For Quick Alerts
  ALLOW NOTIFICATIONS  
  For Daily Alerts

  ಭಟ್ಟರ ಹೊಸ 'ಪರಪಂಚ'ದಲ್ಲಿ ದೂದ್ ಪೇಡ ದಿಗಂತ್

  By ಜೀವನರಸಿಕ
  |

  ಗುಳಿಕೆನ್ನೆಯ ಚೆಲುವ ದೂದ್ ಪೇಡ ದಿಗಂತ್ ಎಂಥಹಾ ಸಿನಿಮಾಗಳನ್ನ ಮಾಡಿದ್ರೆ ಹಿಟ್ ಆಗುತ್ತೆ ಅನ್ನೋ ಫಾರ್ಮುಲಾ ಗೊತ್ತಿರೋದು ಬಹುಶಃ ಯೋಗರಾಜ್ ಭಟ್ಟರಿಗೆ ಮಾತ್ರ. ಈಗ ಮತ್ತೆ ದಿಗಂತ್ ಕೈ ಹಿಡಿದಿದ್ದಾರೆ ಯೋಗರಾಜ ಭಟ್ರು. ಮತ್ತೊಂದು ಸಿನಿಮಾ ಪ್ರೊಡ್ಯೂಸ್ ಮಾಡ್ತಿದ್ದಾರೆ. ಅದುವೇ 'ಪರಪಂಚ'.

  ದಿಗಂತ್ ಸಿನಿಮಾಗಳಲ್ಲಿ ಅಂತಹಾ ಸೀರಿಯಸ್ ವಿಷಯಗಳಿರಲ್ಲ. ಸಿನಿಮಾದ ಟೈಟಲ್ ಗಳೂ ಕೂಡ ಒಂಥರಾ ಸಿಂಪಲ್ ಸಿಂಪಲ್ ಆಗಿರ್ತವೆ. ದಿಗಂತ್ ಚಾಕೋಲೇಟ್ ಬಾಯ್ ಅನ್ನಿಸಿಕೊಂಡ್ರೂ ಮಾಡಿರೋ ಸಿನಿಮಾಗಳು ಚಾಕೊಲೇಟ್ ತರಹಾ ಸ್ವೀಟ್ ಸ್ವೀಟಾಗೇನೂ ಇಲ್ಲ. ಸಿನಿಮಾಗಳಲ್ಲಿ ಸ್ವಲ್ಪ ಸಾಲ್ಟ್ ಫೀಲ್ ಕೂಡ ಇರುತ್ತೆ. [ದಿಗಂತ್ ತರಹನೇ ಇರುವ ತದ್ರೂಪಿ ನಟ ಯಾರಿವ?]

  ಕೇವಲ ಒಂದು ಲವ್ ಸ್ಟೋರಿ ಮಾತ್ರವಲ್ಲದೆ ಸಿನಿಮಾದೊಳಗೆ ಏನಾದ್ರೂ ಸ್ಪೆಷಲ್ ಟ್ರೈ ಮಾಡೋದು ದಿಗಂತ್ ವಿಶೇಷತೆ. ಮನಸಾರೆ, ಲೈಫು ಇಷ್ಟೇನೆ, ಪಂಚರಂಗಿಯಂತಹಾ ಸಿನಿಮಾದಲ್ಲಿ ಕೇವಲ ಲವರ್ ಬಾಯ್ ಅಲ್ಲದೇ ಒಂದೊಂದು ತರಹದ ಟಿಪಿಕಲ್ ಪಾತ್ರಗಳನ್ನ ಮಾಡಿರೋ ಈ ಹ್ಯಾಂಡಸಮ್ ಹೀರೋ ಈಗ ಬಾಲಿವುಡ್ ಫಟಕ್ ಸಿನಿಮಾ ಮುಗಿಸಿ ಬಂದಿದ್ದಾರೆ. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]

  ದಿಗಂತ್ ಸಿನಿಮಾದಲ್ಲಿ ಹಿಟ್ ಲಿಸ್ಟ್ ತೆಗೆದ್ರೆ ಅಷ್ಟೂ ಹಿಟ್ ಸಿನಿಮಾಗಳು ಸಿಕ್ಕೋದು ಭಟ್ರ ಸಿನಿಮಾಗಳೇ ಹಾಗಾಗಿ ದಿಗಂತ್ ಗೆ ಭಟ್ರು ಲೈಫು ಇಷ್ಟೇ ಅಲ್ಲ ಅಂತ ಡಿಫ್ರೆಂಟ್ 'ಪರಪಂಚ' ತೋರಿಸ್ತಿದ್ದಾರೆ. ಅದು ಹೇಗಿರುತ್ತೋ ಯಾರಿಗ್ಗೊತ್ತು. ಆದ್ರೆ ದಿಗಂತ್ ಭಟ್ರ ಕಾಂಬಿನೇಷನ್ ಸಿನಿಮಾ ಸ್ವಲ್ಪ ಡಿಫ್ರೆಂಟಾಗಿರುತ್ತೆ ಅನ್ನೋ ನಿರೀಕ್ಷೆ ಎಲ್ಲರಿಗೂ ಇದೆ.

  English summary
  Kannada films ace director Yograj Bhat and Diganth team up again after Lifeu Ishtene. The duo's new film titled as Parpancha. The film is being produced by Yogaraj Bhat under the Yogaraj Movies Banner and is being directed by Krish Joshi. Yogaraj is also likely to be seen in a small role in the film.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X