»   » 'ಪಂಚರಂಗಿ 2' ಚಿತ್ರದ ಬಗ್ಗೆ ಸತ್ಯ ಬಿಚ್ಚಿಟ್ಟ ದೂದ್ ಪೇಡ ದಿಗಂತ್

'ಪಂಚರಂಗಿ 2' ಚಿತ್ರದ ಬಗ್ಗೆ ಸತ್ಯ ಬಿಚ್ಚಿಟ್ಟ ದೂದ್ ಪೇಡ ದಿಗಂತ್

Posted By:
Subscribe to Filmibeat Kannada

ನಿರ್ದೇಶಕ ಯೋಗರಾಜ್ ಭಟ್ ಮತ್ತು ದಿಗಂತ್ ಕಾಂಬಿನೇಶನ್ ನಲ್ಲಿ ಮೂಡಿಬಂದ 'ಪಂಚರಂಗಿ' ಸಿನಿಮಾ ಹಿಟ್ ಆದ ನಂತರ 'ಪಂಚರಂಗಿ 2' ಸಿನಿಮಾ ಬರಲಿದೆ ಎಂಬ ಸುದ್ದಿ ದೊಡ್ಡದಾಗಿ ಹಬ್ಬಿತ್ತು.

ಇದೀಗ, 'ಪಂಚರಂಗಿ 2' ಬಗ್ಗೆ ನಟ ದಿಗಂತ್ ಸ್ಪಷ್ಟನೆ ನೀಡಿದ್ದಾರೆ. 'ಫಿಲ್ಮಿ ಬೀಟ್ ಕನ್ನಡ'ದೊಂದಿಗೆ ಮಾತನಾಡಿದ ದಿಗಂತ್ 'ಪಂಚರಂಗಿ' ಚಿತ್ರದ ಸೀಕ್ವೆಲ್ ಬರುವ ವಿಷಯದ ಬಗ್ಗೆ ಸತ್ಯ ಬಿಚ್ಚಿಟ್ಟಿದ್ದಾರೆ. ಮುಂದೆ ಓದಿ....

ತುಂಬ ಸುದ್ದಿಯಾಗಿದೆ

''ಪಂಚರಂಗಿ 2' ಸಿನಿಮಾದ ಬಗ್ಗೆ ಈಗ ಎಲ್ಲೆಡೆ ಸುದ್ದಿಯಾಗಿದೆ. ಈ ಬಗ್ಗೆ ಅನೇಕರು ನನಗೆ ಫೋನ್ ಮಾಡಿ ಕೇಳುತ್ತಿದ್ದಾರೆ'' - ದಿಗಂತ್, ನಟ

ಮಾತನಾಡಿದ್ದು ನಿಜ

''ಇತ್ತೀಚಿಗಷ್ಟೆ ಒಂದು ಚಿತ್ರದ ಚಿತ್ರೀಕರಣ ಸಮಯದಲ್ಲಿ ನಾನು ಮತ್ತು ಯೋಗರಾಜ್ ಭಟ್ 'ಪಂಚರಂಗಿ 2' ಸಿನಿಮಾ ಬಂದರೆ ಚೆನ್ನಾಗಿರುತ್ತೆ ಅಂತ ಮಾತನಾಡಿದ್ವಿ'' - ದಿಗಂತ್, ನಟ

ಯಾವುದೇ ಯೋಚನೆ ಇಲ್ಲ

''ಹಾಗೆ ಸುಮ್ಮನೆ ಕುಳಿತು ಮಾತನಾಡುವಾಗ 'ಪಂಚರಂಗಿ 2' ಚಿತ್ರದ ವಿಷಯ ಬಂದಿದ್ದು ನಿಜ. ಆದರೆ ಅದರ ಬಗ್ಗೆ ನಾವು ಇನ್ನೂ ಯಾವುದೇ ಯೋಚನೆ ಮಾಡಿಲ್ಲ'' ಎಂದು 'ಫಿಲ್ಮಿಬೀಟ್ ಕನ್ನಡ'ಗೆ ನಟ ದಿಗಂತ್ ಸ್ಪಷ್ಟ ಪಡಿಸಿದರು.

'ಗಾಳಿಪಟ 2' ಚಿತ್ರದಲ್ಲಿ ನಾನಿದ್ದೇನೆ.!

''ಯೋಗರಾಜ್ ಭಟ್ ನಿರ್ದೇಶನ ಮಾಡುತ್ತಿರುವ 'ಗಾಳಿಪಟ 2' ಸಿನಿಮಾದಲ್ಲಿ ನಾನು ನಟಿಸುತ್ತೇನೆ'' - ದಿಗಂತ್, ನಟ

ಸದ್ಯಕ್ಕೆ ಆ ಮಾತಿಲ್ಲ

''ಸದ್ಯ ಯೋಗರಾಜ್ ಭಟ್ ಅವರು ತಮ್ಮ 'ಮುಗುಳು ನಗೆ' ಸಿನಿಮಾದಲ್ಲಿ ಬಿಜಿ ಇದ್ದಾರೆ. ಆ ಚಿತ್ರದ ಬಳಿಕ 'ಗಾಳಿಪಟ 2' ಸಿನಿಮಾ ಶುರುವಾಗುತ್ತದೆ'' - ದಿಗಂತ್, ನಟ

ಜನರಿಗೆ ಇಷ್ಟ

'ಮುಂಗಾರು ಮಳೆ', 'ಮನಸಾರೆ', 'ಗಾಳಿಪಟ', 'ಪಂಚರಂಗಿ' ಸಿನಿಮಾ ಮಾಡಿದ್ದ ಯೋಗರಾಜ್ ಭಟ್ ಮತ್ತು ದಿಗಂತ್ ಜೋಡಿಯ ಸಿನಿಮಾಗಳು ಅಂದರೆ ಜನರಿಗೆ ಸಿಕ್ಕಾಪಟ್ಟೆ ಇಷ್ಟ.

'ಪಂಚರಂಗಿ' ಬಗ್ಗೆ

'ಪಂಚರಂಗಿ' ಸಿನಿಮಾ 2010 ರಲ್ಲಿ ರಿಲೀಸ್ ಆಗಿತ್ತು. ಈ ಚಿತ್ರದಲ್ಲಿ ನಿಧಿ ಸುಬ್ಬಯ್ಯ ದಿಗಂತ್ ಗೆ ನಾಯಕಿಯಾಗಿದ್ದು, ಅನಂತ್ ನಾಗ್ ಸಿನಿಮಾದ ಸ್ಪೆಷಲ್ ರೋಲ್ ನಲ್ಲಿ ಕಾಣಿಸಿಕೊಂಡಿದ್ದರು.

English summary
Kannada Actor Diganth Clarifies to Filmibeat Kannada about being part of Kannada Movie 'Pancharangi 2'

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada