»   » ದಿಗಂತ್ ಮತ್ತೊಂದು ಬಾಲಿವುಡ್ ಸಿನಿಮಾದಲ್ಲಿ ಬಿಜಿ

ದಿಗಂತ್ ಮತ್ತೊಂದು ಬಾಲಿವುಡ್ ಸಿನಿಮಾದಲ್ಲಿ ಬಿಜಿ

By: ಜೀವನರಸಿಕ
Subscribe to Filmibeat Kannada

ಸ್ಯಾಂಡಲ್ ವುಡ್ ದೂದ್ ಪೇಡ ಬಾಲಿವುಡ್ ನಲ್ಲಿ ಸ್ವೀಟ್ ಸ್ವೀಟ್ ಅನ್ನಿಸಿಕೊಳ್ತಿದೆ. ಕನ್ನಡದ ಕಿಲಾಡಿ ದಿಗಂತ್ ಈಗ ಬಾಲಿವುಡ್ ನಲ್ಲೇ ಹೆಚ್ಚು ಬಿಜಿಯಾಗ್ತಿದ್ದಾರೆ. ಸ್ಯಾಂಡಲ್ ವುಡ್ ಸಿನಿಮಾಗಳನ್ನ ಕಡಿಮೆ ಮಾಡಿಕೊಳ್ತಿರೋ ದಿಗಂತ್ ಬಾಲಿವುಡ್ ಪರಪಂಚವನ್ನ ಆಯ್ಕೆ ಮಾಡಿಕೊಳ್ತಿದ್ದಾರೆ.

ಭಟ್ಟರ 'ಪರಪಂಚ' ಸಿನಿಮಾದ ಹೆಚ್ಚಿನ ಭಾಗದ ಶೂಟಿಂಗ್ ಮುಗಿಸಿರೋ ದಿಗಂತ್ ಬಾಂಬೆಯಲ್ಲಿ 'ಜೀ ಭರ್ ಕೆ ಜೀ ಲೆ' (Jee Bhar Ke Jee Le) ಅನ್ನೋ ಚಿತ್ರದ ಶೂಟಿಂಗ್ ನಲ್ಲಿದ್ದಾರೆ. ಬಾಲಿವುಡ್ ಅಂದ್ರೆ ಸಾಗರ. ಅಲ್ಲಿಗೆ ಹೋದಮೇಲೆ ಕೈಗೆ ಸಿಕ್ಕಿದಷ್ಟು ಬಾಚಿಕೊಂಡು ಬಿಡಬೇಕು. ಯಾಕಂದ್ರೆ ಸಾಗರ ಮತ್ತೆ ಯಾವ ಕ್ಷಣದಲ್ಲಿ ಅಲೆಗಳ ಜೊತೆ ನಮ್ಮನ್ನೂ ಹೊರಕ್ಕೆಸೆಯುತ್ತೋ ಗೊತ್ತಿಲ್ಲ. [ಭಟ್ಟರ 'ಪರಪಂಚ'ದಲ್ಲಿ ನಟ ದಿಗಂತ್ ಬೆತ್ತಲೆ ಓಟ]

Actor Diganth

ಇದೇ ಯೋಚನೆಯಲ್ಲಿರೋ ದಿಗಂತ್ ಬಾಲಿವುಡ್ ನಲ್ಲಿ ಸಿಕ್ಕ ಅವಕಾಶಗಳಲ್ಲಿ ಅಭಿನಯಿಸಿ ಮಿಂಚೋ ಪ್ರಯತ್ನ ಮಾಡ್ತಿದ್ದಾರೆ. '1920 ಲಂಡನ್' ಅನ್ನೋ ಬಾಲಿವುಡ್ ಚಿತ್ರ ದಿಗಂತ್ ರನ್ನ ಕೈಬೀಸಿ ಕರೆದ್ರು ಅದು ನಡೆಯಲಿಲ್ಲ.

ಕೊನೆಗೆ 'ಫಟಕ್' ಅನ್ನೋ ಸಿನಿಮಾ ಮಾಡಿದ ದಿಗಂತ್ 'ಫಟಕ್' ರಿಲೀಸ್ಗೆ ಬರ್ತಿರೋ ವೇಳೆಯಲ್ಲೇ ಮತ್ತೊಂದು ಸಿನಿಮಾದ ಶೂಟಿಂಗ್ ನಲ್ಲಿದ್ದಾರೆ. ಸದ್ಯ ಭಟ್ಟರು ಬಾಲಿವುಡ್ ಗೆ ಹೋಗಿ ವಾಪಾಸು ಬಂದ್ರು. ಆದರೆ ಭಟ್ಟರ ಗರಡಿಯಲ್ಲಿ ಬೆಳೆದ ದಿಗಂತ್ ಈಗ ಬಾಲಿವುಡ್ ನಲ್ಲಿ ಬಿಜಿಯಾಗ್ತಿದ್ದಾರೆ. ಕನ್ನಡದ ಕುವರ ದಿಗಂತ್ ಬಾಲಿವುಡ್ ನಲ್ಲೂ ಮಿಂಚಲಿ ಅನ್ನೋದು ನಮ್ಮ ವಿಶ್.

English summary
Kannada actor Diganth busy in one more Hindi movie titled as 'Jee Bhar Ke Jee Le', will be directed by debutatnt director Binoy Gandhi and produced by Nidhi dutta & Binidya Dutta under JP Dutta's new banner J. P. Gene.
Please Wait while comments are loading...