For Quick Alerts
  ALLOW NOTIFICATIONS  
  For Daily Alerts

  ಮತ್ತೊಬ್ಬ ಸಹೋದರನಿಗೆ ಸ್ವಾಗತ ಕೋರಿದ ಧ್ರುವ ಸರ್ಜಾ

  By Bharath Kumar
  |
  ಮತ್ತೊಬ್ಬ ಸರ್ಜಾ ಕುಡಿಗೆ ಸ್ವಾಗತ ಕೋರಿದ ಧ್ರುವ ಸರ್ಜಾ | Filmibeat Kannada

  ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ, ಯುವ ಸಾಮ್ರಾಟ್ ಚಿರಂಜೀವಿ ಸರ್ಜಾ, ಆಕ್ಷನ್ ಕಿಂಗ್ ಧ್ರುವ ಸರ್ಜಾ ನಂತರ ಈಗ ಸರ್ಜಾ ಕುಟುಂಬದ ಮತ್ತೊಂದು ಕುಡಿ ಪವನ್ ತೇಜ ಅವರು ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. 'ಅಥರ್ವ' ಚಿತ್ರದ ಮೂಲಕ ಸ್ಯಾಂಡಲ್ ವುಡ್ ಪ್ರವೇಶ ಮಾಡಿರುವ ಪವನ್ ತೇಜಗೆ ಸಹೋದರ ಧ್ರುವ ಸ್ವಾಗತ ಕೋರಿದ್ದಾರೆ.

  'ಅಥರ್ವ' ಟೀಸರ್ ನೋಡಿರುವ ಧ್ರುವ ಚಿತ್ರದ ಬಗ್ಗೆ ಪವನ್ ತೇಜ ಬಗ್ಗೆ ಭರವಸೆ ವ್ಯಕ್ತಪಡಿಸಿದ್ದಾರೆ. ''ಟೀಸರ್ ನೋಡಿ ತುಂಬ ಖುಷಿ ಆಯ್ತು. ಯಾಕಂದ್ರೆ, ಚಿತ್ರದ ನಾಯಕ ಪವನ್ ತೇಜ ನನ್ನ ಸಹೋದರ. ತುಂಬ ಚೆನ್ನಾಗಿ ಕಾಣ್ತಾನೆ. ಪಾಸಿಟೀವ್ ಅಂಶ ಕಾಣ್ತಿದೆ. ನೀವೆಲ್ಲರೂ ನೋಡಿ ಪ್ರೋತ್ಸಾಹಿಸಬೇಕು'' ಎಂದು ಶುಭಕೋರಿದ್ದಾರೆ.

  ಸರ್ಜಾ ಕುಟುಂಬದ ಕುಡಿ ಪವನ್ ಅಭಿನಯದ 'ಅಥರ್ವ' ಟೀಸರ್

  ಅಂದ್ಹಾಗೆ, ಪವನ್ ತೇಜ, ಅರ್ಜುನ್ ಸರ್ಜಾ ಅವರ ತಂಗಿ ಮಗ. ಎಲ್ಲ ರೀತಿಯ ಪೂರ್ವ ತಯಾರಿ ಮಾಡಿಕೊಂಡೇ ಸಿನಿಮಾರಂಗಕ್ಕೆ ಪ್ರವೇಶಿಸಿದ್ದಾರೆ. ಆಕ್ಟಿಂಗ್, ಡ್ಯಾನ್ಸ್, ಫೈಟ್ ಹೀಗೆ ಎಲ್ಲವನ್ನ ತರಬೇತಿ ಪಡೆದುಕೊಂಡಿದ್ದಾರೆ. ಈ ಚಿತ್ರದಲ್ಲಿ ಪವನ್ ಮೂರು ವಿಭಿನ್ನ ಶೇಡ್ ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದು, 15 ಕೆಜಿ ತೂಕ ಇಳಿಸಿಕೊಂಡಿದ್ದಾರಂತೆ. ಮೈಸೂರಿನಲ್ಲಿ ಶಿಕ್ಷಣ ಮುಗಿಸಿರುವ ಪವನ್, ರಂಗಭೂಮಿಯಲ್ಲಿ ಪಳಗಿದ್ದಾರೆ.

  ಅರುಣ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ಸನಂ ಶೆಟ್ಟಿ ನಾಯಕಿಯಾಗಿದ್ದಾರೆ. ಇದು ಇವರ ಮೊದಲ ಕನ್ನಡ ಸಿನಿಮಾ. ಇನ್ನುಳಿದಂತೆ ರಂಗಾಯಣ ರಘು, ಧರ್ಮೇಂದ್ರ ಅರಸ್, ಯಶವಂತ್ ಶೆಟ್ಟಿ, ಸುಚ್ಚೇಂದ್ರ ಪ್ರಸಾದ್ ಸೇರಿದಂತೆ ಹಲವರು ಅಭಿನಯಿಸಿದ್ದಾರೆ. ಎಲ್ಲ ಅಂದುಕೊಂಡಂತೆ ಆದ್ರೆ, ಫೆಬ್ರವರಿ ತಿಂಗಳಲ್ಲಿ ತೆರೆಮೇಲೆ ಬರುವ ಸಾಧ್ಯತೆ ಇದೆ.

  English summary
  Kannada actor dhruva sarja speak about his cousin brother pawan tej's debut movie atharva in sandalwood.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X