»   » ಯೋಗರಾಜ್ ಭಟ್ರ 'ಪ್ಲಸ್' ಪಾಯಿಂಟ್ ಮೈನಸ್ ಆದಾಗ...

ಯೋಗರಾಜ್ ಭಟ್ರ 'ಪ್ಲಸ್' ಪಾಯಿಂಟ್ ಮೈನಸ್ ಆದಾಗ...

Posted By:
Subscribe to Filmibeat Kannada

ನಿರ್ದೇಶಕ ಯೋಗರಾಜ್ ಭಟ್ ಗೆ ಶುಕ್ರದೆಸೆ ಶುರುವಾಗಿದ್ದು 'ಮುಂಗಾರು ಮಳೆ' ಚಿತ್ರದಿಂದ. 'ದೂದ್ ಪೇಡ' ದಿಗಂತ್ ಕೂಡ ಗಾಂಧಿನಗರದಲ್ಲಿ ಗುರುತಿಸಿಕೊಂಡಿದ್ದು, ಇದೇ ಚಿತ್ರದ ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡ ಮೇಲೆ.

ಹೀರೋ ಗಣೇಶ್ ಗಿಂತ ಹೆಚ್ಚಾಗಿ ದಿಗಂತ್ ರನ್ನ ಮೆಚ್ಚಿಕೊಂಡಿದ್ದ ಭಟ್ರು, ಅವರಿಗೆ ಸ್ಯಾಂಡಲ್ ವುಡ್ ನಲ್ಲಿ ಭದ್ರ ನೆಲೆಕಟ್ಟಿಕೊಟ್ಟರು. 'ಗಾಳಿಪಟ' ಚಿತ್ರದಲ್ಲಿ ನಾಯಕನಾಗಿ ಪ್ರಮೋಟ್ ಆದ ದಿಗ್ಗಿ, ಭಟ್ರು ಜೊತೆ 'ಮನಸಾರೆ', 'ಪಂಚರಂಗಿ', 'ಲೈಫು ಇಷ್ಟೇನೆ' ಸೇರಿದಂತೆ ಸಾಲು ಸಾಲು ಸಿನಿಮಾಗಳಲ್ಲಿ ಅಭಿನಯಿಸಿದರು. ['ಫಿಲ್ಮಿಬೀಟ್ ಕನ್ನಡ' ಉಚಿತ ಸುದ್ದಿಸಾರಂಗಿ ಸೇವೆ ಆರಂಭ]


yogaraj bhat digath

ಮುಗ್ಧ ಹುಡುಗನಂತೆ ಕಾಣುವ ದಿಗ್ಗಿಯನ್ನ 'ಮಾತಿನ ಮಲ್ಲ' ಮಾಡಿದ ಭಟ್ರು ಈಗ 'ವಾಸ್ತುಪ್ರಕಾರ' ಹೊಸ ತಂಡದೊಂದಿಗೆ ಬಿಜಿಯಾಗಿದ್ದಾರೆ. ಅಲ್ಲದೇ, ಅವರ ನಿರ್ಮಾಣದಲ್ಲಿ 'ಪ್ಲಸ್' ಸಿನಿಮಾ ಕೂಡ ರೆಡಿಯಾಗುತ್ತಿದೆ. [ಭಟ್ಟರ ಹೊಸ 'ಪರಪಂಚ'ದಲ್ಲಿ ದೂದ್ ಪೇಡ ದಿಗಂತ್]


'ಪ್ಲಸ್' ಸಿನಿಮಾದ ಮುಖ್ಯ ಭೂಮಿಕೆಯಲ್ಲಿ ಹಿರಿಯ ನಟ ಅನಂತ್ ನಾಗ್ ಇದ್ದರೂ, ನಾಯಕನ ಪಾತ್ರದಲ್ಲಿ ದಿಗಂತ್ ಕಾಣಿಸಿಕೊಳ್ಳುತ್ತಿದ್ದಾರೆ ಅಂತ ಈ ಹಿಂದೆ ಸುದ್ದಿಯಾಗಿತ್ತು.


ಈಗಲೂ, 'ಪ್ಲಸ್' ಸಿನಿಮಾದ ಹೀರೋ ದಿಗಂತ್ ಅಂತಲೇ ಅನೇಕರು ಭಾವಿಸಿದ್ದಾರೆ. ಬಹುಶಃ ಭಟ್ರು-ದಿಗಂತ್ ಕಾಂಬಿನೇಷನ್ ನಲ್ಲಿ ಬಂದ ಸಿನಿಮಾಗಳು ಈ ಊಹೆಗೆ ಕಾರಣವಾಗಿರಬಹುದು. ಆದ್ರೆ, ವಾಸ್ತವ ಇದಲ್ಲ. [ಅನಂತ್ ನಾಗ್ 'ಪ್ಲಸ್' ಆ ಇನ್ನಿಬ್ಬರು ಯಾರು?]


plus

'ಪ್ಲಸ್' ಸಿನಿಮಾದಲ್ಲಿ ದಿಗಂತ್ ನಟಿಸಿಲ್ಲ! ಈ ವಿಚಾರವನ್ನ 'ಫಿಲ್ಮಿಬೀಟ್ ಕನ್ನಡ'ಗೆ ನಿರ್ದೇಶಕ ಗಡ್ಡ ವಿಜಿ ಸ್ಪಷ್ಟಪಡಿಸಿದ್ದಾರೆ. ನಿಮ್ಮ 'ಫಿಲ್ಮಿಬೀಟ್ ಕನ್ನಡ' ಈ ಹಿಂದೆ ವರದಿ ಮಾಡಿದಂತೆ ಚೇತನ್ ಚಂದ್ರ ಲೀಡ್ ರೋಲ್ ನಲ್ಲಿದ್ದಾರೆ. ಅವರೊಂದಿಗೆ ಯುವ ನಟನೊಬ್ಬ 'ಪ್ಲಸ್' ಚಿತ್ರದ ಮೂಲಕ ಗಾಂಧಿನಗರಕ್ಕೆ ಕಾಲಿಡುತ್ತಿದ್ದಾರೆ. ['+' ಚಿತ್ರದ ಪ್ಲಸ್ ಪಾಯಿಂಟ್ ಔಟ್]


ಇಬ್ಬರ ಗ್ರ್ಯಾಂಡ್ ಎಂಟ್ರಿ ಏಪ್ರಿಲ್ 2 ರಂದು ಆಗಲಿದೆ. ಅಲ್ಲಿಗೆ ಭಟ್ರ 'ಪ್ಲಸ್' ಸಿನಿಮಾದಿಂದ ದಿಗಂತ್ ಮೈನಸ್ ಆಗಿರುವುದು ಖಚಿತ. ಆದ್ರೇನಂತೆ 'ಪರಪಂಚ', 'ಶಾರ್ಪ್ ಶೂಟರ್' ಚಿತ್ರಗಳಲ್ಲಿ ದಿಗಂತ್ ಬಿಜಿಯಾಗಿದ್ದಾರೆ. (ಫಿಲ್ಮಿಬೀಟ್ ಕನ್ನಡ)

English summary
As according to the earlier reports, Diganth was roped into play lead in Yogaraj Bhat production venture 'Plus'. But now, director Gadda Viji has confirmed that Diganth is not part of 'Plus'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada