ದಿಗಂತ್ ಹೊಸ ಸಿನಿಮಾ 'ಹುಟ್ಟುಹಬ್ಬದ ಶುಭಾಶಯಗಳು'
ಸ್ಯಾಂಡಲ್ ವುಡ್ ನ ದೂದ್ ಪೇಡ ದಿಗಂತ್ ವರ್ಷದ ಬಳಿಕ ಹೊಸ ಸಿನಿಮಾಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಮದುವೆ ನಂತರ ಕೊಂಚ ಬ್ರೇಕ್ ತೆಗೆದುಕೊಂಡಿದ್ದ ದಿಗಂತ್ ಈಗ ಹೊಸ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ. ಕಳೆದ ವರ್ಷ ಡಿಸೆಂಬರ್ ನಲ್ಲಿ ನಟಿ ಐಂದ್ರಿತಾ ರೇ ಜೊತೆ ಹಸೆಮಣೆ ಏರಿದ್ದರು ದಿಗಂತ್.
ಅಂದ್ಹಾಗೆ ದಿಗಂತ್ ಅಭಿನಯಿಸುತ್ತಿರುವ ಹೊಸ ಸಿನಿಮಾಗೆ 'ಹುಟ್ಟುಹಬ್ಬದ ಶುಭಾಶಯಗಳು' ಅಂತ ಟೈಟಲ್ ಇಡಲಾಗಿದೆ. ಶುಭಾಶಯ ಹೇಳುವುದನ್ನೇ ಶೀರ್ಷಿಕೆ ಇಡುವ ಮೂಲಕ ಸಿನಿಪ್ರಿಯರಲ್ಲಿ ಕುತೂಹಲ ಮೂಡಿಸಿದೆ ಸಿನಿಮಾ. 'ಕಥೆಯೊಂದು ಶುರುವಾಗಿ' ಮತ್ತು 'ಫಾರ್ಚುನರ್' ಚಿತ್ರದ ನಂತರ ದಿಗಂತ್ ಅಭಿನಯಿಸುತ್ತಿರುವ ಚಿತ್ರವಿದು.
ದಿಗಂತ್ ಹೊಸ ಚಿತ್ರವನ್ನು ಯುವ ನಿರ್ದೇಶಕ ನಾಗರಾಜ್ ಬೇತೂರ್ ನಿರ್ದೇಶನ ಮಾಡುತ್ತಿದ್ದಾರೆ. ಇನ್ನು ಈ ಚಿತ್ರಕ್ಕೆ 'ಚಮಕ್' ಮತ್ತು 'ಅಯೋಗ್ಯ' ಅಂತಹ ಸೂಪರ್ ಹಿಟ್ ಚಿತ್ರಗಳನ್ನು ನೀಡಿರುವ ನಿರ್ಮಾಪಕ ಟಿ.ಆರ್ ಚಂದ್ರಶೇಖರ್ ಬಂಡವಾಳ ಹೂಡುತ್ತಿದ್ದಾರೆ. ಸದ್ಯ ಚಿತ್ರದ ಟೈಟಲ್ ಬಿಡುಗಡೆಯಾಗಿದೆ.

'ಹುಟ್ಟುಹಬ್ಬದ ಶುಭಾಶಯಗಳು' ಕಾಮಿಡಿ ಥ್ರಿಲ್ಲರ್ ಸಿನಿಮಾವಂತೆ. ಸದ್ಯ ಟೈಟಲ್ ಅನೌನ್ಸ್ ಮಾಡಿರುವ ಚಿತ್ರತಂಡ, ಇದೇ ತಿಂಗಳ ಕೊನೆಯಲ್ಲಿ ಚಿತ್ರದ ಚಿತ್ರದ ಮುಹೂರ್ತ ಮಾಡುವ ಪ್ಲಾನ್ ಮಾಡಿಕೊಂಡಿದೆ. ಚಿತ್ರದ ಬಗ್ಗೆ ಹೆಚ್ಚೇನು ಬಿಟ್ಟುಕೊಡದ ಚಿತ್ರತಂಡ, ನಾಯಕಿ ಯಾರು, ಯಾರೆಲ್ಲಾ ಕಲಾವಿದರು ಇರಲಿದ್ದಾರೆ ಎನ್ನುವುದು ಗೊತ್ತಾಗಬೇಕಿದೆ.


Click it and Unblock the Notifications











