Just In
Don't Miss!
- News
ಸಂಸತ್ ಕಟ್ಟಡದ ಮಹಾತ್ಮ ಗಾಂಧಿ ಪ್ರತಿಮೆ ತರಾತುರಿಯಲ್ಲಿ ಸ್ಥಳಾಂತರ
- Sports
ಐಎಸ್ಎಲ್: ಬೆಂಗಳೂರಿಗೆ ಸೋಲಿನ ಆಘಾತ ನೀಡಿದ ಕೇರಳ ಬ್ಲಾಸ್ಟರ್ಸ್
- Education
WAPCOS Recruitment 2021: 11 ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Finance
ಇಪ್ಪತ್ತು ದಿನದಲ್ಲಿ 47 ಪರ್ಸೆಂಟ್ ನಷ್ಟು ಏರಿಕೆ ಕಂಡ ಟಾಟಾ ಮೋಟಾರ್ಸ್ ಷೇರು
- Automobiles
ಡ್ಯುಯಲ್ ಟೋನ್ ಬಣ್ಣದ ಆಯ್ಕೆಯೊಂದಿಗೆ ರೋಡ್ ಟೆಸ್ಟಿಂಗ್ ನಡೆಸಿದ ಸಿಟ್ರನ್ ಸಿ5 ಏರ್ಕ್ರಾಸ್ ಕಾರು
- Lifestyle
ಯಾವಾಗ ಸಂಗಾತಿಗೆ ಮೋಸ ಮಾಡಿ ಅನೈತಿಕ ಸಂಬಂಧ ಬೆಳೆಸುತ್ತಾರೆ?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
'ಹೀರೋ' ವಿಜಯ್ ದೇವರಕೊಂಡಗೆ ಮೆಂಟರ್ ಆದ ನಟ ದಿಗಂತ್
ಟಾಲಿವುಡ್ ನಟ ವಿಜಯ್ ದೇವರಕೊಂಡ ಸದ್ಯ ಹೀರೋ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ರಶ್ಮಿಕಾ ಜೊತೆ ಅಭಿನಯಿಸಿರುವ 'ಡಿಯರ್ ಕಾಮ್ರೇಡ್' ಸಿನಿಮಾ ರಿಲೀಸ್ ಗೆ ಕಾಯುತ್ತಿರುವ ವಿಜಯ್ ಮುಂದಿನ ಸಿನಿಮಾಗಳಲ್ಲಿಯೂ ನಿರತರಾಗಿದ್ದಾರೆ.
ಚಿತ್ರೀಕರಣದಲ್ಲಿ ಬ್ಯುಸಿ ಇರುವ ವಿಜಯ್ ದೇವರಕೊಂಡ ಅವರಿಗೆ ಕನ್ನಡ ನಟ ದಿಗಂತ್ ಮೆಂಟರ್ ಆಗಿ ಕೆಲಸ ಮಾಡುತ್ತಿದ್ದಾರಂತೆ. ವಿಜಯ್ ಗೆ ದಿಗಂತ್ ಮೆಂಟರ್ ಅಂತ ಅಚ್ಚರಿ ಪಡಬೇಡಿ. ವಿಜಯ್ ದೇವಕೊಂಡ ಅಭಿನಯಿಸುತ್ತಿರುವ 'ಹೀರೋ' ಚಿತ್ರದಲ್ಲಿ ದಿಗಂತ್ ಕೂಡ ಕಣಿಸಿಕೊಳ್ಳುತ್ತಿದ್ದಾರೆ.
'ಹೀರೋ' ವಿಜಯ್ ದೇವರಕೊಂಡ ಸಿನಿಮಾದಲ್ಲಿ ದಿಗಂತ್
ನಾಯಕನಾಗಿ ಮೊದಲ ಬಾರಿಗೆ ಟಾಲಿವುಡ್ ಗೆ ಕಾಲಿಟ್ಟಿರುವ ದಿಗ್ಗಿ, ವಿಜಯ್ ಜೊತೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಇಬ್ಬರ ಕಾಂಬಿನೇಶನ್ ಈಗಾಗಲೆ ಕುತೂಹಲ ಕೆರಳಿಸಿದ್ದು, ದಿಗಂತ್ ಹೇಗೆ ಕಾಣಿಸಿಕೊಳ್ಳಿದ್ದಾರೆ ಎನ್ನುವುದು ಕನ್ನಡ ಚಿತ್ರಪ್ರಿಯರ ಕೌತುಕ. ಆದ್ರೆ ಈ ಬಗ್ಗೆ ದಿಗಂತ್ ಒಂದಿಷ್ಟು ಮಾಹಿತಿಯನ್ನು ಬಿಟ್ಟುಕೊಟ್ಟಿದ್ದಾರೆ.ಮುಂದೆ ಓದಿ..

ವಿಜಯ್ ಗೆ ದಿಗಂತ್ ಮೆಂಟರ್
ದಿಗಂತ್ ಮತ್ತು ವಿಜಯ್ ದೇವರಕೊಂಡ ತೆಲುಗಿನ 'ಹೀರೋ' ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಈಗಾಗಲೆ ಚಿತ್ರೀಕರಮ ಪ್ರಾರಂಭವಾಗಿದೆ. ವಿಶೇಷ ಅಂದ್ರೆ ಹೀರೋ ಸಿನಿಮಾ ಬೈಕ್ ರೇಸ್ ಬಗ್ಗೆ ಇರುವ ಸಿನಿಮಾ. ಚಿತ್ರದಲ್ಲಿ ದಿಗಂತ್ ನಾಯಕಿಯ ಅಣ್ಣ ಪಾತ್ರದಲ್ಲಿ ಕಾಣಿಸಿಕೊಳ್ಳುವ ಜೊತೆಗೆ ದೊಡ್ಡ ರೇಸಿಂಗ್ ಕಂಪೆನಿಯ ಮಾಲಿಕನಾಗಿರುತ್ತಾರಂತೆ. ಹೊಸ ರೇಸರ್ ಅನ್ನು ಹುಡುಕುತ್ತಿರುವ ದಿಗಂತ್ ಗೆ ವಿಜಯ್ ಸಿಗುತ್ತಾರೆ. ಅವರಿಗೆ ಮೆಂಟರ್ ಆಗಿ ಕೆಲಸ ಮಾಡುತ್ತಾರಂತೆ ದಿಗ್ಗಿ.

ಬೈಕ್ ಅಂದ್ರೆ ದಿಗಂತ್ ಗೆ ಪ್ರಾಣ
ಬೈಕ್ ಅಂದ್ರೆ ದಿಗಂತ್ ಗೆ ಸಖತ್ ಇಷ್ಟ. ಅದ್ರಲ್ಲೂ ರೇಸ್ ಅಂತ ಹೇಳಿದ್ರೆ ಮತ್ತಷ್ಟು ಕ್ರೇಜ್. ಹಾಗಾಗಿ ಬೈಕ್ ರೇಸ್ ಬಗ್ಗೆ ಇರುವ ಸಿನಿಮಾ ಅಂದಾಕ್ಷಣ ದೂದ್ ಪೇಡ ಸಖತ್ ಸಂತಸದಿಂದ ಒಪ್ಪಿಕೊಂಡಿದ್ದಾರಂತೆ. ಚಿತ್ರಕ್ಕಾಗಿ ಸಾಕಷ್ಟು ಟ್ರೈನಿಂಗ್ ಕೂಡ ಮಾಡಿಕೊಂಡಿದ್ರಂತೆ. ಐದು ದಿನಗಳು ಕೊಯಂಬತ್ತೂರಿನಲ್ಲಿ ದಿಗಂತ್ ಮತ್ತು ವಿಜಯ್ ಇಬ್ಬರು ರೇಸ್ ಟ್ರೈನಿಂಗ್ ಪಡೆದಿದ್ದಾರಂತೆ.
ದಿಗಂತ್ ಹೊಸ ಸಿನಿಮಾ 'ಹುಟ್ಟುಹಬ್ಬದ ಶುಭಾಶಯಗಳು'

ಬುದ್ಧ ಅಂತರಾಷ್ಟ್ರಿಯ ಸರ್ಕ್ಯೂಟ್ ನಲ್ಲಿ ಚಿತ್ರೀಕರಣ
ಹೀರೋ ಚಿತ್ರದ ಚಿತ್ರೀಕರಣ ಖ್ಯಾತ ಬೈಕ್ ರೇಸ್ ಸರ್ಕ್ಯೂಟ್ ಆದ ಉತ್ತರ ಪ್ರದೇಶದ ಬುದ್ಧ ಅಂತರಾಷ್ಟ್ರಯ ಸರ್ಕ್ಯೂಟ್ ನಲ್ಲಿ ಚಿತ್ರೀಕರಣ ಮಾಡಲಾಗಿದ್ಯಂತೆ. ಸದಾ ಬ್ಯುಸಿ ಇರುವ ಸರ್ಕ್ಯೂಟ್ ಇದಾಗಿದ್ಯಂತೆ. ಹಾಗಾಗಿ ಯಾವಾಗ ಫ್ರೀ ಇರುತ್ತೊ ಆಗ ಮಾತ್ರ ಚಿತ್ರೀಕರಣ ಮಾಡಲು ಸಾಧ್ಯವಾಗುತ್ತಂತೆ.

ಆನಂದ್ ಅಣ್ಣಾಮಲೈ ನಿರ್ದೇಶನ
ದಿಗಂತ್ ಮತ್ತು ವಿಜಯ್ ಸಿನಿಮಾಗೆ ಆನಂದ್ ಅಣ್ಣಾಮಲೈ ನಿರ್ದೇಶನ ಮಾಡುತ್ತಿದ್ದಾರೆ. ಕಾಕ ಮುಟೈ ಸಿನಿಮಾಗೆ ಸಂಭಾಷಣೆ ಬರೆದು ರಾಷ್ಟ್ರ ಪ್ರಶಸ್ತಿ ಪಡೆದಿದ್ದ ಆನಂದ್ ಮೊದಲ ಬಾರಿಗೆ ಆಕ್ಷನ್ ಕಟ್ ಹೇಳುತ್ತಿರುವ ಸಿನಿಮಾ. ಚಿತ್ರದಲ್ಲಿ ನಾಯಕಿಯಾಗಿ ಮಾಳವಿಕಾ ಮೋಹನ್ ಕಾಣಿಸಿಕೊಳ್ಳುತ್ತಿದ್ದಾರೆ. ಆದ್ರೆ ದಿಗಂತ್ ಗೆ ನಾಯಕಿ ಇರ್ತಾರಾ ಎನ್ನುವ ಬಗ್ಗೆ ಮಾಹಿತಿ ಇನ್ನು ಮಾಹಿತಿ ತಿಳಿದು ಬಂದಿಲ್ಲ.
'ಹುಟ್ಟುಹಬ್ಬದ ಶುಭಾಶಯ' ಹೇಳಲು ಬಂದ್ರು ಕವಿತಾ ಗೌಡ

ಕನ್ನಡದಲ್ಲು ಬರಲಿದೆ ಹೀರೋ
ದಿಗಂತ್ ಮತ್ತು ವಿಜಯ್ ಒಟ್ಟಿಗೆ ಮೊದಲ ಬಾರಿಗೆ ಅಭಿನಯಿಸುತ್ತರುವ 'ಹೀರೋ' ಸಿನಿಮಾ ನಾಲ್ಕು ಭಾಷೆಯಲ್ಲಿ ತೆರೆಗೆ ಬರಲಿದೆಯಂತೆ. ತೆಲುಗು,ತಮಿಳು, ಮಲಯಾಳಂ ಮತ್ತು ಕನ್ನಡ ಭಾಷೆಯಲ್ಲೂ ತೆರೆಗೆ ಬರಲಿದೆ. ವಿಜಯ್ ಅಭಿನಯದ ಡಿಯರ್ ಕಾಮ್ರೇಡ್ ಸಿನಿಮಾ ಕೂಡ ಕನ್ನಡದಲ್ಲಿ ತೆರೆಗೆ ಬರುತ್ತಿದೆ.