For Quick Alerts
  ALLOW NOTIFICATIONS  
  For Daily Alerts

  ಡಿಸೆಂಬರ್ ನಲ್ಲಿ ದಿಗಂತ್-ಐಂದ್ರಿತಾ ರೇ ಮದುವೆ.?

  By Harshitha
  |
  ಹಸೆಮಣೆ ಏರಲಿದ್ದಾರೆ ಮನಸಾರೆ ಜೋಡಿ..!! | Filmibeat Kannada

  ''ನನ್ನ ಮದುವೆಗೆ ಕಾಯುತ್ತಿದ್ದೇನೆ. ಇದೇ ವರ್ಷ ಮದುವೆ ಆಗಲು ಮನಸ್ಸು ಮಾಡಿದ್ದೇನೆ'' ಎಂದು ಶಿವರಾಜ್ ಕುಮಾರ್ ನಿರೂಪಣೆಯಲ್ಲಿ ಮೂಡಿ ಬರುತ್ತಿದ್ದ 'ನಂ.1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮದಲ್ಲಿ ದೂದ್ ಪೇಡ ದಿಗಂತ್ ಹೇಳಿದ್ದರು. ಅದರಂತೆ, ಇದೇ ವರ್ಷದ ಡಿಸೆಂಬರ್ ನಲ್ಲಿ ಸಪ್ತಪದಿ ತುಳಿಯಲು ನಟ ದಿಗಂತ್ ಮನಸ್ಸು ಮಾಡಿದ್ದಾರೆ.

  ದಿಗಂತ್ ಹಾಗೂ ಐಂದ್ರಿತಾ ರೇ ಪ್ರಣಯ ಪಕ್ಷಿಗಳು ಎಂಬ ಸಂಗತಿ ಎಲ್ಲರಿಗೂ ಗೊತ್ತಿರೋದೇ. ವರ್ಷಗಳಿಂದ ಪ್ರೀತಿಯಲ್ಲಿರುವ ಈ ಜೋಡಿ ಈ ವರ್ಷಾಂತ್ಯದಲ್ಲಿ ತಮ್ಮ ಪ್ರೇಮಕ್ಕೆ ಅಧಿಕೃತ ಮುದ್ರೆ ಹಾಕಿಸಿಕೊಳ್ಳಲು ತೀರ್ಮಾನ ಮಾಡಿದ್ದಾರೆ.

  ಇದೇ ವರ್ಷ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ದಿಗಂತ್-ಐಂದ್ರಿತಾ ರೇ! ಇದೇ ವರ್ಷ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ದಿಗಂತ್-ಐಂದ್ರಿತಾ ರೇ!

  ದಿಗಂತ್ ಹಾಗೂ ಐಂದ್ರಿತಾ ರೇ ಮದುವೆ ಡಿಸೆಂಬರ್ ನಲ್ಲಿ ಬೆಂಗಳೂರಿನಲ್ಲೇ ನಡೆಯುವ ಸಾಧ್ಯತೆ ಇದೆ. ಉಭಯ ಕುಟುಂಬಗಳು ಪರಸ್ಪರ ಮಾತುಕತೆ ನಡೆಸಿದ ಬಳಿಕ ಮದುವೆ ದಿನಾಂಕ ನಿಗದಿ ಆಗಲಿದೆ ಅಂತಾರೆ ನಟ ದಿಗಂತ್.

  ಅಂದ್ಹಾಗೆ, ದಿಗಂತ್ ಮತ್ತು ಐಂದ್ರಿತಾ ರೇ 'ಮನಸಾರೆ' ಹಾಗೂ 'ಪಾರಿಜಾತ' ಚಿತ್ರಗಳಲ್ಲಿ ಒಟ್ಟಾಗಿ ಅಭಿನಯಿಸಿದ್ದರು.

  ಯಶ್-ರಾಧಿಕಾ, ಯೋಗಿ ಸೇರಿದಂತೆ ಹಲವು ಯುವ ಕಲಾವಿದರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾಯ್ತು. ಈಗ ಅದೇ ಹಾದಿಯಲ್ಲಿ ಸಾಗಲು ದಿಗಂತ್ ಹಾಗೂ ಐಂದ್ರಿತಾ ರೇ ಸಜ್ಜಾಗಿದ್ದಾರೆ.

  English summary
  According to the latest report, Kannada Actor Diganth and Aindrita Ray to get married in December 2018.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X