ಜಾ ನೋಡಿ ಫುಲ್ ಖುಷಿ ಪಟ್ಟಿದ್ದಾರೆ.

ಫಸ್ಟ್ ಡೇ ಫಸ್ಟ್ ಶೋ ನರ್ತಕಿ ಚಿತ್ರಮಂದಿರದಲ್ಲಿ ಸಿನಿಮಾ ನೋಡಿದ ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ''ಚಿತ್ರದಲ್ಲಿ ಏನ್ ಇಷ್ಟ ಆಯ್ತು, ಯಾರು ಅಭಿನಯದ ಹೇಗಿದೆ, ನಿರ್ದೇಶಕರ ಕೆಲಸ ಹೇಗಿದೆ ಎಂಬುದರ ಬಗ್ಗೆ ಮಾತನಾಡಿದ್ದಾರೆ.

ಹಾಗಿದ್ರೆ, ಧ್ರುವ ಸರ್ಜಾ ಅಭಿನಯಕ್ಕೆ ಮಾವನಿಂದ ಸಿಕ್ಕ ಮಾರ್ಕ್ಸ್ ಎಷ್ಟು? 'ಭರ್ಜರಿ' ಚಿತ್ರ ನೋಡಿ ಅರ್ಜುನ್ ಸರ್ಜಾ ಏನಂದ್ರು? ಮುಂದೆ ಓದಿ.....

'ಭರ್ಜರಿ'ಯಾಗಿದೆ ಭರ್ಜರಿ ಸಿನಿಮಾ

''ಭರ್ಜರಿ' ಸಿನಿಮಾ ರಿಲೀಸ್ ಆಗಿದೆ. ಅಷ್ಟೇ ಭರ್ಜರಿಯಾಗಿದೆ. ನಮ್ಮ ಹುಡುಗ ಮೂರನೇ ಚಿತ್ರದಲ್ಲೂ ಕೂಡ ಹ್ಯಾಟ್ರಿಕ್ ಹೊಡೆದಿದ್ದಾನೆ. ನನಗೆ ತುಂಬ ಹೆಮ್ಮೆ ಎನಿಸುತ್ತಿದೆ. ಈ ಸಿನಿಮಾ ಸಂಪೂರ್ಣ ಕಮರ್ಷಿಯಲ್ ಪ್ಯಾಕೇಜ್. ಧ್ರುವ ಸರ್ಜಾ ಅದ್ಭುತ ಕೆಲಸ ಮಾಡಿದ್ದಾನೆ'' - ಅರ್ಜುನ್ ಸರ್ಜಾ, ನಟ

ವಿಮರ್ಶೆ: 'ಬಹದ್ದೂರ್' ಹುಡುಗನ 'ಭರ್ಜರಿ' ಪ್ರೇಮ ಕಥೆ

ಸ್ವಮೇಕ್ ಮಾಡಿ ಹ್ಯಾಟ್ರಿಕ್ ಹೊಡೆದ

''ಮೂರು ಸ್ವಮೇಕ್ ಸಿನಿಮಾ ಮಾಡ್ಬೇಕು ಅಂತ ಹಠ ಹಿಡಿದು, ನೇರವಾದ ಚಿತ್ರವೇ ಮಾಡಿ, ನಾಯಕನಾಗಿ ಅಭಿನಯಿಸಿ ದೊಡ್ಡ ಹೆಸರು ಮಾಡಿದ್ದಾನೆ. ತುಂಬ ಸಂತೋಷ ಆಗ್ತಿದೆ'' - ಅರ್ಜುನ್ ಸರ್ಜಾ, ನಟ

ಕಥೆ ಕೇಳ್ಬೇಡಿ, 'ಭರ್ಜರಿ' ಆಟ ನೋಡಿ ಎಂದ ವಿಮರ್ಶಕರು.!

ನಿರ್ದೇಶಕ ಒಳ್ಳೆ ಸಿನಿಮಾ ಮಾಡಿದ್ದಾರೆ

''ಚಿತ್ರದ ನಿರ್ದೇಶಕ ಚೇತನ್ ಕುಮಾರ್ ಅವರಿಗೂ ಒಳ್ಳೆಯದಾಗಲಿ. ತುಂಬ ಒಳ್ಳೆ ಪ್ರೆಸೆಂಟೇಶನ್. ಸಾಂಗ್ಸ್, ಫೈಟ್ಸ್, ಡೈಲಾಗ್ಸ್ ಎಲ್ಲವೂ ಚೆನ್ನಾಗಿದೆ'' - ಅರ್ಜುನ್ ಸರ್ಜಾ, ನಟ

'ವಿಷ ಕೊಟ್ಟು ಸಾಯಿಸಿ ಸಂತೋಷ ಪಡಿ': 'ವಿಕೃತ'ರಿಗೆ ಮಾತಲ್ಲೇ ಪೆಟ್ಟು ಕೊಟ್ಟ ಜಗ್ಗೇಶ್!

ಮುದ್ದಾದ ಮೂರು ನಾಯಕಿಯರು

''ಇನ್ನು ಚಿತ್ರದ ಮೂವರು ಮುದ್ದಾದ ನಾಯಕಿಯರು ಬಗ್ಗೆ ಹೇಳಲೇಬೇಕು. ರಚಿತಾ ರಾಮ್ ಸೂಪರ್ ಆಗಿ ಪಾತ್ರ ನಿರ್ವಹಿಸಿದ್ದಾರೆ. ಹರಿಪ್ರಿಯಾ, ವೈಶಾಲಿ ದೀಪಕ್ ಕೂಡ ಅಷ್ಟೇ ಚೆನ್ನಾಗಿ ಅಭಿನಯಿಸಿದ್ದಾರೆ. ಕ್ಯಾಮೆರಾ ವರ್ಕ್ ಶ್ರೀಶಾ ಮತ್ತು ಮ್ಯೂಸಿಕ್ ಚಿತ್ರಕ್ಕೆ ದೊಡ್ಡ ಶಕ್ತಿಯಾಗಿದೆ'' - ಅರ್ಜುನ್ ಸರ್ಜಾ, ನಟ

ಭರ್ಜರಿ 'ಫೇಸ್ ಬುಕ್ ಲೈವ್' ಮಾಡಿ ಸಿಕ್ಕಿಬಿದ್ದ ಯುವಕ ಕೊಟ್ಟ ಕಾರಣ.!

English summary
Action King, Dhruva Sarja uncle Arjun Sarja Speak about Bharjari Movie. The Movie Directed by Chethan Kumar.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada