For Quick Alerts
  ALLOW NOTIFICATIONS  
  For Daily Alerts

  ನಟ ದಿಗಂತ್ ಜೀವನದಲ್ಲಿ ಶುರುವಾಯ್ತು ಹೊಸ ಕಥೆ

  By Pavithra
  |
  ಸ್ಯಾಂಡಲ್‌ವುಡ್‌ನಲ್ಲಿ ದಿಗಂತ್ ಕಥೆಯೊಂದು ಶುರುವಾಗಿದೆ..!! | Filmibeat Kannada

  ಸ್ಯಾಂಡಲ್ ವುಡ್ ನಲ್ಲಿ ದೂದ್ ಪೇಡಾ ಅಂತಾನೆ ಕರೆಸಿಕೊಳ್ಳುವ ನಟ ದಿಗಂತ್ ಜೀವನದಲ್ಲಿ ಹೊಸ ಕಥೆ ಶುರುವಾಗಿದೆ. ಹೌದು ಅದು ಸಿನಿಮಾ ಜೀವನದಲ್ಲಿ..ದಿಗಂತ್ ಅಭಿನಯದ ಹೊಸ ಸಿನಿಮಾ 'ಕಥೆಯೊಂದು ಶುರುವಾಗಿದೆ' ಚಿತ್ರೀಕರಣ ಮುಗಿಸಿ ತೆರೆಗೆ ಬರಲು ಸಿದ್ದವಾಗಿದೆ.

  ನಟ ರಕ್ಷಿತ್ ಶೆಟ್ಟಿ ಸಿನಿಮಾವನ್ನ ನಿರ್ಮಾಣ ಮಾಡಿದ್ದು 'ಕಥೆಯೊಂದು ಶುರುವಾಗಿದೆ' ಚಿತ್ರದ ಫಸ್ಟ್ ಲುಕ್ ಪೋಸ್ಟರ್ ನಿಂದಲೇ ಪ್ರೇಕ್ಷಕರ ಗಮನ ಸೆಳೆದಿತ್ತು. ಇಷ್ಟು ದಿನಗಳ ಕಾಲ ಜಾಹೀರಾತು ನಿರ್ದೇಶಕರಾಗಿದ್ದ ಸೀನ್ನಾ ಹೆಗ್ಡೆ ಈ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಸ್ವತಂತ್ರ ನಿರ್ದೇಶಕರಾಗಿ ಪರಿಚಯ ಆಗಲಿದ್ದಾರೆ.

  ಡಿಸೆಂಬರ್ ನಲ್ಲಿ ದಿಗಂತ್-ಐಂದ್ರಿತಾ ರೇ ಮದುವೆ.?ಡಿಸೆಂಬರ್ ನಲ್ಲಿ ದಿಗಂತ್-ಐಂದ್ರಿತಾ ರೇ ಮದುವೆ.?

  ಕಾಲಿವುಡ್ ನಟಿ ಪೂಜಾ ದೇವರಿಯಾ ಚಿತ್ರದ ನಾಯಕಿಯಾಗಿ ದಿಗಂತ್ ಜೊತೆ ಮಿಂಚಲಿದ್ದಾರೆ. 'ಒಂದು ಮೊಟ್ಟೆಯ ಕಥೆ' ಖ್ಯಾತಿಯ ನಟಿ ಶ್ರೇಯಾ ಅಂಚನ್ ಕೂಡ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು ಸಿನಿಮಾದ ಟ್ರೇಲರ್ ಮತ್ತು ಹಾಡುಗಳು ಬಿಡುಗಡೆ ಆಗಿದೆ.

  ಕಥೆಯೊಂದು ಶುರುವಾಗಿದೆ' ಲವ್‌ಸ್ಟೋರಿ ಕಥಾಹಂದರವಿರುವ ಸಿನಿಮಾ ಆಗಿದ್ದು ಚಿತ್ರದಲ್ಲಿ ಸಾಕಷ್ಟು ಹೊಸ ಅಂಶಗಳನ್ನು ಹೇಳುವ ಪ್ರಯತ್ನ ಮಾಡಿದೆಯಂತೆ ಸಿನಿಮಾತಂಡ. 'ಪಂಚರಂಗಿ' ಚಿತ್ರದ ನಂತರ ದಿಗಂತ್ ವಿಭಿನ್ನ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ ಎನ್ನುವುದು ಸಿನಿಮಾತಂಡದ ಅಭಿಪ್ರಾಯ. ಫಸ್ಟ್ ಲುಕ್ ನಿಂದ ಗಮನ ಸೆಳೆದಿರುವ ಕಥೆಯೊಂದು ಶುರುವಾಗಿದೆ ಚಿತ್ರದ ಹಾಡುಗಳನ್ನ ಕೇಳುವುದಕ್ಕೆ ಸಾಕಷ್ಟು ಕನ್ನಡ ಸ್ಟಾರ್ ಗಳು ಕಾಯುತ್ತಿರುವುದಾಗಿ ಟ್ವಿಟ್ಟರ್ ನಲ್ಲಿ ಹೇಳಿಕೊಂಡಿದ್ದಾರೆ.

  English summary
  Kannada actor Diganth strrer 'Katheyondu Shuruvagide' movie Trailer and songs release. Pooja Devi is acting as hero in the film.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X