For Quick Alerts
  ALLOW NOTIFICATIONS  
  For Daily Alerts

  'ಹೀರೋ' ವಿಜಯ್ ದೇವರಕೊಂಡ ಸಿನಿಮಾದಲ್ಲಿ ದಿಗಂತ್

  |

  ಸ್ಯಾಂಡಲ್ ವುಡ್ ನ ದೂದ್ ಪೇಡ ಖ್ಯಾತಿಯ ನಟ ದಿಗಂತ್ ಸಿನಿಮಾಗಳು ಇತ್ತೀಚಿಗೆ ತೀರ ಅಪರೂಪ ಆಗಿದೆ. 'ಕಥೆಯೊಂದು ಶುರುವಾಗಿ' ಮತ್ತು 'ಫಾರ್ಚುನರ್' ಚಿತ್ರದ ನಂತರ ದಿಗಂತ್ ಯಾವ ಸಿನಿಮಾಗಳಿಗೂ ಗ್ರೀನ್ ಸಿಗ್ನಲ್ ನೀಡಿರಲ್ಲಿಲ್ಲ. ನಟಿ ಐಂದ್ರತಾ ರೇ ಜೊತೆ ಡಿಸೆಂಬರ್ ನಲ್ಲಿ ಹಸೆಮಣೆ ಏರಿದ್ದ ದಿಗಂತ್ ಆ ನಂತರ ಸ್ವಲ್ಪ ಬ್ರೇಕ್ ಪಡೆದಿದ್ದರು.

  ಇತ್ತೀಚಿಗಷ್ಟೆ ದಿಗಂತ್ 'ಹುಟ್ಟುಹಬ್ಬದ ಶುಭಾಶಯಗಳು' ಎನ್ನುವ ಹೊಸ ಚಿತ್ರ ಒಪ್ಪಿಕೊಳ್ಳುವ ಮೂಲಕ ಮತ್ತೆ ಬಣ್ಣ ಹಚ್ಚಲು ಸಜ್ಜಾಗಿದ್ದಾರೆ. ವಿಶೇಷ ಅಂದ್ರೆ ದಿಗಂತ್ ವರ್ಷದ ಬಳಿಕ ಕನ್ನಡ ಚಿತ್ರಕ್ಕೆ ಗ್ರೀನ್ ಸಿಗ್ನಲ್ ನೀಡುವ ಜೊತೆಗೆ ಸೈಲೆಂಟ್ ಆಗಿ ಟಾಲಿವುಡ್ ಗೂ ಎಂಟ್ರಿ ಕೊಟ್ಟಿದ್ದಾರೆ.

  ಶಾಹೀದ್ ಕಪೂರ್ ಫ್ಯಾನ್ಸ್ ವಿರುದ್ಧ ದೇವರಕೊಂಡ ಫ್ಯಾನ್ಸ್ ಕೆಂಡಾಮಂಡಲ

  ಹೌದು, ದಿಗಂತ್ ಈಗ ಟಾಲಿವುಡ್ ಚಿತ್ರರಂಗದಲ್ಲೂ ಬ್ಯುಸಿಯಾಗಿದ್ದಾರೆ. ತೆಲುಗು ಖ್ಯಾತ ನಟ ವಿಜಯ್ ದೇವಕೊಂಡ ಸಿನಿಮಾದಲ್ಲಿ ದಿಗಂತ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ನಟಿ ರಶ್ಮಿಕಾ ಜೊತೆ ಎರಡು ಸಿನಿಮಾಗಳಲ್ಲಿ ಅಭಿನಯಿಸಿರುವ ವಿಜಯ್ ಈಗ ಕನ್ನಡದ ನಟ ದಿಗಂತ್ ಜೊತೆ ತೆರೆಹಂಚಿಕೊಳ್ಳುತ್ತಿದ್ದಾರೆ. ಹಾಗಾದ್ರೆ ಆ ಸಿನಿಮಾ ಯಾವುದು? ದಿಗಂತ್ ಮತ್ತು ವಿಜಯ್ ಸಿನಿಮಾದ ನಿರ್ದೇಶಕ ಯಾರು? ಮುಂದೆ ಓದಿ..

  ಹೀರೋ ಸಿನಿಮಾದಲ್ಲಿ ದಿಗಂತ್

  ಹೀರೋ ಸಿನಿಮಾದಲ್ಲಿ ದಿಗಂತ್

  ವಿಜಯ್ ದೇವರಕೊಂಡ ಅಭಿನಯದ 'ಹೀರೋ' ಸಿನಿಮಾದಲ್ಲಿ ನಟ ದಿಗಂತ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರಂತೆ. ಈ ಮೂಲಕ ದಿಗಂತ್ ಮತ್ತೆ ತೆಲುಗು ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ಈ ಮೊದಲು 'ಮುಂಗಾರುಮಳೆ' ತೆಲುಗು ರೀಮೇಕ್ 'ವಾನ' ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಕಾಲಿಟ್ಟಿದ್ದ ದಿಗಂತ್ ಅನೇಕ ವರ್ಷಗಳ ಬಳಿಕ 'ಹೀರೋ' ಚಿತ್ರದ ಮೂಲಕ ಮತ್ತೆ ಟಾಲಿವುಡ್ ನಲ್ಲಿ ಮಿಂಚಲು ಸಜ್ಜಾಗಿದ್ದಾರೆ. ಈ ಹಿಂದೆ ಬಾಲಿವುಡ್ ಗೂ ಎಂಟ್ರಿ ಕೊಡುವ ಮೂಲಕ ಹಿಂದಿ ಚಿತ್ರರಂಗದಲ್ಲೂ ಮಿಂಚಿದ್ದರು ದಿಗಂತ್.

  ವಿಜಯ್ ಜೊತೆ ದಿಗಂತ್ ಬೈಕ್ ರೇಸ್

  ವಿಜಯ್ ಜೊತೆ ದಿಗಂತ್ ಬೈಕ್ ರೇಸ್

  'ಹೀರೋ' ಸಿನಿಮಾ ಕ್ರೀಡಾಧಾರತ ಸಿನಿಮಾವಾಗಿದೆಯಂತೆ. ಈ ಚಿತ್ರದಲ್ಲಿ ವಿಜಯ್ ವೃತ್ತಿಪರ ಬೈಕ್ ರೇಸರ್ ಆಗಿ ಕಾಣಿಸಿಕೊಳ್ಳುತ್ತಿದ್ದಾರಂತೆ. ಪಾತ್ರಕ್ಕಾಗಿ ವಿಜಯ್ ಈಗಾಗಲೆ ತಯಾರಿ ಶುರು ಮಾಡಿಕೊಂಡಿದ್ದಾರೆ. ಆದ್ರೆ ದಿಗಂತ್ ಪಾತ್ರ ಹೇಗಿರಲಿದೆ ಎನ್ನುವುದು ಇನ್ನು ಬಹಿರಂಗ ಆಗಿಲ್ಲ. ಆದ್ರೆ ದಿಗಂತ್ ಹಾಗೆ ಬಂದು ಹೀಗೆ ಹೋಗುವ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ವಿಜಯ್ ಜೊತೆ ಪ್ರಮುಖ ಪಾತ್ರದಲ್ಲಿ ದೂದ್ ಪೇಡ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ.

  ದಿಗಂತ್ ಹೊಸ ಸಿನಿಮಾ 'ಹುಟ್ಟುಹಬ್ಬದ ಶುಭಾಶಯಗಳು'

  ಕನ್ನಡದಲ್ಲು ಬರಲಿದೆ ಹೀರೋ

  ಕನ್ನಡದಲ್ಲು ಬರಲಿದೆ ಹೀರೋ

  ದಿಗಂತ್ ಮತ್ತು ವಿಜಯ್ ಒಟ್ಟಿಗೆ ಮೊದಲ ಬಾರಿಗೆ ಅಭಿನಯಿಸುತ್ತರುವ 'ಹೀರೋ' ಸಿನಿಮಾ ನಾಲ್ಕು ಭಾಷೆಯಲ್ಲಿ ತೆರೆಗೆ ಬರಲಿದೆಯಂತೆ. ತೆಲುಗು,ತಮಿಳು, ಮಲಯಾಳಂ ಮತ್ತು ಕನ್ನಡ ಭಾಷೆಯಲ್ಲೂ ತೆರೆಗೆ ಬರಲಿದೆ. ರಾಷ್ಟ್ರ ಪ್ರಶಸ್ತಿ ವಿಜೇತ 'ಕಾಕ ಮುಟೈ' ಚಿತ್ರಕ್ಕೆ ಸಂಭಾಷಣೆ ಬರೆದಿದ್ದ ಆನಂದ್ ಅಣ್ಣಾಮಲೈ ಮೊದಲ ಬಾರಿಗೆ ಆಕ್ಷನ್ ಕಟ್ ಹೇಳುತ್ತಿರುವ ಸಿನಿಮಾ. ಚಿತ್ರದಲ್ಲಿ ಶಾಲಿನಿ ಪಾಂಡೆ ಹಾಗೂ ಮಾಳವಿಕಾ ಮೋಹನ್ ಇಬ್ಬರು ನಾಯಕಿಯರು ಕಾಣಿಸಿಕೊಳ್ಳುತ್ತಿದ್ದಾರೆ.

  ಅರ್ಜುನ್ ರೆಡ್ಡಿ ಮೀರಿಸುವಂತಿದೆ ಕಬೀರ್ ಸಿಂಗ್

  ಹುಟ್ಟುಹಬ್ಬದ ಶುಭಾಶಯಗಳು ಚಿತ್ರದಲ್ಲಿ ದಿಗಂತ್

  ಹುಟ್ಟುಹಬ್ಬದ ಶುಭಾಶಯಗಳು ಚಿತ್ರದಲ್ಲಿ ದಿಗಂತ್

  ದಿಗಂತ್ ಇತ್ತೀಚಿಗಷ್ಟೆ 'ಹುಟ್ಟುಹಬ್ಬದ ಶುಭಾಶಯಗಳು' ಚಿತ್ರವನ್ನು ಒಪ್ಪಿಕೊಂಡಿದ್ದರು. ಈ ಚಿತ್ರಕ್ಕೆ ಯುವ ನಿರ್ದೇಶಕ ನಾಗರಾಜ್ ಬೇತೂರ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಚಿತ್ರವನ್ನು 'ಚಮಕ್' ಮತ್ತು 'ಅಯೋಗ್ಯ' ಅಂತಹ ಸೂಪರ್ ಹಿಟ್ ಚಿತ್ರಗಳನ್ನು ನೀಡಿರುವ ನಿರ್ಮಾಪಕ ಟಿ.ಆರ್ ಚಂದ್ರಶೇಖರ್ ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರದ ಟೈಟಲ್ ಬಿಡುಗಡೆ ಮಾಡಿರುವ ಚಿತ್ರತಂಡ ಸಧ್ಯದಲ್ಲೆ ಚಿತ್ರೀಕರಣ ಪ್ರಾರಂಭಿಸಲಿದೆ. ಇದರ ಜೊತೆಗೀಗ ದಿಗಂತ್ ವಿಜಯ್ ದೇವರಕೊಂಡ ಜೊತೆ 'ಹೀರೋ' ಸಿನಿಮಾ ಚಿತ್ರೀಕರಣದಲ್ಲೂ ಭಾಗಿಯಾಗಲಿದ್ದಾರೆ.

  English summary
  Kannada actor Diganth will be sharing space with Telugu actor Vijay Devarakonda upcoming film 'Hero'. This movie is directed by Anand Annamalai.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X