For Quick Alerts
  ALLOW NOTIFICATIONS  
  For Daily Alerts

  ಫನ್ ಗಾಗಿ ಮಾಡಿದ್ದು, ಆದರೀಗ ಅಮೂಲ್ಯವಾದ ವಿಡಿಯೋವಾಗಿದೆ: ಧ್ರುವ ಸರ್ಜಾ ಪತ್ನಿ

  |

  ಚಿರಂಜೀವಿ ಸರ್ಜಾ ನಿಧನಹೊಂದಿ ಮೂರು ವಾರಗಳು ಕಳೆದರು ಅವರ ನೆನಪು ಕಾಡುತ್ತಲೆ ಇದೆ. ಕುಟುಂಬದವರು ಚಿರು ನೆನಪಲ್ಲೆ ದಿನಕಳೆಯುತ್ತಿದ್ದಾರೆ. ಚಿರು ಜೊತೆ ಕಳೆದ ಅಮೂಲ್ಯ ಸಮಯವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿ ಭಾವುಕರಾಗುತ್ತಿದ್ದಾರೆ.

  Nikhil Kumaraswamy to start agriculture ತಾತನಂತೆ ಮಣ್ಣಿನ ಮಗನಾಗಲು ಹೊರಟ ನಿಖಿಲ್ ಕುಮಾರಸ್ವಾಮಿ

  ಧ್ರುವ ಸರ್ಜಾ ಅಣ್ಣನ ನೆನೆದು ದಿನಕೊಂದು ಪೋಸ್ಟ್ ಹಂಚಿಕೊಳ್ಳುತ್ತಿದ್ದಾರೆ. ಇದೀಗ ಧ್ರುವ ಸರ್ಜಾ ಪತ್ನಿ ಪ್ರೇರಣಾ ಚಿರು ಜೊತೆ ಕಳೆದ ಅಮೂಲ್ಯವಾದ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಚಿರು ಮತ್ತು ಪ್ರೇರಣಾ ಇಬ್ಬರು ಡ್ಯಾನ್ಸ್ ಮಾಡುತ್ತಿರುವ ವಿಡಿಯೋವ್ನನು ಹಂಚಿಕೊಂಡಿದ್ದಾರೆ. ಈ ವಿಡಿಯೋವೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

  ಅಮೂಲ್ಯ ವಿಡಿಯೋ

  ಅಮೂಲ್ಯ ವಿಡಿಯೋ

  ಧ್ರುವ ಪತ್ನಿ ಪ್ರೇರಣಾ ಈ ವಿಡಿಯೋ ಶೇರ್ ಮಾಡಿ "ಇದನ್ನು ಫನ್ ಗಾಗಿ ಮಾಡಿದ್ದು, ಇದನ್ನು ಪೋಸ್ಟ್ ಮಾಡುತ್ತೇನೆ ಅಂತ ಎಂದಿಗೂ ಅಂದುಕೊಂಡಿರಲಿಲ್ಲ. ಆದರೀಗ ನನ್ನ ಬಳಿ ಇರುವ ಅಮೂಲ್ಯವಾದ ವಿಡಿಯೋಗಳಲ್ಲಿ ಒಂದಾಗಿದೆ" ಎಂದು ಬರೆದು ಹಾರ್ಟ್ ಇಮೋಜಿ ಹಾಕಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

  ಚಿರು ಸರ್ಜಾ ಅಭಿನಯದ ರಾಜಮಾರ್ತಾಂಡ ಸಿನಿಮಾಕ್ಕೆ ದರ್ಶನ್ ಧ್ವನಿಚಿರು ಸರ್ಜಾ ಅಭಿನಯದ ರಾಜಮಾರ್ತಾಂಡ ಸಿನಿಮಾಕ್ಕೆ ದರ್ಶನ್ ಧ್ವನಿ

  ಚಿರು ನೆನಪಲ್ಲಿ ವಿಡಿಯೋ

  ಚಿರು ನೆನಪಲ್ಲಿ ವಿಡಿಯೋ

  ಅಂದ್ಹಾಗೆ ಪ್ರೇರಣಾ ಎಲ್ಲಿಯೂ ಡ್ಯಾನ್ಸ್ ಅಥವಾ ಜಾಲಿ ಮಾಡುತ್ತಿರುವ ವಿಡಿಯೋವನ್ನು ಶೇರ್ ಮಾಡಿರಲಿಲ್ಲ. ಇದೆ ಮೊದಲ ಬಾರಿಗೆ ಚಿರು ನೆನಪಿಗಾಗಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಇದಕ್ಕೂ ಮೊದಲು ಪ್ರೇರಣಾ ಮತ್ತು ಚಿರು ಇಬ್ಬರು ಕಣ್ಣು ಮಿಟುಕಿಸುವ ವಿಡಿಯೋವನ್ನು ಶೇರ್ ಮಾಡಿದ್ದರು.

  ಅಣ್ಣ ಚಿರಂಜೀವಿ ಸರ್ಜಾಗೆ ದನಿಯಾಗಲಿದ್ದಾರೆ ಧ್ರುವ ಸರ್ಜಾಅಣ್ಣ ಚಿರಂಜೀವಿ ಸರ್ಜಾಗೆ ದನಿಯಾಗಲಿದ್ದಾರೆ ಧ್ರುವ ಸರ್ಜಾ

  ಮೇಘನಾ ಹೆಸರು ಬದಲು

  ಮೇಘನಾ ಹೆಸರು ಬದಲು

  ಇತ್ತೀಚಿಗೆ ಮೇಘನಾ ರಾಜ್ ಹೆಸರನ್ನು ಬದಲಾಯಿಸಿಕೊಂಡಿದ್ದಾರೆ. ಮೇಘನಾ ಹೆಸರಿನ ಜೊತೆಗೆ ಸರ್ಜಾ ಕುಟುಂಬದ ಸರ್ ನೇಮ್ ಸೇರಿಕೊಳ್ಳುವ ಮೂಲಕ ಪತಿಯ ನೆನಪು ಸದಾ ಜೊತೆಯಲ್ಲಿ ಇರುವಂತೆ ಮಾಡಿದ್ದಾರೆ. ಇನ್ನೂ ಫೇಸ್ ಪ್ರೊಫೈಲ್ ಬದಲಾಯಿಸಿದ್ದಾರೆ. ಚಿರು ನೆನಪು ಅವರನ್ನು ಸದಾ ಕಾಡುತ್ತಿದೆ. ಆ ನೆನಪಿನಲ್ಲಿಯೆ ದಿನಕಳೆಯುತ್ತಿದ್ದಾರೆ.

  ಚಿರಂಜೀವಿ ನೆನಪಲ್ಲಿ ಹೆಸರು ಬದಲಿಸಿಕೊಂಡ ಮೇಘನಾ ರಾಜ್ಚಿರಂಜೀವಿ ನೆನಪಲ್ಲಿ ಹೆಸರು ಬದಲಿಸಿಕೊಂಡ ಮೇಘನಾ ರಾಜ್

  ಚಿರು ಪಾತ್ರಕ್ಕೆ ಡಬ್ಬಿಂಗ್

  ಚಿರು ಪಾತ್ರಕ್ಕೆ ಡಬ್ಬಿಂಗ್

  ಚಿರು ಅವರನ್ನು ನೆನಪಿಸಿಕೊಂಡು ಧ್ರುವ ಸರ್ಜಾ ನಿರಂತರವಾಗಿ ಸಾಮಾಜಿಕ ಜಾಲತಾಣದಲ್ಲಿ ಫೋಟೊಗಳನ್ನು ಹಂಚಿಕೊಳ್ಳುವ ಮೂಲಕ ನೋವು ವ್ಯಕ್ತಪಡಿಸುತ್ತಿದ್ದಾರೆ. ಚಿರಂಜೀವಿ ಸರ್ಜಾ ಅವರ 'ರಾಜಮಾರ್ತಾಂಡ' ಚಿತ್ರದಲ್ಲಿ ಚಿರು ಪಾತ್ರಕ್ಕೆ ಧ್ರುವ ಸರ್ಜಾ ಡಬ್ಬಿಂಗ್ ಮಾಡಲು ಮುಂದಾಗಿದ್ದಾರೆ.

  English summary
  Dhruva Sarja wife Prerana Sarja Shares Dance video with Chiranjeevi Sarja.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X