»   » ಸ್ಯಾಂಡಲ್ ವುಡ್ ದೂದ್ ಪೇಡ ದಿಗಂತ್ ಈಗ ಕ್ರಿಕೆಟರ್

ಸ್ಯಾಂಡಲ್ ವುಡ್ ದೂದ್ ಪೇಡ ದಿಗಂತ್ ಈಗ ಕ್ರಿಕೆಟರ್

Posted By:
Subscribe to Filmibeat Kannada

ನಟ ದಿಗಂತ್ ಈಗೇನ್ಮಾಡ್ತಿದ್ದಾರೆ ಅನ್ನುವ ಪ್ರಶ್ನೆಗೆ ಉತ್ತರ 'ಪರಪಂಚ' ಮತ್ತು 'ಶಾರ್ಪ್ ಶೂಟರ್' ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಹಾಗ್ನೋಡಿದ್ರೆ, ದೂದ್ ಪೇಡ ತೆರೆ ಮೇಲೆ ಮಿಂಚಿ ಎರಡು ವರ್ಷಗಳಾಗಿವೆ.

'ಬರ್ಫಿ' ಸಿನಿಮಾ ಆದ್ಮೇಲೆ ಎರಡು ವರ್ಷಗಳಿಂದ ಎರಡೇ ಚಿತ್ರಗಳಲ್ಲಿ ಬಿಜಿಯಾಗಿರುವ ದಿಗ್ಗಿಗೆ ಈಗ ಹೊಸ ಪ್ರಾಜೆಕ್ಟ್ ಸಿಕ್ಕಿದೆ. ಇಲ್ಲಿವರೆಗೂ ಬರೀ 'ಮಿಲ್ಕಿ' ಬಾಯ್ ಆಗಿ ಮಾತ್ರ ಕಾಣಿಸಿಕೊಂಡಿದ್ದ ದಿಗಂತ್ ಈ ಚಿತ್ರದಲ್ಲಿ ಕೊಂಚ ಡಿಫರೆಂಟ್ ಆಗಿ ಕಾಣಿಸಿಕೊಳ್ಳಲಿದ್ದಾರೆ.

Diganth new movie 'Hit Wicket' to launch shortly

ಡಿಫರೆಂಟ್ ಅಂದ್ರೆ, ದಿಗಂತ್ ಈ ಚಿತ್ರದಲ್ಲಿ ಕ್ರಿಕೆಟ್ ಆಟಗಾರನಾಗಿ ಬ್ಯಾಟ್ ಹಿಡಿಯಲಿದ್ದಾರೆ. ಕ್ರಿಕೆಟರ್ ಒಬ್ಬರ ಖಾಸಗಿ ಜೀವನ ಹೇಗಿರುತ್ತೆ ಅನ್ನೋದೇ ಚಿತ್ರದ ಕಥಾಹಂದರ. ಅಂದ್ಹಾಗೆ, ಸಿನಿಮಾದ ಟೈಟಲ್ 'ಹಿಟ್ ವಿಕೆಟ್'. [ದಿಗಂತ್ ಮತ್ತೊಂದು ಬಾಲಿವುಡ್ ಸಿನಿಮಾದಲ್ಲಿ ಬಿಜಿ]

ಮೂರು ವರ್ಷಗಳ ಹಿಂದೆ ದಿಗಂತ್ ಗಾಗಿ 'ಬಿಸಿಲೆ' ಸಿನಿಮಾ ನಿರ್ದೇಶಿಸಿದ್ದ ಸಂದೀಪ್ ಗೌಡ, ಈಗ ಅದೇ ದಿಗಂತ್ ಗಾಗಿ 'ಹಿಟ್ ವಿಕೆಟ್' ರೆಡಿಮಾಡುತ್ತಿದ್ದಾರೆ. ಮೈದಾನದಲ್ಲಿ ಸಿಕ್ಸರ್ ಬಾರಿಸುವ ದಿಗಂತ್, ಚಿತ್ರದಲ್ಲಿ ಕ್ಲೀನ್ ಬೌಲ್ಡ್ ಆಗುವುದು ಅಪೂರ್ವ ರೈ ಅನ್ನುವ ಬೆಡಗಿಗೆ.

Diganth new movie 'Hit Wicket' to launch shortly

ಕಾಲಿವುಡ್ ನಲ್ಲಿ ಅರ್ಜುನ್ ಸರ್ಜಾ ಜೊತೆ ಸಿನಿಮಾ ಮಾಡಿ ಗುರುತಿಸಿಕೊಂಡಿರುವ ಅಪೂರ್ವ ರೈ ಮೂಲತಃ ಕನ್ನಡದವರೇ. ಆದರೂ, 'ಹಿಟ್ ವಿಕೆಟ್' ಅಪೂರ್ವ ನಟಿಸುತ್ತಿರುವ ಮೊದಲ ಕನ್ನಡ ಚಿತ್ರ. ಇನ್ನೂ ಇದೇ ಚಿತ್ರದ ಬಹುಮುಖ್ಯ ಪಾತ್ರವೊಂದರಲ್ಲಿ ದಿಗಂತ್ ಫೇವರಿಟ್ ಅನಂತ್ ನಾಗ್ ಕೂಡ ಕಾಣಿಸಿಕೊಳ್ಳಲಿದ್ದಾರೆ. [ದಿಗಂತ್ ಜೊತೆ ಐಂದ್ರಿತಾ ಕಬಡ್ಡಿ ಆಟ ನೋಡಿ]

ವಿಶೇಷ ಅಂದ್ರೆ, 'ಹಿಟ್ ವಿಕೆಟ್' ಚಿತ್ರಕ್ಕಾಗಿ ಮಿಥುನ್, ಗಗನ್, ವಿವೇಕ್, ಜೂಡಾ ಮತ್ತು ಅಭಿಮಾನ್ ಎನ್ನುವ ಐವರು ಸಂಗೀತ ನಿರ್ದೇಶಕರುಗಳು ಸಂಗೀತ ಸಂಯೋಜಿಸಲಿದ್ದಾರೆ. ಸದ್ಯಕ್ಕೆ ಪ್ರೀ ಪ್ರೊಡಕ್ಷನ್ ಹಂತದಲ್ಲಿರುವ 'ಹಿಟ್ ವಿಕೆಟ್'ಗೆ ಇದೇ ತಿಂಗಳ ಕೊನೆಯಲ್ಲಿ ಮುಹೂರ್ತ ಫಿಕ್ಸ್ ಆಗಿದೆ. (ಫಿಲ್ಮಿಬೀಟ್ ಕನ್ನಡ)

English summary
Kannada Actor Diganth is back with the new project titled 'Hit Wicket'. Diganth will be seen as a Cricketer in the movie, which is directed by Sandeep Gowda of 'Bisile' fame.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada