For Quick Alerts
  ALLOW NOTIFICATIONS  
  For Daily Alerts

  ಅಮೃತ ಅಂತ ಹೇಳಿ ವಿಷ ಕೊಟ್ರೂ ಕುಡಿದು ಬಿಡ್ತಾರಂತೆ ನಟಿ ಮೇಘಾ ಶೆಟ್ಟಿ!

  |

  'ಜೊತೆಜೊತೆಯಲಿ' ಧಾರಾವಾಹಿ ಮೂಲಕ ಎಲ್ಲರ ಮನೆ ಮಾತಾಗಿರೋ ನಟಿ ಮೇಘಾ ಶೆಟ್ಟಿ. ಕಿರುತೆರೆಯಲ್ಲಿ ಯಶಸ್ಸಿನ ಉತ್ತುಂಗದಲ್ಲಿರೋ ನಟಿ ಈಗ ಸಿನಿಮಾಗಳಿಗೂ ಕಾಲಿಟ್ಟಿದ್ದಾರೆ. ಒಂದರ ಹಿಂದೊಂದು ಸಿನಿಮಾಗಳನ್ನು ಮಾಡುತ್ತಿದ್ದಾರೆ. ಅದರಲ್ಲೊಂದು ಸಿನಿಮಾ 'ದಿಲ್ ಪಸಂದ್'.

  ಈಗ 'ದಿಲ್ ಪಸಂದ್' ಸಿನಿಮಾದ ಟೀಸರ್ ಅನ್ನು ರಿಲೀಸ್ ಮಾಡಿದೆ ಚಿತ್ರತಂಡ. ಈ ಟೀಸರ್ ಬಿಡುಗಡೆ ಕಾರ್ಯಕ್ರಮದಲ್ಲಿ ಮೇಘಾ ಶೆಟ್ಟಿ ಕೂಡ ಭಾಗವಹಿಸಿದ್ದರು. ಈ ವೇಳೆ ತಮ್ಮ ಪಾತ್ರದ ಬಗ್ಗೆ ಮಾತಾಡುವಾಗ ಕೆಲವು ಇಂಟ್ರೆಸ್ಟಿಂಗ್ ವಿಷಯಗಳನ್ನು ಬಿಟ್ಟು ಕೊಟ್ಟಿದ್ದಾರೆ.

  ಸ್ಯಾಂಡಲ್‌ವುಡ್‌ನಲ್ಲಿ ಬ್ಯುಸಿಯಾದ 'ಜೊತೆ ಜೊತೆಯಲಿ' ನಟಿ ಮೇಘಾ ಶೆಟ್ಟಿಸ್ಯಾಂಡಲ್‌ವುಡ್‌ನಲ್ಲಿ ಬ್ಯುಸಿಯಾದ 'ಜೊತೆ ಜೊತೆಯಲಿ' ನಟಿ ಮೇಘಾ ಶೆಟ್ಟಿ

  ವಿಷ ಕೊಟ್ರೂ ಕುಡಿದು ಬಿಡ್ತಾರಂತೆ ನಟಿ ಮೇಘಾ ಶೆಟ್ಟಿ

  ಡಾರ್ಲಿಂಗ್ ಕೃಷ್ಣ ಪ್ರಮುಖ ಪಾತ್ರದಲ್ಲಿ ನಟಿಸಿರುವ ಸಿನಿಮಾ 'ದಿಲ್ ಪಸಂದ್'. ಇದೊಂದು ಪಕ್ಕಾ ಕಾಮಿಡಿ ಸಿನಿಮಾ. ಹೀಗಾಗಿ ನಗುವಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗಿದೆ. ಇದರಲ್ಲಿ ಇಬ್ಬರು ನಾಯಕಿಯರು. ಒಬ್ಬರು ನಿಶ್ವಿಕಾ ನಾಯ್ಡು. ಮತ್ತೊಬ್ಬರು 'ಜೊತೆಜೊತೆಯಲಿ' ಖ್ಯಾತಿಯ ಮೇಘಾ ಶೆಟ್ಟಿ.

  'ದಿಲ್ ಪಸಂದ್' ಸಿನಿಮಾದಲ್ಲಿ ಮೇಘಾ ಶೆಟ್ಟಿ ಕ್ಯಾರೆಕ್ಟರ್ ಏನು ಅನ್ನೋದನ್ನು ರಿವಿಲ್ ಮಾಡಿದ್ದಾರೆ. " ಈ ಸಿನಿಮಾದಲ್ಲಿ ನನ್ನ ಪಾತ್ರ ತುಂಬಾ ಅಂದರೆ, ತುಂಬಾನೇ ಇನ್ನೋಸೆಂಟ್. ಈಗ ಇವರು ಬಂದು ನನಗೆ ವಿಷ ಕೊಟ್ಟು ಇದು ಅಮೃತಾ ಕುಡಿ ಅಂದರೂ ಕುಡಿದು ಬಿಡುತ್ತೇನೆ. ಅಂತಹದ್ದೊಂದು ಇನ್ನೋಸೆಂಟ್ ಪಾತ್ರ ಇದರಲ್ಲಿ. ಈ ಸಿನಿಮಾ ನೀವು ಹೇಗೆ ನಗ್ತಿರೋ ಅದಕ್ಕಿಂತ ಹೆಚ್ಚಾಗಿ ಮಜಾ ಮಾಡ್ಕೊಂಡು ಈ ಸಿನಿಮಾ ಮಾಡಿದ್ದೇವೆ." ಎಂದಿದ್ದಾರೆ ಮೇಘಾ ಶೆಟ್ಟಿ.

  ಈ ಸಿನಿಮಾ ಮೇಘಾ ಶೆಟ್ಟಿಗೆ ಎರಡು ಕ್ಯಾರೆಕ್ಟರ್!

  "ನಂದು ಇನ್ನೋಸೆಂಟ್ ಕ್ಯಾರೆಕ್ಟರ್. ಕೆಲವೊಂದು ಸನ್ನಿವೇಶದಲ್ಲಿ ನನಗೆ ಕಷ್ಟ ಆಯ್ತು. ಅದನ್ನು ಈಗ ರಿವೀಲ್ ಮಾಡೋ ಹಾಗಿಲ್ಲ. ಸಿನಿಮಾ ನೋಡಿದರೆ ನಿಮಗೆ ಗೊತ್ತಾಗುತ್ತೆ. ಇದರಲ್ಲಿ ಎರಡು ಶೇಡ್ ಇದೆ. ಒಂದು ಇನ್ನೋಸೆಂಟ್, ಇನ್ನೊಂದು ಯಾವ ಶೇಡ್ ಅನ್ನೋದನ್ನು ಬಿಟ್ಟು ಕೊಡುವ ಹಾಗಿಲ್ಲ. ವೈಲೆಂಟ್ ಹೌದು. ಆದರೆ, ಅದು ಬೇರೆ ರೀತಿಯ ವೈಲೆಂಟ್. ಟೀಸರ್‌ನಲ್ಲೇ ಎರಡು ಅವತಾರವಿದೆ. ಒಂದು ಮಾಡರ್ನ್. ಇನ್ನೊಂದು ಟ್ರೆಡಿಷನ್." ಎಂದು ಪಾತ್ರದ ಬಗ್ಗೆ ರಿವೀಲ್ ಮಾಡಿದ್ದಾರೆ.

  ಇನ್ನೊಂದು ಕಡೆ ನಿಶ್ವಿಕಾ ನಾಯ್ಡು ಮಾಡರ್ನ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಹೀಗಾಗಿ ಡಾರ್ಲಿಂಗ್ ಕೃಷ್ಣಗೆ ಒಂದು ಎರಡು ಪಸಂದ್ ಇರುಬಹುದು ಅಂತ ಗೆಸ್ ಮಾಡಬಹುದು. ಇಬ್ಬರು ಲವರ್‌ಗಳಲ್ಲಿ ಡಾರ್ಲಿಂಗ್ ಪಸಂದ್ ಯಾರು ಅನ್ನೋದೇ ಸಿನಿಮಾ.

  Dil Pasand Movie Actress Megha Shetty Revealed About Her Character

  ಇದೊಂದು ಪಕ್ಕಾ ಫ್ಯಾಮಿಲಿ ಸಿನಿಮಾ

  "ಈ ಟೀಸರ್ ನೋಡಿದ್ರೆನೇ ಗೊತ್ತಾಗುತ್ತೆ. ಇದು ಯಾವ ರೀತಿ ಸಿನಿಮಾ ಅಂತ. ಇದೊಂತರ ಫನ್‌ ಫಿಲ್ಡ್‌ ಸಿನಿಮಾ ಅಂತಾನೇ ಹೇಳಬಹುದು. ಫ್ಯಾಮಿಲಿ ಕೂತು ಎಂಜಾಯ್ ಮಾಡಬಹುದಾದಂತಹ ಸಿನಿಮಾ."

  ಕಿಕ್ ಸ್ಟಾರ್ಟ್ ಲವ್ ಅಂತಲೇ ಸಬ್ ಟೈಟಲ್ ಇಟ್ಕೊಂಡಿರೋ ತಂಡಕ್ಕೆ ಅರ್ಜುನ್ ಜನ್ಯ ಸಂಗೀತವಿದೆ. ಐದು ಹಾಡುಗಳನ್ನು ಕಂಪೋಸ್ ಮಾಡಿದ್ದಾರೆ. ಶಿವ ತೇಜಸ್‌ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದು, ನವೆಂಬರ್ 11ಕ್ಕೆ ಸಿನಿಮಾ ರಿಲೀಸ್ ಆಗಲಿದೆ.

  English summary
  Dil Pasand Movie Actress Megha Shetty Revealed About Her Character, Know More.
  Monday, October 3, 2022, 23:23
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X