»   » ಸ್ಯಾಂಡಲ್ ವುಡ್ ಡಿಫರೆಂಟ್ ಲವ್ ಸ್ಟೋರಿಗಳು

ಸ್ಯಾಂಡಲ್ ವುಡ್ ಡಿಫರೆಂಟ್ ಲವ್ ಸ್ಟೋರಿಗಳು

Posted By: ಜೀವನರಸಿಕ
Subscribe to Filmibeat Kannada

ಒಂದು ಹೊಸಬರ ಸಿನಿಮಾ ಗೆದ್ರೆ ಅದೆಷ್ಟೋ ಗಾಂಧಿನಗರದ ಹೊಸ ನಿರ್ದೇಶಕರು ಹಾಲು ಕುಡೀತಾರೆ. ಮತ್ತೆಷ್ಟೋ ಅಸೋಸಿಯೇಟ್ ಡೈರೆಕ್ಟರ್ ಗಳು ಮೈಕೊಡವಿ ಏಳ್ತಾರೆ. ತಮ್ಮದೇ ಒಂದು ಕಥೆ ಜೊತೆಗೆ ನಿರ್ಮಾಪಕರ ಮನೆ ಮನೆ ಅಲೀತಾರೆ. ಅಂತಹಾ ಹೊಸ ಪ್ರತಿಭೆಗಳಿಗೆ ಹೊಸ ಆಸೆ ಹುಟ್ಟಿಸಿದ್ದು 'ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ' ಚಿತ್ರ.

'ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ' ಗೆದ್ದ ನಂತರ ಸ್ಯಾಂಡಲ್ ವುಡ್ ನಲ್ಲಿ ಹಲವು ಲವ್ ಸ್ಟೋರಿಗಳು ಬರ್ತಿವೆ. ಅದ್ರಲ್ಲಿ ನೆಗೆಟೀವ್ ಲವ್ ಸ್ಟೋರಿಗಳೇ ಹೆಚ್ಚು. ಅದೊಂಥರಾ ಮೇನಿಯಾ. ಅಂಥದ್ದೇ ಟೈಟಲ್ ಇಟ್ಕೊಂಡ್ರೆ ಬೇಗ ಜನರ ಮನಸ್ಸಿಗೆ ಮುಟ್ಟಬಹುದು ಅನ್ನೋ ಯೋಚನೆ ನಿರ್ಮಾಪಕರದ್ದು. ಹಾಗಾಗೀನೇ ಗೆದ್ದ ಸಿನಿಮಾದ ತರಹದ್ದೇ ಟೈಟಲ್ ಕೂಡ ಇಡೋದು.

ಆದ್ರೆ ಅಂಥಹದ್ದೇ ಸಿನಿಮಾ ಮಾಡೋಕೋಗಿ, ಏನು ಇಲ್ಲ ನಮ್ ಕೈಲಿ ಅಂತ ಗಾಲಿ ತಪ್ಪಿದವರೂ ಇದ್ದಾರೆ. ಆದ್ರೂ ಅಂತಹಾ ಸಿನಿಮಾಗಳನ್ನ ಮಾಡೋ ಹುಚ್ಚು ಹೋಗೋದಿಲ್ಲ. ಈಗ ಮತ್ತೊಬ್ಬ ನಟ ಅಂತಾದ್ದೇ ಲವ್ ಸ್ಟೋರಿಗೆ ಕೈ ಹಾಕಿದ್ದಾರೆ. ಇಲ್ಲೀವರೆಗೂ ಬಂದ ಲವ್ ಸ್ಟೋರಿಗಳ ಲಿಸ್ಟ್ ಕೊಡ್ತೀವಿ ನೋಡ್ತಾ ಹೋಗಿ.

ಕೃಷ್ಣನ್ ಲವ್ ಸ್ಟೋರಿ

ಹಾಗೆ ನೋಡಿದ್ರೆ ನಮಗೆ ಹಿಟ್ ಚಿತ್ರ 'ಕೃಷ್ಣನ್ ಲವ್ ಸ್ಟೋರಿ' ಮರೆತೇ ಹೋಗಿದೆ. ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ ಬರೋಕು ಮೊದಲು ಬಂದ ಲವ್ ಸ್ಟೋರಿ ಇದು. ಇದು ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ ಅನ್ನೋ ಟೈಟಲ್ ಗೆ ಪ್ರೇರಣೆಯಾಯ್ತಾ ಇಲ್ವಾ ಗೊತ್ತಿಲ್ಲ. ಅದ್ರೆ ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ ಬಂದ ಮೇಲಂತೂ ಹಲವು ಲವ್ ಸ್ಟೋರಿಗಳು ಬಂದ್ವು.

ಖರಾಬ್ ಲವ್ ಸ್ಟೋರಿ

ಸಿಂಪಲ್ ಲವ್ ಸ್ಟೋರಿಯಿಂದ ನವ ನಿರ್ದೇಶಕ ಪ್ರತಾಪ್ ಅನ್ನೋರು ಖರಾಬ್ ಲವ್ ಸ್ಟೋರಿ ಶುರು ಮಾಡ್ಕೊಂಡ್ರು. ಹೊಸಬರ ತಂಡ ಕಟ್ಕೊಂಡು ಶುರುಮಾಡಿದ ಈ ಸಿನಿಮಾ ಸದ್ಯ ನಿಂತು ಹೋಗಿದೆ.

ಹಾದಿಬೀದಿ ಲವ್ ಸ್ಟೋರಿ

ರಾಕೇಶ್ ಅಡಿಗ, ಶುಭಾ ಪೂಂಜಾ ಜೋಡಿಯಾಗಿದ್ರು ಅಂತ ಸುದ್ದಿ ಬಂದ ಈ ಹಾದಿ ಬೀದಿ ಲವ್ ಸ್ಟೋರಿ ಕೂಡ ಶೂಟಿಂಗ್ ಮುಗಿಸಿರೋ ಸುದ್ದಿ ಬಂದಿದೆ. ಲವ್ ಸ್ಟೋರಿ ಇಲ್ಲೂ ಇದೆ. ಆದ್ರೆ ಒಂದು ಗೆದ್ದ ಟೈಟಲ್ನ ಸೇರಿಸಿ ಹೊಸ ಟೈಟಲ್ ಇಟ್ರೆ ಗೆಲ್ಲುತ್ತಾ ಯಾರಿಗ್ಗೊತ್ತು.

ನಮ್ದೇ ನಿಮ್ದೇ ಲವ್ ಸ್ಟೋರಿ

ರೋಡ್ ರೋಮಿಯೋ ಸಿನಿಮಾ ಮಾಡಿ ಸೈಲೆಂಟಾಗಿದ್ದ ದಿಲೀಪ್ ಪೈ ಈಗ ನಮ್ದೇ ನಿಮ್ದೇ ಲವ್ಸ್ಟೋರಿ ಅನ್ನೋ ಹೊಸ ಚಿತ್ರವನ್ನ ಶುರುಮಾಡ್ತಿರೋ ಸುದ್ದಿ ಬಂದಿದೆ. ಸ್ವತಃ ದಿಲೀಪ್ ಪೈ ನಟಿಸಿ ನಿರ್ಮಾಣ ಮಾಡಿ ನಿರ್ದೇಶನ ಮಾಡ್ತಿರೋ ಚಿತ್ರ ಇದು.

ಕಿತ್ತೋದ್ ಲವ್ ಸ್ಟೋರಿ

ಪುಣ್ಯ ಅದೇನೇನ್ ನೆಗೆಟೀವ್ ಟೈಟಲ್ ಗಳಿಡ್ತಾರೋ ಗೊತ್ತಿಲ್ಲ. ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ ಪಾಸಿಟೀವ್ ಟೈಟಲ್ ಆದ್ರೆ ಕಿತ್ತೋದ್ ಲವ್ ಸ್ಟೋರಿ ಅನ್ನೋ ಟಿಪಿಕಲ್ ಟೈಟಲ್ಲೂ ಬಂದ್ ಹೋಯ್ತು.

ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ

ಗೆದ್ದ ಒಂದು ಸಿನಿಮಾ ಹಿಂದೆ ಜೋತು ಬೀಳೋ ಅದೆಷ್ಟೋ ಟೈಟಲ್ ಗಳನ್ನ ನೋಡ್ತಿದ್ರೆ ಟೈಟಲ್ ಗಳು ಸಿನಿಮಾನ ಗೆಲ್ಲಿಸ್ತವಾ ಅನ್ನೋ ಪ್ರಶ್ನೆ ಬರುತ್ತೆ. ಟೈಟಲ್ ಗಳೇ ಸಿನಿಮಾವನ್ನ ನೆನಪಿಟ್ಕೊಳ್ಳೋ ಹಾಗೆ ಮಾಡ್ತವಾ? ಸಿನಿಪ್ರೇಕ್ಷಕನೇ ಉತ್ತರ ಹೇಳ್ಬೇಕು.

English summary
Based on 'Simple Agi Ondh Love Story' title series of love stories are launched in Sandalwood. Some titles are very funny, some are strange. Kharab Love Story, Kittod Love Story are some of them.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada