»   » ವಿಶ್ವದಾಖಲೆ ನಿರ್ಮಿಸಿದ ಧ್ರುವ ಶರ್ಮಾ ಅಭಿನಯದ ಕೊನೆಯ ಸಿನಿಮಾ

ವಿಶ್ವದಾಖಲೆ ನಿರ್ಮಿಸಿದ ಧ್ರುವ ಶರ್ಮಾ ಅಭಿನಯದ ಕೊನೆಯ ಸಿನಿಮಾ

Posted By:
Subscribe to Filmibeat Kannada
For Quick Alerts
ALLOW NOTIFICATIONS
For Daily Alerts

  ಇತ್ತೀಚೆಗಷ್ಟೇ ಕೊನೆಯುಸಿರೆಳೆದ ನಟ ಧ್ರುವ ಶರ್ಮಾ ಅವರು ಬಹುಮುಖ ಪ್ರತಿಭೆಯಾಗಿದ್ದರು ಎಂಬುದು ಗೊತ್ತಿರುವ ವಿಚಾರ. ಮಾತು ಬಾರದಿದ್ದರೂ, ಕಿವಿ ಕೇಳದಿದ್ದರೂ ಅದರ ನೂನ್ಯತೆಗಳು ಪ್ರೇಕ್ಷಕರಿಗೆ ಗೊತ್ತಾಗದ ಹಾಗೆ ನಟಿಸುತ್ತಿದ್ದ ಧ್ರುವ ಶರ್ಮಾ ಹಲವು ಚಿತ್ರಗಳಲ್ಲಿ ಅಭಿನಯಿಸಿದ್ದರು. ಆದ್ರೆ, ಅವರು ಅಭಿನಯಿಸಿ ತೆರೆಕಾಣಬೇಕಿದ್ದ ಕೊನೆಯ ಚಿತ್ರ ವಿಶ್ವ ದಾಖಲೆ ನಿರ್ಮಿಸಿದೆ.

  ಹೌದು, ಧ್ರುವ ಶರ್ಮಾ ಅವರು ನಟಿಸಿದ್ದ ಕೊನೆಯ ಚಿತ್ರ ಇನ್ನೇನೂ ಬಿಡುಗಡೆಯಾಗಬೇಕಿತ್ತು. ಈ ಮಧ್ಯೆ ದುರಂತ ಸಾವುಗೀಡಾಗಿದ್ದಾರೆ. ಆದ್ರೆ, ಈ ಚಿತ್ರ ಕನ್ನಡ ಚಿತ್ರರಂಗ, ಭಾರತೀಯ ಚಿತ್ರರಂಗ ಇತಿಹಾಸದಲ್ಲಿ ಇದುವರೆಗೂ ಯಾರೂ ಮಾಡಿರದ ಅಪರೂಪದ ದಾಖಲೆಯನ್ನ ಮಾಡಿದೆ.

  ಅಷ್ಟಕ್ಕೂ, ಧ್ರುವ ಶರ್ಮಾ ಅವರ ಕೊನೆಯ ಚಿತ್ರ ಯಾವುದು? ಈ ಸಿನಿಮಾ ಮಾಡಿರುವ ದಾಖಲೆ ಏನು? ಮುಂದೆ ಓದಿ.

  ಧ್ರುವ ನಟನೆಯ ಕೊನೆ ಚಿತ್ರ 'ಕಿಚ್ಚು'

  ನಟ ಧ್ರುವ ಶರ್ಮಾ ಅಭಿನಯಿಸಿದ್ದ ಕೊನೆಯ ಚಿತ್ರ 'ಕಿಚ್ಚು'. ಬಹುತೇಕ ಚಿತ್ರೀಕರಣ ಮುಗಿಸಿದ್ದ ಈ ಚಿತ್ರ ಈಗ ಬಿಡುಗಡೆಗೆ ಸಜ್ಜಾಗಿತ್ತು. ವಿಶೇಷ ಅಂದ್ರೆ, ಈ ಚಿತ್ರವನ್ನ ಸ್ವತಃ ಧ್ರುವ ಶರ್ಮಾ ಅವರೇ ನಿರ್ಮಾಣ ಮಾಡಿದ್ದರು.

  ನಟ ಧ್ರುವ ಶರ್ಮಾ ಅಭಿನಯಿಸಿದ್ದ ಕನ್ನಡ ಚಿತ್ರಗಳಿವು

  ವಿಶ್ವದಾಖಲೆ ನಿರ್ಮಿಸಿದ ಸಿನಿಮಾ

  ಈ ಚಿತ್ರದಲ್ಲಿ ಧ್ರುವ ಶರ್ಮಾ ಶರ್ಮಾ ಅವರಿಗೆ ಜೋಡಿಯಾಗಿ ಬಹುಭಾಷಾ ನಟಿ ಅಭಿನಯ ಕಾಣಿಸಿಕೊಂಡಿದ್ದಾರೆ. ಇವರಿಬ್ಬರ ಜೋಡಿಯೇ ಈಗ ಸಿನಿಲೋಕದಲ್ಲಿ ದಾಖಲೆಗೆ ಕಾರಣವಾಗಿರುವುದು.

  20 ವರ್ಷದ ಗೆಳೆಯನ ಅಗಲಿಕೆಗೆ ಕಂಬನಿ ಮಿಡಿದ ಜೆ.ಕೆ

  ಏನದು ದಾಖಲೆ?

  ನಟಿ ಅಭಿನಯ ಕೂಡ ಧ್ರುವ ಶರ್ಮಾ ಅವರಂತೆ ಮಾತು ಬಾರದ, ಮತ್ತು ಕಿವಿ ಕೇಳದ ವಿಶಿಷ್ಟ ಪ್ರತಿಭೆ. ಹೀಗಾಗಿ, ಈ ನಿಜಜೀವನದ ಇಬ್ಬರು ವಿಶಿ‍ಷ್ಟ ಕಲಾವಿದರು, ಚಿತ್ರದಲ್ಲೂ ಅದೇ ರೀತಿಯ ಪಾತ್ರಗಳಲ್ಲಿ ಬಣ್ಣಹಚ್ಚಿರುವುದು ಇದೇ ಮೊದಲು. ಚಿತ್ರದಲ್ಲಿ ಇಬ್ಬರು ಗಂಡ-ಹೆಂಡತಿ ಪಾತ್ರದಲ್ಲಿ ಅಬಿನಯಿಸಿದ್ದಾರೆ. ಅಭಿನಯ ಕನ್ನಡ, ತೆಲುಗು, ತಮಿಳು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. 'ಹುಡುಗರು' ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ಅವರಿಗೆ ತಂಗಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

  ಧ್ರುವ್ ಶರ್ಮ ಸಾವಿನ ಸುದ್ದಿ ಕೇಳಿ ನಟ ಜಗ್ಗೇಶ್ ಹೃದಯ ಛಿದ್ರ

  ರಾಗಿಣಿ ದ್ವಿವೇದಿ ಮುಖ್ಯ ಪಾತ್ರ

  ನಿರ್ದೇಶಕ ಪ್ರದೀಪ್ ರಾಜ್ ಆಕ್ಷನ್ ಕಟ್ ಹೇಳಿರುವ 'ಕಿಚ್ಚು' ಚಿತ್ರದಲ್ಲಿ ರಾಗಿಣಿ ದ್ವಿವೇದಿ, ಸಾಯಿ ಕುಮಾರ್, ಧ್ರುವ ಶರ್ಮಾ, ಪ್ರದೀಪ್ ರಾಜ್ ಸೇರಿದಂತೆ ಹಲವರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.

  ಕಿಚ್ಚ ಸುದೀಪ್ ಅಭಿನಯ

  ಎಲ್ಲರಿಗೂ ಗೊತ್ತಿರುವಾಗೆ, ಕಿಚ್ಚ ಸುದೀಪ್ ಅವರಿಗೆ ಧ್ರುವ ಶರ್ಮಾ ಅವರು ಮೇಲೆ ಅಪಾರವಾದ ಒಲವು ಇತ್ತು. ಸಿಸಿಎಲ್ ನಲ್ಲಿ ಒಂದೇ ತಂಡವನ್ನ ಪ್ರತಿನಿಧಿಸಿದ್ದರು. ವಿಶೇಷ ಅಂದ್ರೆ, ಕಿಚ್ಚು ಚಿತ್ರದಲ್ಲಿ ಸುದೀಪ್ ಕೂಡ ಒಂದು ಪ್ರಮುಖ ಪಾತ್ರವನ್ನ ನಿರ್ವಹಿಸಿದ್ದಾರೆ.

  'ಧೃವ'ತಾರೆಯ ಅಕಾಲಿಕ ಮರಣ ನಂಬಲಸಾಧ್ಯ ಎಂದ ಕಿಚ್ಚ ಸುದೀಪ್

  ಅರಣ್ಯ ಸಂರಕ್ಷಣೆಯ ಸುತ್ತ ಕಥೆ

  'ಕಿಚ್ಚು' ಕಾಡು ಸಂರಕ್ಷಣೆಯ ಕುರಿತಾದ ಚಿತ್ರ. ಚಿತ್ರದಲ್ಲಿ ಧ್ರುವ ಬುಡುಕಟ್ಟು ಹುಡುಗನಾಗಿ ಕಾಣಿಸಿಕೊಂಡಿದ್ದರು.

  ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ್ರಾ ನಟ ಧ್ರುವ ಶರ್ಮಾ.?

  English summary
  Dhruva Sharma's last movie Kichchu will create history in India. Dhruva Sharma is seen as the fighter, while actress Abhinaya appears as his wife. It will create history by being the first movie in India to feature real-life hearing and speech impaired actors in the lead roles

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more