For Quick Alerts
  ALLOW NOTIFICATIONS  
  For Daily Alerts

  ಪ್ರೇಕ್ಷಕರ ಒತ್ತಾಯದ ಮೇರೆಗೆ ರೀ ರಿಲೀಸ್ ಆಗುತ್ತಿದೆ 'ದಿಯಾ' ಸಿನಿಮಾ

  |

  ಸ್ಯಾಂಡಲ್ ವುಡ್ ನಲ್ಲಿ ಈ ವರ್ಷ ಸಿಕ್ಕಾಪಟ್ಟೆ ಸದ್ದು ಮಾಡಿದ ದಿಯಾ ಸಿನಿಮಾ ಮತ್ತೆ ಚಿತ್ರಮಂದಿರಕ್ಕೆ ಎಂಟ್ರಿ ಕೊಡುತ್ತಿದೆ. ದಿಯಾ ಸಿನಿಮಾ ಫೆಬ್ರವರಿ 7ರಂದು ಬಿಡುಗಡೆಯಾಗಿದೆ. ಸಿನಿಮಾ ರಿಲೀಸ್ ಆದ ಸಮಯದಲ್ಲಿ ಚಿತ್ರಮಂದಿರದ ಸಮಸ್ಯೆಯಿಂದ ಸಿನಿಮಾವನ್ನು ತೆಗೆದುಹಾಕಲಾಗಿತ್ತು. ಆದರೆ ಚಿತ್ರರಂಗದ ಕೆಲವು ಗಣ್ಯರ ಬೆಂಬಲ ಮತ್ತು ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದ ನಂತರ ಚಿತ್ರಮಂದಿರ ಸಂಖ್ಯೆ ಹೆಚ್ಚಾಯಿತು.

  ಕೆಲವು ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದ್ದ ಸಮಯದಲ್ಲಿ ಕೊರೊನಾ ವೈರಲ್ ಪರಿಣಾಮ ಸಿನಿಮಾ ಪ್ರದರ್ಶನ ರದ್ದು ಮಾಡಲಾಯಿತು. ಬಳಿಕ ಸಿನಿಮಾವನ್ನು ಆನ್ ಲೈನ್ ನಲ್ಲಿ ರಿಲೀಸ್ ಮಾಡಲಾಯಿತು. ಲಾಕ್ ಡೌನ್ ಸಮಯದಲ್ಲಿ ದಿಯಾ ಸಿನಿಮಾವನ್ನು ಆನ್ ಲೈನ್ ನಲ್ಲಿ ಜನ ಮುಗಿಬಿದ್ದು ವೀಕ್ಷಿಸಿದ್ದಾರೆ. ಅಲ್ಲದೆ ಸಿನಿಮಾವನ್ನು ಮತ್ತೆ ಚಿತ್ರಮಂದಿರಗಳಲ್ಲಿ ರಿಲೀಸ್ ಮಾಡುವಂತೆ ಪ್ರೇಕ್ಷಕರು ಬೇಡಿಕೆ ಇಟ್ಟಿದ್ದರು. ಅದರಂತೆ ಈಗ ಸಿನಿಮಾ ಮತ್ತೆ ಚಿತ್ರಮಂದಿರಕ್ಕೆ ಬರುತ್ತಿದೆ.

  'ದಿಯಾ' ಸಿನಿಮಾ ರಿಮೇಕ್ ರೈಟ್ಸ್ ಗೆ ಹೆಚ್ಚಿದ ಬೇಡಿಕೆ'ದಿಯಾ' ಸಿನಿಮಾ ರಿಮೇಕ್ ರೈಟ್ಸ್ ಗೆ ಹೆಚ್ಚಿದ ಬೇಡಿಕೆ

  ಇದೀಗ ಲಾಕ್ ಡೌನ್ ಬಳಿಕ ಚಿತ್ರಮಂದಿರಗಳು ಓಪನ್ ಆಗುತ್ತಿವೆ. ಸುಮಾರು 7 ತಿಂಗಳ ಬಳಿಕ ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರದರ್ಶನ ಕಾಣುತ್ತಿದೆ. ಅಕ್ಟೋಬರ್ 15ರಿಂದ ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರದರ್ಶನಕ್ಕೆ ತಯಾರಿ ಮಾಡಿಕೊಳ್ಳಲಾಗುತ್ತಿದೆ. ಲಾಕ್ ಡೌನ್ ಮೊದಲು ರಿಲೀಸ್ ಆದ ಸಿನಿಮಾಗಳಿಗೆ ಈಗ ಮೊದಲು ಆದ್ಯತೆ ನೀಡಲಾಗುತ್ತಿದೆ.

  ಈ ವರ್ಷದ ಪ್ರಾರಂಭದಲ್ಲಿ ಪ್ರೇಕ್ಷಕರಿಗೆ ಭರ್ಜರಿ ಮನರಂಜನೆ ನೀಡಿದ ದಿಯಾ ಮತ್ತು ಲವ್ ಮಾಕ್ಟೇಲ್ ಸಿನಿಮಾ ರೀ ರಿಲೀಸ್ ಗೆ ಅವಕಾಶ ಕೊಡಲಾಗಿದೆ. ಅಕ್ಟೋಬರ್ 16ರಂದು ದಿಯಾ ಸಿನಿಮಾ ರಿಲೀಸ್ ಆಗುತ್ತಿದೆ. ಈ ಬಗ್ಗೆ ಸಿನಿಮಾತಂಡ ಅಧಿಕೃತವಾಗಿ ಬಹಿರಂಗಡಿಸಿದೆ. ಮತ್ತೆ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡಿ ಎಂಜಾಯ್ ಮಾಡುತ್ತಾರೆ ಎನ್ನುವ ನಿರೀಕ್ಷೆಯಲ್ಲಿದೆ ಸಿನಿಮಾತಂಡ.

  ಜೈಲಲ್ಲೇ Sanjana ಆಸೆಯನ್ನು ಈಡೇರಿಸ್ತಾರ ಪೊಲೀಸರು | Sanjana 31st Birthday | Filmibeat Kannada

  ದಿಯಾ ಸಿನಿಮಾಗೆ ಪ್ರೇಕ್ಷಕರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಸಿನಿಮಾದ ಪಾತ್ರಗಳು ಪ್ರೇಕ್ಷರನ್ನು ಇಂದಿಗೂ ಕಾಡುತ್ತಿವೆ. ಚಿತ್ರದಲ್ಲಿ ನಾಯಕಿಯಾಗಿ ಖುಷಿ ಕಾಣಿಸಿಕೊಂಡಿದ್ದಾರೆ. ನಾಯಕರಾಗಿ ದೀಕ್ಷಿತ್ ಮತ್ತು ಪೃಥ್ವಿ ಅಂಬರ್ ಮಿಂಚಿದ್ದಾರೆ. ಚಿತ್ರಕ್ಕೆ ಅಶೋಕ್ ಆಕ್ಷನ್ ಕಟ್ ಹೇಳಿದ್ದಾರೆ. ಲಾಕ್ ಡೌನ್ ಬಳಿಕ ರಿಲೀಸ್ ಆಗುತ್ತಿರುವ ದಿಯಾ ಸಿನಿಮಾಗೆ ಯಾವ ರೀತಿ ಪ್ರತಿಕ್ರಿಯೆ ಸಿಗಲಿದೆ ಎಂದು ಕಾದುನೋಡಬೇಕು.

  English summary
  Super hit Dia Movie to Re Release in theatres from October 16.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X