»   » ಬುಲೆಟ್ ಪ್ರಕಾಶ್ v/s ದಿನಕರ್ ; ಅಸಲಿಗೆ ನಿನ್ನೆ ರಾತ್ರಿ ನಡೆದದ್ದೇನು?

ಬುಲೆಟ್ ಪ್ರಕಾಶ್ v/s ದಿನಕರ್ ; ಅಸಲಿಗೆ ನಿನ್ನೆ ರಾತ್ರಿ ನಡೆದದ್ದೇನು?

Posted By:
Subscribe to Filmibeat Kannada

ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಹಾಸ್ಯ ನಟ ಬುಲೆಟ್ ಪ್ರಕಾಶ್ ಎಂತಹ ಕುಚಿಕ್ಕು ಗೆಳೆಯರು ಅನ್ನೋದು ಇಡೀ ಸ್ಯಾಂಡಲ್ ವುಡ್ ಗೆ ಗೊತ್ತಿದೆ. ಹೀಗಿರುವಾಗ, ಇದ್ದಕ್ಕಿದ್ದಂತೆ ದರ್ಶನ್ ಸಹೋದರ ದಿನಕರ್ ಮತ್ತು ಬುಲೆಟ್ ಪ್ರಕಾಶ್ ನಿನ್ನೆ ರಾತ್ರಿ ಗಲಾಟೆ ಮಾಡಿಕೊಂಡಿದ್ದಾರೆ.

ಗಲಾಟೆ ಜೀವ ಬೆದರಿಕೆವರೆಗೂ ಹೋದ ಕಾರಣ ನಟ ಬುಲೆಟ್ ಪ್ರಕಾಶ್, ನಿರ್ದೇಶಕ ದಿನಕರ್ ತೂಗುದೀಪ ಮತ್ತು ಪಿಸ್ತಾ ಸೀನ ವಿರುದ್ಧ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. [ಬುಲೆಟ್ ಪ್ರಕಾಶ್ ದೊಡ್ಡ ಸುಳ್ಳುಗಾರ; ದಿನಕರ್ ತೂಗುದೀಪ ಸಿಡಿಸಿದ ಬಾಂಬ್!]

ಘಟನೆ ಬಗ್ಗೆ ಬುಲೆಟ್ ಪ್ರಕಾಶ್ ಮತ್ತು ದಿನಕರ್ ತೂಗುದೀಪ ಆರೋಪ ಪ್ರತ್ಯಾರೋಪ ಮಾಡಿದ್ದನ್ನ ನೀವೆಲ್ಲಾ ಎಲ್ಲಾ ಮಾಧ್ಯಮಗಳಲ್ಲಿ ನೋಡಿದ್ದೀರಾ. ಆದ್ರೆ, ಅಷ್ಟಕ್ಕೂ ಇಬ್ಬರ ಮಧ್ಯೆ ನಡೆದದ್ದು ಏನು? ಪಿಸ್ತಾ ಸೀನಾ ಈ ಬಗ್ಗೆ ಏನು ಹೇಳ್ತಾರೆ ಗೊತ್ತಾ? ಅದನ್ನ ತಿಳಿಯಲು ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ ಮಾಡಿ....

ಪಿಸ್ತಾ ಸೀನ ನೀಡಿರುವ ಹೇಳಿಕೆ

''ನಾವು ಹಲ್ಲೆ ಮಾಡೋಕೆ ಹೋಗಿರ್ಲಿಲ್ಲ. ಮಗಳು ಕರ್ಕೊಂಡು ಬಂದಾಗ, ಮಾತಾಡುವುದು ಬೇಡ ಅಂತ ವಾಪಸ್ ಬಂದ್ವಿ. ಕಂಪ್ಲೇಂಟ್ ಕೊಡಲಿ ಪರ್ವಾಗಿಲ್ಲ'' - ಪಿಸ್ತಾ ಸೀನ, ದರ್ಶನ್ ಮತ್ತು ದಿನಕರ್ ಆಪ್ತ [ಕುಚಿಕು ಗೆಳೆಯರ ಗಲಾಟೆ; ಬುಲೆಟ್ ಪ್ರಕಾಶ್ ಬಾಯ್ಬಿಟ್ಟ ಸತ್ಯ]

ಮಾತನಾಡಿದ್ದು ಮಾತ್ರ

''ನಾವು ಆತ್ಮೀಯ ಸ್ನೇಹಿತರು. ಹಲ್ಲೆ ನಡೆದಿಲ್ಲ. ಮಾತನಾಡುವುದಕ್ಕೆ ಮಾತ್ರ ಹೋಗಿದ್ದು ಅಷ್ಟೆ. ಮಕ್ಕಳ ಮುಂದೆ ಮಾತನಾಡ ಬಾರದು ಅಂತ ಹೋಗಿದ್ದು. ಅವನು ಕುಡಿದು ದಿನಕರ್ ಗೆ ಬಾಯಿಗೆ ಬಂದ ಹಾಗೆ ಮಾತನಾಡಿದ್ದರಿಂದ, ಮಾತನಾಡೋಣ ಅಂತ ನಾವು ಹೋಗಿದ್ದು. ಮಗಳು ಇದ್ದಿದ್ರಿಂದ ನಾವು ಮಾತನಾಡಲಿಲ್ಲ'' - ಪಿಸ್ತಾ ಸೀನ, ದರ್ಶನ್ ಮತ್ತು ದಿನಕರ್ ಆಪ್ತ

ಬುಲೆಟ್ ಹೇಳಿದ್ದು ಸುಳ್ಳು

''ಅವರು ಹೇಳಿದ್ದು ಸುಳ್ಳು. ಯಾರೂ ಜೋರಾಗಿಯೂ ಮಾತನಾಡಿಲ್ಲ. ದೂರ-ದೂರ ನಿಂತುಕೊಂಡು ಮಾತನಾಡಿದ್ದೀವಿ'' - ಪಿಸ್ತಾ ಸೀನ, ದರ್ಶನ್ ಮತ್ತು ದಿನಕರ್ ಆಪ್ತ

ಕುಡಿದಿದ್ದರು!

''ಕುಡಿದ ಜ್ಞಾನದಲ್ಲಿ ಏನೇನೋ ಮಾತನಾಡಿದ್ದ. ಅದನ್ನ ಎದುರಿಗೆ ಮಾತನಾಡಲು ನಾವು ಹೋಗಿದ್ವಿ ಅಷ್ಟೆ. ನಾವು ಹಲ್ಲೆ ಮಾಡಿಲ್ಲ. ಬೆಳಗ್ಗೆ ಮಾತನಾಡೋಣ ಹೋಗು ಅಂತ ಕಳುಹಿಸಿ ಬಂದಿದ್ದೀವಿ'' - ಪಿಸ್ತಾ ಸೀನ, ದರ್ಶನ್ ಮತ್ತು ದಿನಕರ್ ಆಪ್ತ

ಫೋಟೋದಲ್ಲಿ

ಕಳೆದ ವಾರ ಪ್ರಸಾರವಾದ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ದರ್ಶನ್ ಆಪ್ತ ಪಿಸ್ತಾ ಸೀನ ಭಾಗವಹಿಸಿದ್ದರು. ಚಿತ್ರದಲ್ಲಿ ಪರ್ಪಲ್ ಬಣ್ಣದ ಶರ್ಟ್ ತೊಟ್ಟಿರುವವರೇ ಪಿಸ್ತಾ ಸೀನ.

English summary
Bullet Prakash has lodged complaint in Amruthahalli Police Station, Bengaluru against Director Dinakar Toogudeepa for threatening him last night (February 3rd). Along with Director Dinakar Toogudeepa, his friend Pistha Seena also reacted to this issue in the media.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada