For Quick Alerts
  ALLOW NOTIFICATIONS  
  For Daily Alerts

  ಚಂದನವನದಲ್ಲಿ ರಂಗೇರಿದ ದಿನಕರ್ ಸೆಲ್ಫಿ ಕ್ರೇಜ್

  By ನವೀನ್ ಕುಮಾರ್.ಆರ್.ಓ
  |

  ಎಲ್ಲೆಲ್ಲೂ ಸೆಲ್ಫಿಯದ್ದೇ ಹವಾ... ಅದುವೇ ದಿನಕರ್ ತೂಗುದೀಪ ನಿರ್ದೇಶನದ 'ಲೈಫ್ ಜೊತೆ ಒಂದ್ ಸೆಲ್ಫಿ' ಚಿತ್ರದ್ದು. ಇತ್ತೀಚೆಗೆ ಚಿತ್ರತಂಡ ಸೆಲ್ಫಿ ಅಭಿಯಾನವನ್ನೇ ಪ್ರಾರಂಭಿಸಿದ್ದು ವಿಶೇಷ.

  'ಜೊತೆ ಜೊತೆಯಲಿ', 'ನವಗ್ರಹ', 'ಸಾರಥಿ'ಯಂತಹ ಬಿಗ್ ಹಿಟ್ ಹಾಗೂ ಸದಭಿರುಚಿಯ ಚಿತ್ರಗಳನ್ನು ನೀಡಿದ ದಿನಕರ್ ಗೆ ಇದು ತಮ್ಮ ನಿರ್ದೇಶನದ ನಾಲ್ಕನೇ ಚಿತ್ರ. ಚಿತ್ರಕ್ಕೆ ಸಮೃದ್ಧಿ ಮಂಜುನಾಥ್ ಅವರು ಬಂಡವಾಳ ಹೂಡಿದ್ದಾರೆ.

  ಪ್ರಜ್ವಲ್ ದೇವರಾಜ್, ನೆನಪಿರಲಿ ಪ್ರೇಮ್ ಹಾಗೂ ಹರಿಪ್ರಿಯ ಮುಖ್ಯ ಭೂಮಿಕೆಯಲ್ಲಿರುವ ಚಿತ್ರಕ್ಕೆ ಎ.ಆರ್.ನಿರಂಜನ್ ಬಾಬು ರವರ ಅದ್ಭುತ ಛಾಯಾಗ್ರಹಣವಿದೆ.

  ದರ್ಶನ್ ಸಹೋದರ ದಿನಕರ್ ದಂಪತಿಗೆ ಇಂದು ಮರೆಯಲಾಗದ ದಿನ

  ಕವಿರಾಜ್, ಜಯಂತ್ ಕಾಯ್ಕಿಣಿ, ಯೋಗರಾಜ್ ಭಟ್ ಹಾಗೂ ವಿ.ನಾಗೇಂದ್ರ ಪ್ರಸಾದ ಅವರ ಸಾಹಿತ್ಯಕ್ಕೆ ವಿ.ಹರಿಕೃಷ್ಣ ಸಂಗೀತ ಸಂಯೋಜನೆ ಮಾಡಿದ್ದಾರೆ. ಈಗಾಗಲೇ ಚಿತ್ರದ ಎಲ್ಲಾ ಹಾಡುಗಳಿಗೆ ಉತ್ತಮ ಪ್ರತಿಕ್ರಿಯೆ ದೊರೆತಿದ್ದು ಚಿತ್ರತಂಡ ಸಂತೋಷದಿಂದ ಸೆಲ್ಫಿ ಅಭಿಯಾನ ಮುಂದುವರೆಸಿದೆ.

  ಮಾನಸ ದಿನಕರ್ ಚಿತ್ರಕ್ಕೆ ಕಥೆ ಬರೆದಿದ್ದು, ಚಿಂತನ್ ರ ಸಂಭಾಷಣೆ ಹಾಗೂ ಕೆ.ಎಂ.‌ಪ್ರಕಾಶ್ ರ ಸಂಕಲನವಿದೆ.

  ಹಲವು ಕಾರಣಗಳಿಂದಾಗಿ ಚಿತ್ರವು ಕುತೂಹಲಭರಿತವಾಗಿದ್ದು ಎಲ್ಲ ವರ್ಗದ ಪ್ರೇಕ್ಷಕರ ಮನಸ್ಸನ್ನು ಸೆಳೆಯಲು ನಿಮ್ಮ ನೆಚ್ಚಿನ ಚಿತ್ರಮಂದಿರಗಳಿಗೆ ಅತೀಶೀಘ್ರದಲ್ಲಿ ಬರಲಿದೆ. ಚಿತ್ರತಂಡಕ್ಕೆ ಶುಭವಾಗಲಿ.

  English summary
  Dinakar Thoogudeepa directorial Kannada Movie 'Life jothe ondu selfie' is all set to release.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X