»   » ದೂದ್ ಪೇಡ ದಿಗಂತ್ ಕನ್ನಡ ಚಿತ್ರಗಳು 'ಫಟಕ್'

ದೂದ್ ಪೇಡ ದಿಗಂತ್ ಕನ್ನಡ ಚಿತ್ರಗಳು 'ಫಟಕ್'

By: ಜೀವನರಸಿಕ
Subscribe to Filmibeat Kannada

ಕನ್ನಡದಲ್ಲಿ ಭರವಸೆ ಹುಟ್ಟಿಸಿದ ಹೊಸ ನಾಯಕ ನಟ ದೂದ್ ಪೇಡ ದಿಗಂತ್. ಒಂಥರಾ ಡಿಫ್ ರೆಂಟ್ ಮ್ಯಾನರಿಸಂನ ಕ್ಯಾರೆಕ್ಟರ್ ಗಳ ಮೂಲಕ ಮಿಂಚಿದ ನಟ. ಉದ್ದುದ್ದ ಫನ್ನಿ ಡೈಲಾಗ್ ಹೇಳ್ತಾ. ಅದ್ರಲ್ಲೇ ಹುಡ್ಗಿಯರನ್ನ ಕಿಚಾಯಿಸ್ತಾ ಪಟಾಯಿಸ್ತ ಮನಸಾರೆ ಮೋಡಿ ಮಾಡಿದ ಹ್ಯಾಂಡಸಮ್ ಹೀರೋ.

ಈಗ ದಿಗಂತ್ ಬಾಲಿವುಡ್ ಶೂಟಿಂಗ್ ನಲ್ಲಿ ಬಿಜಿ. 'ಫಟಕ್' ಅನ್ನೋ ಹಿಂದಿ ಸಿನಿಮಾದಲ್ಲಿ ದಿಗಂತ್ ಶಕ್ತಿ ಕಪೂರ್ ಮಗ ಸಿದ್ಧಾಂತ್ ಕಪೂರ್ ಜೊತೆ ನಟಿಸುತ್ತಿದ್ದಾರೆ. ಈ ಹಿಂದೆ '1920 ಲಂಡನ್' ಅನ್ನೋ ಬಾಲಿವುಡ್ ಹಾರರ್ ಸಿನಿಮಾಗೆ ದಿಗಂತ್ ಹೀರೋ ಅಂತ ಸುದ್ದಿಯಾಗಿತ್ತು.

ಆದರೆ ಈಗ ಆ ಟೈಟಲ್ ಮತ್ತು ಟೋಟಲ್ ಕಾನ್ಸೆಪ್ಟೇ ಬದಲಾಗಿ ಫಟಕ್ ಅಂತ ಆಗಿದೆ, ಇದು ಸ್ವಲ್ಪ ಕ್ರಿಕೆಟ್ ಗೆ ಮತ್ತು ಯೂತ್ ಸಂಬಂಧಿಸಿದ ಕಾನ್ಸೆಪ್ಟ್. ಆದರೆ ವಿಷಯ ಇದಲ್ಲ. ಬಾಲಿವುಡ್ ನಲ್ಲಿ ಮಿಂಚೋಕೆ ಹೊರಟ ದಿಗಂತ್ ರ ಬುಡವೇ ಅಲ್ಲಾಡ್ತಿದೆ.

ಏಕೆಂದರೆ ದಿಗಂತ್ ಕೈಯಲ್ಲಿ ಈಗ ಕನ್ನಡ ಸಿನಿಮಾಗಳೇ ಇಲ್ಲ. ಬಾಲಿವುಡ್ ನಲ್ಲಿ ಒಂದ್ ಸಿನಿಮಾ ಸಿಕ್ಕಬಹುದು. ಆಮೇಲೆ ಕಷ್ಟ. ಆದರೆ ಯಾವತ್ತಿದ್ರೂ ಕನ್ನಡ ಸಿನಿಮಾ ಬೇಕೇ ಬೇಕು. ಹಾಗಂತ ದಿಗಂತ್ ಕನ್ನಡ ಬಿಟ್ಟು ಹೋಗಿಲ್ಲ. ಕನ್ನಡ ಸಿನಿಮಾ ಬೇಡ ಅಂದಿಲ್ಲ. ಇತ್ತೀಚೆಗೆ ಬಂದ 'ಬರ್ಫಿ' ಸೇರಿಕೊಂಡು ಯಾವ ಸಿನಿಮಾಗಳೂ ಗೆಲ್ಲದೆ ಕಂಗೆಟ್ಟಿರೋ ದಿಗಂತ್ ಗೆ ಇದ್ದ ಒಂದು ಕನ್ನಡ ಸಿನಿಮಾ ಕೂಡ ಕೈಕೊಟ್ಟಿದೆ.

ಅದು ದಿನಕರ್ ನಿರ್ದೇಶಿಸಬೇಕಿದ್ದ 'ಒಂದೂರಲ್ಲಿ ಒಬ್ಬ ರಾಜ ಇದ್ದ' ಅನ್ನೊ ಸಿನಿಮಾ. ಈ ಸಿನಿಮಾದಲ್ಲಿ ದಿಗಂತ್ ಗೆ ಗುಳಿಕೆನ್ನೆ ಚೆಲುವೆ ರಚಿತಾರಾಮ್ ದಿಗಂತ್ ಗೆ ಜೋಡಿ ಅಂತ ಸುದ್ದಿಯಗಿತ್ತು. ಆದರೆ ಈಗ ಈ ಸಿನಿಮಾ ಮಾಡ್ತಿಲ್ಲ ಅಂದಿದ್ದಾರೆ. ದಿನಕರ್ ತೂಗುದೀಪ್. ಹಾಗಾದ್ರೆ ದಿಗಂತ್ ಕನ್ನಡ ಸಿನಿಮಾ ಕಥೆ ಏನು ಅನ್ನೋ ಚಿಂತೆ ಸ್ವತಃ ದಿಗಂತ್ ರಿಗೇ ಶುರುವಾಗಿದೆಯಂತೆ.

English summary
In these days Kannada actor Diganth getting no offers in Kannada. At present he signed one movie in Bollywood 'Phatak'.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada